Fake Covid report: ಮುಂಬೈ ವಿಮಾನ ನಿಲ್ದಾಣದಲ್ಲಿ ದುಬೈಗೆ ಹೊರಟಿದ್ದ 40 ಪ್ರಯಾಣಿಕರಿಗೆ ತಡೆ

Fake Covid report: ದುಬೈಗೆ ಹೊರಟಿದ್ದ 40 ಪ್ರಯಾಣಿಕರು ಸಲ್ಲಿಸಿದ ಕ್ಷಿಪ್ರ  RT-PCR ಪರೀಕ್ಷಾ ವರದಿಗಳಲ್ಲಿನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಸಂಬಂಧಿಸಿದ ಪ್ರಯಾಣಿಕರಿಗೆ ಹೊಂದಿಕೆಯಾಗದ ಕಾರಣ ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ.

Written by - Zee Kannada News Desk | Last Updated : Nov 27, 2021, 07:43 PM IST
  • ನಕಲಿ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿ (Fake Covid report) ಸಲ್ಲಿಸಿದ್ದಕ್ಕಾಗಿ ದುಬೈಗೆ ತೆರಳುತ್ತಿದ್ದ ಸುಮಾರು 40 ಪ್ರಯಾಣಿಕರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ತಡೆಹಿಡಿಯಲಾಗಿದೆ.
Fake Covid report: ಮುಂಬೈ ವಿಮಾನ ನಿಲ್ದಾಣದಲ್ಲಿ ದುಬೈಗೆ ಹೊರಟಿದ್ದ 40 ಪ್ರಯಾಣಿಕರಿಗೆ ತಡೆ title=
ಸಾಂದರ್ಭಿಕ ಚಿತ್ರ

ಮುಂಬೈ: ನಕಲಿ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿ (Fake Covid report) ಸಲ್ಲಿಸಿದ್ದಕ್ಕಾಗಿ ದುಬೈಗೆ ತೆರಳುತ್ತಿದ್ದ ಸುಮಾರು 40 ಪ್ರಯಾಣಿಕರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ತಡೆಹಿಡಿಯಲಾಗಿದೆ.

ಈ ಘಟನೆ ನವೆಂಬರ್ 12 ರಂದು ಸಂಭವಿಸಿದೆ. ಭಾರತದಿಂದ ದುಬೈಗೆ ಹೋಗುವ ಪ್ರಯಾಣಿಕರು ಎರಡು RT-PCR ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ಒಂದು ನಿರ್ಗಮನದ 48 ಗಂಟೆಗಳ ಒಳಗೆ ಮತ್ತು ಇನ್ನೊಂದು, ಕ್ಷಿಪ್ರ RT-PCR ಪರೀಕ್ಷೆ, ಇದು ನಿರ್ಗಮನದ ಆರು ಗಂಟೆಗಳ ಒಳಗೆ ಮಾಡಬೇಕಾಗಿದೆ. 

ಇದನ್ನೂ ಓದಿ : ಈ 5 ರಾಶಿಯವರು ಬೇರೊಬ್ಬರ ಬಗ್ಗೆ ಸದಾ ಚಾಡಿ ಹೇಳುತ್ತಲೇ ಇರುತ್ತಾರೆ..!

ಸಾಮಾನ್ಯ RT-PCR ಪರೀಕ್ಷೆಯು 1,000 ರೂ.ಗಿಂತ ಕಡಿಮೆಯಿದ್ದರೆ, 13 ನಿಮಿಷಗಳಲ್ಲಿ ವರದಿಯನ್ನು ನೀಡುವ ತಂತ್ರಜ್ಞಾನವನ್ನು ಬಳಸುವ ಕ್ಷಿಪ್ರ RT-PCR ಪರೀಕ್ಷೆಯು ಪ್ರತಿಯೊಂದಕ್ಕೆ 4,500 ರೂ.ಇರಲಿದೆ.

ಇದನ್ನೂ ಓದಿ : "ರೈತರ ಬೇಡಿಕೆ ಈಡೇರುವರೆಗೆ ಚಳುವಳಿ ಮುಂದುವರೆಯಲಿದೆ"

ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ, ಪ್ರಯಾಣಿಕರು ಸ್ಕ್ಯಾನ್ ಮಾಡಲು ಸಾಕಷ್ಟು ಸ್ಪಷ್ಟವಾಗಿರುವ QR ಕೋಡ್‌ಗಳೊಂದಿಗೆ ಪರೀಕ್ಷಾ ವರದಿಗಳನ್ನು ಸಲ್ಲಿಸಬೇಕು.ಈ ಪ್ರಯಾಣಿಕರು ಸಲ್ಲಿಸಿದ ಕ್ಷಿಪ್ರ  RT-PCR ಪರೀಕ್ಷಾ ವರದಿಗಳಲ್ಲಿನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಸಂಬಂಧಿಸಿದ ಪ್ರಯಾಣಿಕರಿಗೆ ಹೊಂದಿಕೆಯಾಗದ ಮಾಹಿತಿಯನ್ನು ಅದು ಬಹಿರಂಗಪಡಿಸಿದೆ ಎಂದು ವಿಮಾನ ನಿಲ್ದಾಣದ ಮೂಲವೊಂದು ತಿಳಿಸಿದೆ. ಆದ ಕಾರಣ ಪ್ರಯಾಣಿಕರ ವಿಮಾನಯಾನವನ್ನು ತಡೆಹಿಡಿಯಲಾಗಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

 

Trending News