ಬಿಜೆಪಿ ಸರ್ಕಾರ ಶ್ರೀಮಂತರ ಪರ, ಬಡವರ ಬಗ್ಗೆ ಅದು ಚಿಂತಿಸುವುದಿಲ್ಲ -ಕಪಿಲ್ ಸಿಬಲ್

ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಮಂಗಳವಾರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶ್ರೀಮಂತರ ಪರವಾಗಿದ್ದು, ಅದಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದ್ದಾರೆ.

Last Updated : Oct 22, 2019, 05:15 PM IST
ಬಿಜೆಪಿ ಸರ್ಕಾರ ಶ್ರೀಮಂತರ ಪರ, ಬಡವರ ಬಗ್ಗೆ ಅದು ಚಿಂತಿಸುವುದಿಲ್ಲ -ಕಪಿಲ್ ಸಿಬಲ್ title=

ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಮಂಗಳವಾರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶ್ರೀಮಂತರ ಪರವಾಗಿದ್ದು, ಅದಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಸಿಬಲ್, ಕೇಂದ್ರ ಸರ್ಕಾರವು ಶ್ರೀಮಂತರಿಗಾಗಿ ಇದೆ ಮತ್ತು ಬಡ ಜನರು ಪ್ರತಿದಿನ ಎದುರಿಸುತ್ತಿರುವ ಸಮಸ್ಯೆಗಳನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು. '18-31 ವರ್ಷ ವಯಸ್ಸಿನ ಜನರು, ಆ ವಯಸ್ಸಿನ ಹೆಚ್ಚು ಜನರು ಮನರೇಗಾ ಮೂಲಕ ವೇತನವನ್ನು ಬಯಸುತ್ತಿದ್ದಾರೆ ಎಂದು ಅಂಕಿ ಅಂಶ ತೋರಿಸುತ್ತದೆ. ಇದರರ್ಥ ಆ ವಯಸ್ಸಿನ ಜನರಿಗೆ ಉದ್ಯೋಗ ಸಿಗುತ್ತಿಲ್ಲ, ಇಂತಹ ವಿಚಾರಗಳ ಬಗ್ಗೆ ಈ ಸರ್ಕಾರಕ್ಕೆ ಕಾಳಜಿ ಎಲ್ಲ ಎಂದು ಸಿಬಲ್ ಹೇಳಿದರು.

ಇದಕ್ಕೂ ಮುನ್ನ ಅಭಿಜಿತ್ ಬ್ಯಾನರ್ಜಿ ಅವರನ್ನು ಎಡಪಂಥೀಯ ಎಂದು ಟೀಕಿಸಿದ ಕೇಂದ್ರ ಸಚಿವ ಪಿಯುಶ್ ಗೋಯಲ್ ವಿರುದ್ಧ ಕಪಿಲ್ ಸಿಬಲ್ ಆಕ್ರೋಶ ವ್ಯಕ್ತಪಡಿಸಿ' ಅಭಿಜಿತ್ ಬ್ಯಾನರ್ಜೀ ಅವರು ಎಡಪಂಥೀಯರಾಗಿರುವು ಅಪರಾಧವೇ? ಎಂದು ಪ್ರಶ್ನಿಸಿದ್ದರು.

Trending News