Lok Sabha Election 2024: ಲೋಕಸಭಾ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಐಎಡಿಎಂಕೆ

Lok Sabha Election 2024: ಲೋಕಸಭಾ ಚುನಾವಣೆ 2024ಕ್ಕಾಗಿ ಎಐಎಡಿಎಂಕೆ ಪಕ್ಷ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಇಂದು ಪಕ್ಷದ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು. 

Written by - Yashaswini V | Last Updated : Mar 20, 2024, 12:23 PM IST
  • ಎಐಎಡಿಎಂಕೆಯ ಎಡಪ್ಪಾಡಿ ಪಳನಿಸ್ವಾಮಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ
  • ಈ ಪಟ್ಟಿಯಲ್ಲಿ ಹಿರಿಯ ಎಐಎಡಿಎಂಕೆ ನಾಯಕರು ಮತ್ತು ತಮಿಳುನಾಡಿನ ಮಾಜಿ ಸಚಿವರೂ ಕೂಡ ಸ್ಥಾನ ಪಡೆದಿದ್ದಾರೆ.
  • ಎಐಎಡಿಎಂಕೆ ತನ್ನ ಮೈತ್ರಿಕೂಟದ ಡಿಎಂಡಿಕೆ ಪಕ್ಷಕ್ಕೆ 5 ಸ್ಥಾನಗಳನ್ನು ನೀಡಲಿದೆ
Lok Sabha Election 2024: ಲೋಕಸಭಾ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಐಎಡಿಎಂಕೆ  title=

AIADMK Releases 1st List Of 16 Candidates For Lok Sabha Election 2024: 2024ರ ಲೋಕಸಭೆ ಚುನಾವಣೆಗಾಗಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 

ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದರು. 

ಇದನ್ನೂ ಓದಿ- Lok Sabha Elections: ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಿದ ಕೇಂದ್ರ ಸಚಿವ ಪಶುಪತಿ ಪಾರಸ್

ಎಐಎಡಿಎಂಕೆ  ಮೈತ್ರಿಕೂಟದಲ್ಲಿ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ)ಗೆ ಐದು ಸ್ಥಾನಗಳನ್ನು ಹಂಚಿಕೆ ಮಾಡಿದೆ. ಇದಲ್ಲದೆ, ಎಸ್‌ಡಿಪಿಐ 1 ಸ್ಥಾನ ಮತ್ತು ಪುತಿಯಾ ತಮಿಳಗಂ 1 ಸ್ಥಾನದಲ್ಲಿ ತೆಂಕಶಿ ಕ್ಷೇತ್ರದಿಂದ ಸ್ಪರ್ಧಿಸಲಿದೆ. 

ಎಐಎಡಿಎಂಕೆ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ  ಜೆ ಜಯವರ್ಧನ್ (ಚೆನ್ನೈ ದಕ್ಷಿಣ ಕ್ಷೇತ್ರ), ರಾಯಪುರಂ ಮನೋಹರ್ (ಚೆನ್ನೈ ಉತ್ತರ), ಇ ರಾಜಶೇಖರ್ (ಕಾಂಚಿಪುರಂ), ಎಎಲ್ ವಿಜಯನ್ (ಅರಕ್ಕೋಣಂ), ವಿ ಜಯಪ್ರಕಾಶ್ (ಕೃಷ್ಣಗಿರಿ), ಜಿವಿ ಗಜೇಂದ್ರನ್ (ಅರಣಿ), ಜೆ ಭಾಗ್ಯರಾಜ್ (ವಿಲ್ಲುಪುರಂ), ಪಿ ವಿಘ್ನೇಶ್ (ಸೇಲಂ), ಎಸ್ ತಮಿಳುಮಣಿ (ನಾಮಕ್ಕಲ್), ಅಶೋಕ್ ಕುಮಾರ್ (ಈರೋಡ್), ಕೆಆರ್‌ಎಲ್ ತಂಗವೇಲ್ (ಕರೂರ್), ಎಂ ಚಂದ್ರಹಾಸನ್ (ಚಿದಂಬರಂ), ಪಿ ಸರವಣನ್ (ಮಧುರೈ), ವಿಟಿ ನಾರಾಯಣಸಾಮಿ (ತೇಣಿ) ಮತ್ತು ಪಿ ಜಯಪೆರುಮಾಳ್ (ವಿರುಧುನಗರ) ಟಿಕೆಟ್ ನೀಡಲಾಗಿದೆ. 

ಇದನ್ನೂ ಓದಿ- ಸುಮಲತಾ ಅವರು ನನ್ನ ಸ್ವಂತ ಅಕ್ಕ : ಹೆಚ್‌ಡಿ ಕುಮಾರಸ್ವಾಮಿ

ಏತನ್ಮಧ್ಯೆ, ತಮಿಳುನಾಡಿನ ಆಡಳಿತ ಪಕ್ಷ  ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಹ ಲೋಕಸಭೆ ಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಡಿಎಂಕೆ ಅಧ್ಯಕ್ಷರೂ ಆಗಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಶುಕ್ರವಾರದಿಂದ ಇಂಡಿಯಾ ಬ್ಲಾಕ್‌ನ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News