ದೆಹಲಿಯಲ್ಲಿ ಬಂಧಿತ ISIS ಉಗ್ರರು ಬಿಚ್ಚಿಟ್ಟ ಸ್ಫೋಟಕ ಮಾಹಿತಿ ಇದು

ದೆಹಲಿ-NCR ಪ್ರದೇಶ ಸೇರಿದಂತೆ ದೇಶಾದ್ಯಂತ ಇರುವ ಹಿಂದೂ ಹಾಗೂ RSS ಮುಖಂಡರನ್ನು ಗುರಿಯಾಗಿರುವ ಜವಾಬ್ದಾರಿ ತಮಗೆ ನೀಡಲಾಗಿತ್ತು ಎಂದು ಉಗ್ರರು ವಿಚಾರಣೆಯ ವೇಳೆ ಹೇಳಿದ್ದಾರೆ.

Last Updated : Jan 10, 2020, 03:51 PM IST
ದೆಹಲಿಯಲ್ಲಿ ಬಂಧಿತ ISIS ಉಗ್ರರು ಬಿಚ್ಚಿಟ್ಟ ಸ್ಫೋಟಕ ಮಾಹಿತಿ ಇದು title=

ನವದೆಹಲಿ:ದೆಹಲಿ ಪೊಲೀಸರ ವಿಶೇಷ ತಂಡ ಗುರುವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ISISನಿಂದ ಪ್ರಭಾವಿತರಾಗಿದ್ದ ಮೂವರು ಉಗ್ರರನ್ನು ಬಂಧಿಸಿದ್ದರು. ಸದ್ಯ ಈ ಮೂವರು ಉಗ್ರರ ವಿಚಾರಣೆ ಮುಂದುವರೆದಿದ್ದು, ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ವಿಚಾರಣೆಯ ವೇಳೆ ಬಾಯ್ಬಿಟ್ಟ ಈ ಉಗ್ರರು ಪೊಲೀಸರು ಹಾಗೂ ಸೇನಾ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಲು ನಮಗೆ ಆದೇಶ ನೀಡಲಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. 

ಅಷ್ಟೇ ಅಲ್ಲ ದೆಹಲಿ-NCR ಪ್ರದೇಶ ಸೇರಿದಂತೆ ದೇಶಾದ್ಯಂತ ಇರುವ ಹಿಂದೂ ಹಾಗೂ RSS ಮುಖಂಡರನ್ನು ಗುರಿಯಾಗಿರುವ ಜವಾಬ್ದಾರಿ ತಮಗೆ ನೀಡಲಾಗಿತ್ತು ಎಂದು ಉಗ್ರರು ವಿಚಾರಣೆಯ ವೇಳೆ ಹೇಳಿದ್ದಾರೆ. ದೇಶದ ಯಾವುದೆ ಭಾಗದಲ್ಲಿ ಯಾವುದೇ ಹಿಂದೂ ಮುಖಂಡನ ಪೋಸ್ಟರ್ ಕಾಣಿಸಿದರೆ ಅದನ್ನು ಆಧಾರವಾಗಿಟ್ಟುಕೊಂಡು ಮುಖಂಡರನ್ನು ಗುರಿಯಾಗಿಸಲು ಸೂಚಿಸಲಾಗಿತ್ತು ಎಂದಿದ್ದಾರೆ. ದೆಹಲಿ ಪೊಲೀಸರ ವಿಶೇಷ ತಂಡ ಇದೀಗ ಈ ಮುಖಂಡರ ಕೋಡ್ ಭಾಷೆಯನ್ನೂ ಡಿಕೋಡ್ ಮಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ಉಗ್ರರು ಕೋಡ್ ಭಾಷೆಯ ಮೂಲಕ ಸಂವಹನ ಸಾಧಿಸುತ್ತಾರೆ ಎನ್ನಲಾಗಿದೆ. 

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದ ದೆಹಲಿ ಪೋಲೀಸರ ವಿಶೇಷ ತಂಡ ಗುರುವಾರ ಈ ಉಗ್ರರನ್ನು ಬಂಧಿಸಿತ್ತು. ಈ ಮೂವರು ಉಗ್ರರು ಐಸಿಸ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದೂ ಕೂಡ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲ ಪಶ್ಚಿಮ ದೆಹಲಿಯಲ್ಲಿ ದೊಡ್ಡ ಘಟನೆಯನ್ನು ನಡೆಸಲು ಈ ಉಗ್ರರು ಸಂಚು ರೂಪಿಸಿ, ಐಸಿಸ್ ಸೂಚನೆಗಾಗಿ ಕಾಯುತ್ತಿದ್ದರು ಎನ್ನಲಾಗಿದೆ.

ಮೂಲಗಳು ನೀಡಿರುವ ಮಾಹಿತಿ ಪ್ರಕಾರ ದೆಹಲಿಯ ವಜೀರಾಬಾದ್ ನಲ್ಲಿ ಗುರುವಾರ ಬೆಳಗ್ಗೆ ನಡೆದ ಎನ್ಕೌಂಟರ್ ಬಳಿಕ ಈ ಮೂವರನ್ನು ಬಂಧಿಸಲಾಗಿತ್ತು. ಅಷ್ಟೇ ಅಲ್ಲ ಇವರ ಬಳಿಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ್ದ ದೆಹಲಿ ಪೊಲೀಸರು, ಈ ಆರೋಪಿಗಳು ನೇಪಾಳ ಮಾರ್ಗವಾಗಿ ಭಾರತಕ್ಕೆ ಅದರಲ್ಲೂ ಮುಖ್ಯವಾಗಿ ದೆಹಲಿಗೆ ಪ್ರವೇಶಿಸಿದ್ದಾರೆ ಎಂದು ಹೇಳಿದ್ದರು.

Trending News