ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಪೂರ್ಣ : ಈ ದಿನ ಹೊರಬೀಳಲಿದೆ CBSE 10th Result

CBSE Board Result 2024 Date : CBSE 10 ಮತ್ತು 12ನೇ ತರಗತಿ  ಪರೀಕ್ಷೆಗಳು ಮಾರ್ಚ್ 13ಕ್ಕೆ ಕೊನೆಗೊಂಡಿದೆ.ಇದೀಗ ಈ ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ.  

Written by - Ranjitha R K | Last Updated : Apr 19, 2024, 01:26 PM IST
  • ಫಲಿತಾಂಶಕ್ಕೆ ಕಾಯುತ್ತಿದ್ದಾರೆ 10 ನೇ ತರಗತಿ ವಿದ್ಯಾರ್ಥಿಗಳು
  • ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ
  • 10ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪೂರ್ಣ
ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಪೂರ್ಣ : ಈ ದಿನ ಹೊರಬೀಳಲಿದೆ  CBSE 10th Result title=

CBSE Board Result 2024 Date : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನ 10 ಮತ್ತು 12 ನೇ ತರಗತಿಯ 39 ಲಕ್ಷ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಇದೀಗ ಈ ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ. 10ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದೆ.12ನೇ ತರಗತಿಯ ನಾಲ್ಕು ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಇನ್ನೂ ನಡೆಯುತ್ತಿದೆ. 

ಸಿಬಿಎಸ್‌ಇ 10ನೇ-12ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15ರಿಂದ ಆರಂಭವಾಗಿದ್ದು, 10 ನೇ ತರಗತಿಯ ಪರೀಕ್ಷೆಗಳು ಮಾರ್ಚ್ 13 ರಂದು  ಕೊನೆಗೊಂಡಿದೆ. 12 ನೇ ತರಗತಿಯ ಪರೀಕ್ಷೆಗಳು ಏಪ್ರಿಲ್ 2 ರಂದು ಕೊನೆಯಾಗಿವೆ.  

ಇದನ್ನೂ ಓದಿ : Lok Sabha Election 2024: ಮೊದಲ ಹಂತದಲ್ಲಿ ಕಣದಲ್ಲಿರುವ ಅತಿ ಶ್ರೀಮಂತ ಹಾಗೂ ಬಡ ಅಭ್ಯರ್ಥಿಯ ಆಸ್ತಿ ಪ್ರಮಾಣ ಎಷ್ಟು ಗೊತ್ತೇ?

ಮೌಲ್ಯಮಾಪನ ಕಾರ್ಯಕ್ಕೆ ಸಂಬಂಧಿಸಿದ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, 10ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಬಹಳ ಹಿಂದೆಯೇ ಮುಗಿದಿದೆ.ಆದರೆ ಪ್ರಸ್ತುತ 12 ನೇ ತರಗತಿಯ  ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫರ್ಮೇಷನ್ ಪ್ರಾಕ್ಟೀಸ್ ವಿಷಯಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ. ಈ ವಿಷಯಗಳ ಪರೀಕ್ಷೆಗಳು ಮಾರ್ಚ್ ಮತ್ತು ಏಪ್ರಿಲ್ ಅಂತ್ಯದಲ್ಲಿ ನಡೆದಿತ್ತು. ಈ ಪೇಪರ್ ಗಳ  ಮೌಲ್ಯಮಾಪನ ಕಾರ್ಯವೂ ಒಂದು ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಮೌಲ್ಯಮಾಪನ ಕಾರ್ಯದೊಂದಿಗೆ ಅಂಕಗಳನ್ನು ಸಹ ಅಪ್ಲೋಡ್ ಮಾಡಬೇಕಾಗಿರುವುದರಿಂದ ಮೌಲ್ಯಮಾಪನ ಕಾರ್ಯ ಮುಗಿದ ನಂತರ, ಫಲಿತಾಂಶವನ್ನು ಕಂಪೈಲ್ ಮಾಡಲು ಮಂಡಳಿಯು ಸುಮಾರು 15 ದಿನಗಳನ್ನು ತೆಗೆದುಕೊಳ್ಳುತ್ತದೆ.ಕಳೆದ ವರ್ಷವೂ ಮಂಡಳಿಯು ಮೇ ತಿಂಗಳ ಆರಂಭದಲ್ಲಿ ಒಂದೇ ದಿನ ಎರಡೂ ತರಗತಿಗಳ ಫಲಿತಾಂಶ ಪ್ರಕಟಿಸಿತ್ತು.ಎರಡೂ ತರಗತಿಗಳ ಫಲಿತಾಂಶ ಒಂದೇ ದಿನ ಬಿಡುಗಡೆಯಾಗಲಿದೆಯೇ ಅಥವಾ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುವುದೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ : World Heritage Day : ಜೈಪುರದ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆ ಅನಾವರಣ

ಮೇ ಮೊದಲ ವಾರದಿಂದ ಎರಡನೇ ವಾರದೊಳಗೆ ಯಾವಾಗ ಬೇಕಾದರೂ ಫಲಿತಾಂಶ ಪ್ರಕಟಿಸಲು ಮಂಡಳಿ ಸಿದ್ಧತೆ ನಡೆಸಿದೆ. ಪದವಿಪೂರ್ವ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಿಯುಇಟಿ ಪ್ರವೇಶ ಪರೀಕ್ಷೆಯೂ ಮೇ 15 ರಿಂದ ಪ್ರಾರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಮಂಡಳಿಯು ಅದಕ್ಕೂ ಮುನ್ನವೇ ಫಲಿತಾಂಶ ಪ್ರಕಟಿಸಲಿದೆ. ಆದರೆ, ಫಲಿತಾಂಶದ ಕುರಿತು ಮಂಡಳಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News