ಜೂನ್ 1 ರಿಂದ 200 ವಿಶೇಷ ಪ್ಯಾಸೆಂಜರ್ ರೈಲುಗಳ ಸಂಚಾರ ಪ್ರಾರಂಭ..!

ಭಾರತೀಯ ರೈಲ್ವೆ 200 ವಿಶೇಷ ಪ್ಯಾಸೆಂಜರ್ ರೈಲುಗಳನ್ನು ಜೂನ್ 1 ರಿಂದ ಪ್ರಾರಂಭಿಸಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಂಗಳವಾರ  ಪ್ರಕಟಿಸಿದ್ದಾರೆ.

Last Updated : May 19, 2020, 11:05 PM IST
ಜೂನ್ 1 ರಿಂದ 200 ವಿಶೇಷ ಪ್ಯಾಸೆಂಜರ್ ರೈಲುಗಳ ಸಂಚಾರ ಪ್ರಾರಂಭ..! title=

ನವದೆಹಲಿ: ಭಾರತೀಯ ರೈಲ್ವೆ 200 ವಿಶೇಷ ಪ್ಯಾಸೆಂಜರ್ ರೈಲುಗಳನ್ನು ಜೂನ್ 1 ರಿಂದ ಪ್ರಾರಂಭಿಸಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಂಗಳವಾರ  ಪ್ರಕಟಿಸಿದ್ದಾರೆ.

ಈ ರೈಲುಗಳು ಹವಾನಿಯಂತ್ರಿತ ಎರಡನೇ ದರ್ಜೆಯ ಬೋಗಿಗಳನ್ನು ಹೊಂದಿರುತ್ತವೆ ಮತ್ತು ಪ್ರತಿದಿನ ಚಲಿಸುತ್ತವೆ. ದೆಹಲಿಗೆ 15 ಪ್ರಮುಖ ನಗರಗಳನ್ನು ಸಂಪರ್ಕಿಸುವ ರಾಜಧಾನಿ ಮಾರ್ಗಗಳಲ್ಲಿ ಪ್ರಸ್ತುತ ಚಾಲನೆಯಲ್ಲಿರುವ ಶ್ರಮಿಕ್ ಸ್ಪೆಷಲ್ ಮತ್ತು ಹವಾನಿಯಂತ್ರಿತ ವಿಶೇಷ ರೈಲುಗಳ ಜೊತೆಗೆ ಅವುಗಳಿಗೆ ಚಾಲನೆ ನೀಡಲಾಗುವುದು.

ಆನ್‌ಲೈನ್ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಶೀಘ್ರದಲ್ಲೇ ವೇಳಾಪಟ್ಟಿಯನ್ನು ಸಹ ನೀಡಲಾಗುವುದು ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.

ಈ ರೈಲುಗಳು ಯಾವ ಮಾರ್ಗಗಳಲ್ಲಿ ಚಲಿಸುತ್ತವೆ ಎಂಬುದನ್ನು ರೈಲ್ವೆ ಇನ್ನೂ ತಿಳಿಸಿಲ್ಲವಾದರೂ, ಸಣ್ಣ ಪಟ್ಟಣಗಳು ​​ಮತ್ತು ನಗರಗಳನ್ನು ಸಂಪರ್ಕಿಸಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ 200 ರೈಲುಗಳನ್ನು ಪ್ರಾರಂಭಿಸುವ ಕ್ರಮವು ವಲಸಿಗರಿಗೆ ಶ್ರಮಿಕ್ ವಿಶೇಷ ರೈಲುಗಳಲ್ಲಿ ಹತ್ತಲು ಸಾಧ್ಯವಾಗದಿದ್ದರೆ ಈ ರೈಲುಗಳ ಮೂಲಕ ಹೋಗಲು ಸಹಕಾರಿಯಾಗುತ್ತದೆ ಎಂದು ರೈಲ್ವೆ ಹೇಳಿದೆ.ರೈಲ್ವೆ ತನ್ನ ಸಾಮಾನ್ಯ ಪ್ರಯಾಣಿಕರ ಸೇವೆಗಳನ್ನು ಜೂನ್ 30 ರವರೆಗೆ ರದ್ದುಗೊಳಿಸಿದೆ

Trending News