Water Crisis Hits Tamil Nadu: ಬೆಂಗಳೂರಿನ ಬಳಿಕ ಈಗ ತಮಿಳುನಾಡಿನಲ್ಲಿ ನೀರಿನ ಬಿಕ್ಕಟ್ಟು

Water Crisis Hits Tamil Nadu: ಕರ್ನಾಟಕ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ನೀರಿನ ಬಿಕ್ಕಟ್ಟಿನ ಬಳಿಕ ಇದೀಗ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಸಹ ನೀರಿನ ಬಿಕ್ಕಟ್ಟು ತಲೆದೂರಿದೆ.  ಅಂತರ್ಜಲ ಮಟ್ಟದಲ್ಲಿ ಭಾರಿ ಕುಸಿತದಿಂದಾಗಿ ರಾಜ್ಯದಲ್ಲಿ ನೀರಿನ ಬಿಕ್ಕಟ್ಟು ಸಂಭವಿಸಿದೆ ಎಂದು ಜಲಸಂಪನ್ಮೂಲ ಇಲಾಖೆಯ (ಡಬ್ಲ್ಯುಆರ್‌ಡಿ) ತಿಳಿಸಿದೆ. 

Written by - Yashaswini V | Last Updated : May 9, 2024, 01:42 PM IST
  • ತಮಿಳುನಾಡಿನ ಧರ್ಮಪುರಿಯಲ್ಲಿ ಅಂತರ್ಜಲ ಲಭ್ಯವಿರುವ ಸರಾಸರಿ ಆಳವು ಕಳೆದ ಏಪ್ರಿಲ್‌ನಲ್ಲಿ 5.78 ಮೀಟರ್‌ನಿಂದ ಈ ವರ್ಷ 8.98 ಮೀಟರ್‌ಗೆ ಕುಸಿದಿದೆ.
  • ಅದೇ ರೀತಿ ನಾಮಕ್ಕಲ್ ಪ್ರದೇಶದಲ್ಲಿ ನೀರಿನ ಮಟ್ಟ 6.15 ಮೀಟರ್ ನಿಂದ 9.34 ಮೀಟರ್ ಗೆ ಕುಸಿದಿದೆ.
  • ಸೇಲಂ, ಕೃಷ್ಣಗಿರಿ ಮತ್ತು ತಿರುಪ್ಪೂರ್‌ನಂತಹ ಇತರ ಕೆಲವು ಜಿಲ್ಲೆಗಳಲ್ಲಿ ನೀರಿನ ಮಟ್ಟದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ.
Water Crisis Hits Tamil Nadu: ಬೆಂಗಳೂರಿನ ಬಳಿಕ ಈಗ ತಮಿಳುನಾಡಿನಲ್ಲಿ ನೀರಿನ ಬಿಕ್ಕಟ್ಟು title=

Tamil Nadu Water Crisis: ಕರ್ನಾಟಕದ ರಾಜಧಾನಿ ಬೆಂಗಳೂರಿನ ಬಳಿಕ ಇದೀಗ ತಮಿಳುನಾಡಿನಲ್ಲಿ ನೀರಿನ ಬಿಕ್ಕಟ್ಟು ತಲೆದೂರಿದೆ. ತಮಿಳುನಾಡಿನ ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯದ 26 ಜಿಲ್ಲೆಗಳಲ್ಲಿ ನೀರಿನ ಬಿಕ್ಕಟ್ಟಿನ ಸಮಸ್ಯೆ ಕಂಡು ಬಂದಿದೆ ಎಂದು ವರದಿಯಾಗಿದೆ. 

ತಮಿಳುನಾಡಿನ ಕೆಲವು ಪಶ್ಚಿಮ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ  ನೀರಿನ ಬಿಕ್ಕಟ್ಟಿನ (Water Crisis) ಸಮಸ್ಯೆ ತಲೆದೂರಿದೆ. ಕಳೆದ ವರ್ಷ  ಏಪ್ರಿಲ್‌ಗೆ ಹೋಲಿಸಿದರೆ 26 ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ (Groundwater Level Depletes). ಆದರೆ, ಇತರ 11 ಜಿಲ್ಲೆಗಳಲ್ಲಿ ನೀರಿನ ಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ ಎಂದು ಜಲಸಂಪನ್ಮೂಲ ಇಲಾಖೆಯ (ಡಬ್ಲ್ಯುಆರ್‌ಡಿ) ತಿಳಿಸಿದೆ.

ಇದನ್ನೂ ಓದಿ- ಭೂಪಾಲ್ ನಿಂದ ಮುಂಬೈ, ಅಯೋಧ್ಯೆಗೆ ಚಲಿಸುವ ವಂದೇ ಭಾರತ್ ಸ್ಲೀಪರ್ ರೈಲಿನ ಸಂಪೂರ್ಣ ವಿವರ ಇಲ್ಲಿದೆ

ತಮಿಳುನಾಡಿನ ಈ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿತ (Depletion of ground water level in these areas of Tamil Nadu): 
ಜಲಸಂಪನ್ಮೂಲ ಇಲಾಖೆಯ (ಡಬ್ಲ್ಯುಆರ್‌ಡಿ) ನೀಡಿರುವ ಅಂಕಿ-ಅಂಶಗಳ ಪ್ರಕಾರ, ತಮಿಳುನಾಡಿನ (TamilNadu) ಧರ್ಮಪುರಿಯಲ್ಲಿ ಅಂತರ್ಜಲ ಲಭ್ಯವಿರುವ ಸರಾಸರಿ ಆಳವು ಕಳೆದ ಏಪ್ರಿಲ್‌ನಲ್ಲಿ 5.78 ಮೀಟರ್‌ನಿಂದ ಈ ವರ್ಷ 8.98 ಮೀಟರ್‌ಗೆ ಕುಸಿದಿದೆ. ಅದೇ ರೀತಿ ನಾಮಕ್ಕಲ್ ಪ್ರದೇಶದಲ್ಲಿ  ನೀರಿನ ಮಟ್ಟ 6.15 ಮೀಟರ್ ನಿಂದ 9.34 ಮೀಟರ್ ಗೆ ಕುಸಿದಿದೆ. ಸೇಲಂ, ಕೃಷ್ಣಗಿರಿ ಮತ್ತು ತಿರುಪ್ಪೂರ್‌ನಂತಹ ಇತರ ಕೆಲವು ಜಿಲ್ಲೆಗಳಲ್ಲಿ ನೀರಿನ ಮಟ್ಟದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ.

ತಮಿಳುನಾಡಿನಲ್ಲಿ ನೀರಿನ ಬಿಕ್ಕಟ್ಟು ಪೀಡಿತ ಜಿಲ್ಲೆಗಳು (Water Crisis: List of Affected Districts): 
ಧರ್ಮಪುರಿ, ನಾಮಕ್ಕಲ್ ಹೊರತುಪಡಿಸಿ ಕೊಯಮತ್ತೂರು ಅತಿ ಹೆಚ್ಚು ಹಾನಿಗೊಳಗಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟ 9.4 ಮೀಟರ್‌ನಿಂದ 10.85 ಮೀಟರ್‌ಗೆ ಕುಸಿದಿದೆ. ಚೆನ್ನೈ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟದಲ್ಲಿ 0.5 ಮೀಟರ್ ಕುಸಿತಕ್ಕೆ ಸಾಕ್ಷಿಯಾಗಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ- ಕೇರಳದಲ್ಲಿ ವೆಸ್ಟ್ ನೈಲ್ ಫಿವರ್ ಪತ್ತೆ !

ತಮಿಳುನಾಡು ವಿವಸಾಯಿಗಲ್ ಮುನ್ನೇತ್ರ ಕಳಗಂ ಪ್ರಧಾನ ಕಾರ್ಯದರ್ಶಿ ಕೆ ಬಾಲಸುಬ್ರಮಣಿ, ನೀರಿನ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಶೇಂಗಾ, ತೆಂಗು ಮತ್ತು ಇತರ ವಾಣಿಜ್ಯ ಬೆಳೆಗಳನ್ನು ಸಾಮಾನ್ಯವಾಗಿ ವರ್ಷವಿಡೀ ಬೆಳೆಯುವ ಪಶ್ಚಿಮ ಭಾಗದ ರೈತರ ಮೇಲೆ ನೀರಿನ ಬಿಕ್ಕಟ್ಟು ಹೆಚ್ಚು ಪರಿಣಾಮ ಬೀರಿದೆ. ನೀರಿನ ಕೊರತೆಯಿಂದಾಗಿ ರೈತರು ಬೆಳೆ ಬಿತ್ತನೆಯನ್ನೇ ಮಾಡಿಲ್ಲ. ಮೆಟ್ಟೂರು ಅಣೆಕಟ್ಟೆಯಲ್ಲಿ ನೀರಿಲ್ಲದೆ ಡ್ಯಾಮ್ ಸಂಪೂರ್ಣವಾಗಿ ಬಟ್ಟಿಹೋಗಿದೆ ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News