ಈ ಕೆಲಸದಿಂದಾಗಿ ತನ್ನದೇ ದಾಖಲೆ ಮುರಿದ ರೈಲ್ವೆ

ಇದಕ್ಕೂ ಮೊದಲು ಈ ಕಾರ್ಖಾನೆ ಎಪ್ರಿಲ್ 19ರಂದು ಒಂದೇ ದಿನದಲ್ಲಿ 1003 ಕವರ್ ಆಯಿಲ್ಸ್ (PPE kit) ತಯಾರಿಸುವ ಮೂಲಕ ದಾಖಲೆ ಮಾಡಲಾಗಿದೆ.

Last Updated : Apr 27, 2020, 10:15 AM IST
ಈ ಕೆಲಸದಿಂದಾಗಿ ತನ್ನದೇ ದಾಖಲೆ ಮುರಿದ ರೈಲ್ವೆ title=

ನವದೆಹಲಿ: ಇದೀಗ ಇಡೀ ವಿಶ್ವವೇ ಕರೋನಾವೈರಸ್ (Coronavirus)  ಸೋಂಕಿನ ವಿರುದ್ಧ ಹೋರಾಡುತ್ತಿದ್ದು ಭಾರತ ಕೂಡ ಹಿಂದೆ ಉಳಿದಿಲ್ಲ. ಈ ಹೋರಾಟದಲ್ಲಿ ಪ್ರತಿ ಇಲಾಖೆಯೂ ತನ್ನದೇ ಆದ ರೀತಿಯಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸಹಕರಿಸುತ್ತಿದ್ದು  ಭಾರತೀಯ ರೈಲ್ವೆ (Indian Railway) ಕೂಡ ಗಮನಾರ್ಹ ಕೊಡುಗೆ ನೀಡುತ್ತಿದೆ. ಭಾರತೀಯ ರೈಲ್ವೆಯ ಉತ್ತರ ರೈಲ್ವೆ ವಲಯದ ಕಾರ್ಖಾನೆಯೊಂದು ಭಾನುವಾರ (ಎಪ್ರಿಲ್ 26) ಪಿಪಿಇ ಕಿಟ್ ತಯಾರಿಸುವಲ್ಲಿ ತನ್ನದೇ ಆದ ದಾಖಲೆಯನ್ನು ಮುರಿಯಿತು. ಏಪ್ರಿಲ್ 26 ರಂದು ಈ ಕಾರ್ಖಾನೆಯಲ್ಲಿ 1500 ಪಿಪಿಇ ಕಿಟ್ ತಯಾರಿಸಲಾಯಿತು. ಇದಕ್ಕೂ ಮೊದಲು ಈ ಕಾರ್ಖಾನೆ ಎಪ್ರಿಲ್ 19ರಂದು ಒಂದೇ ದಿನದಲ್ಲಿ 1003 ಕವರ್ ಆಯಿಲ್ಸ್ (PPE kit) ತಯಾರಿಸುವ ಮೂಲಕ ದಾಖಲೆ ಮಾಡಲಾಗಿದೆ.

* ದಿನಕ್ಕೆ 2000 ಕಿಟ್‌ಗಳನ್ನು ತಯಾರಿಸುವ ಗುರಿ:
ದೇಶದ ವೈದ್ಯರು ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ನೌಕರರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಉತ್ತರ ರೈಲ್ವೆ ದಿನಕ್ಕೆ ಸುಮಾರು 1000 PPE kit ತಯಾರಿಸುವ ಗುರಿಯನ್ನು ಹೊಂದಿದೆ. ಈ ಸಮಯದಲ್ಲಿ ದೇಶಕ್ಕೆ ದೊಡ್ಡ ಪ್ರಮಾಣದ ಪಿಪಿಇ ಕಿಟ್ ಅಗತ್ಯವಿದ್ದು ಪಿಪಿಇ ಕಿಟ್ ತಯಾರಿಕೆ ಬಹಳ ಸಹಾಯಕವಾಗಿದೆಯೆಂದು ಸಾಬೀತುಪಡಿಸುತ್ತದೆ. ಉತ್ತರ ರೈಲ್ವೆಯ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ (ಸಿಎಮ್ಇ) ಅರುಣ್ ಅರೋರಾ ಅವರ ಪ್ರಕಾರ ಪ್ರಸ್ತುತ ಇಡೀ ಜಗತ್ತಿನಲ್ಲಿ ಪಿಪಿಇ ಕಿಟ್ ಕೊರತೆಯಿದೆ. ಅಂತಹ ಪರಿಸ್ಥಿತಿಯಲ್ಲಿ ಉತ್ತರ ರೈಲ್ವೆಯ ಜಗಧ್ರಿ ಕಾರ್ಯಾಗಾರದಲ್ಲಿ ಪಿಪಿಇ ಕಿಟ್ ತಯಾರಿಸುವುದು ಕರೋನಾ ವಿರುದ್ಧದ ಹೋರಾಟದಲ್ಲಿ ಬಹಳ ಸಹಾಯಕವಾಗಿದೆ. ಏಪ್ರಿಲ್ 26 ರಂದು ಕಾರ್ಯಾಗಾರದಲ್ಲಿ 1500 ಕಿಟ್‌ಗಳನ್ನು ತಯಾರಿಸಲಾಗಿದ್ದು, ಇದು ಸ್ವತಃ ಒಂದು ದಾಖಲೆಯಾಗಿದೆ. ಮೇ ವೇಳೆಗೆ ಇದನ್ನು ದಿನಕ್ಕೆ 2000ಕ್ಕೆ ಕೊಂಡೊಯ್ಯುವ ಗುರಿ ಹೊಂದಿದೆ. ರೈಲ್ವೆ ಸಿದ್ಧಪಡಿಸುವ ಕಿಟ್‌ನ ಬೆಲೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿಟ್‌ನ ಬೆಲೆಯ ಅರ್ಧದಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

* ಆರೋಗ್ಯ ಕಾರ್ಯಕರ್ತರಿಗೆ ಸಹಾಯ ಮಾಡಲು ತೆಗೆದುಕೊಂಡ ಪ್ರಮುಖ ಕ್ರಮಗಳು:
ಭಾರತದಲ್ಲಿ ಕೊರೊನಾವೈರಸ್  ಕೋವಿಡ್-19 (Covid-19)   ಹರಡುವಿಕೆಯನ್ನು ತಡೆಗಟ್ಟಲು ದೇಶದ ವೈದ್ಯರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ವೈದ್ಯರಿಗೆ ಸಹಾಯ ಮಾಡಲು ಭಾರತೀಯ ರೈಲ್ವೆ ತನ್ನ ಕಾರ್ಯಾಗಾರದಲ್ಲಿ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ದೊಡ್ಡ ಪ್ರಮಾಣದಲ್ಲಿ ತಯಾರಿಸಲು ನಿರ್ಧರಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಿಂದ ಪಿಪಿಇ ತಯಾರಿಸಲು ಉತ್ತರ ರೈಲ್ವೆ ಅನುಮೋದನೆ ಪಡೆದಿದೆ.

* ವೈದ್ಯರಿಗೆ 50 ಪ್ರತಿಶತ ಕಿಟ್ ನೀಡಲು ಪ್ರಯತ್ನಿಸಲಾಗುತ್ತಿದೆ:
ಕರೋನಾ ಚಿಕಿತ್ಸೆಯಲ್ಲಿ ತೊಡಗಿರುವ ದೇಶದ ಇತರ ವೈದ್ಯರಿಗೆ 50 ಪ್ರತಿಶತ ಪಿಪಿಇ ಬಟ್ಟೆಗಳನ್ನು ಪೂರೈಸಲು ರೈಲ್ವೆ ಪ್ರಯತ್ನಿಸುತ್ತಿದೆ. ಈ ಎಲ್ಲದಕ್ಕೂ ಪಂಜಾಬ್‌ನ ಅನೇಕ ದೊಡ್ಡ ಜವಳಿ ಉದ್ಯಮಗಳಿಗೆ ಸಮೀಪದಲ್ಲಿರುವ ಜಗಧ್ರಿಯಿಂದ ವಸ್ತುಗಳನ್ನು ಖರೀದಿಸಲಾಗುತ್ತಿದೆ. ಯಮುನಾನಗರ ಮೂಲದ ಮಾರಾಟಗಾರರಿಂದ ಕಚ್ಚಾ ವಸ್ತುಗಳನ್ನು ಕೊಳ್ಳಲಾಗುತ್ತಿದ್ದು ಇದಕ್ಕೆ ಜವಳಿ ಸಚಿವಾಲಯ ಅನುಮೋದಿನೆಯೂ ದೊರೆತಿದೆ. "ಮುಂದಿನ ದಿನಗಳಲ್ಲಿ ಉತ್ಪಾದನಾ ಸೌಲಭ್ಯಗಳು ಮತ್ತಷ್ಟು ಹೆಚ್ಚಾಗಬಹುದು" ಎಂದು ಹೇಳಿಕೆ ತಿಳಿಸಿದೆ. ಭಾರತೀಯ ರೈಲ್ವೆಯ ಈ ಕ್ರಮವನ್ನು ಕರೋನಾ ವೈರಸ್‌ನೊಂದಿಗೆ ವ್ಯವಹರಿಸುವಾಗ ತೊಡಗಿರುವ ಇತರ ಸರ್ಕಾರಿ ಸಂಸ್ಥೆಗಳು ಸ್ವಾಗತಿಸುತ್ತಿವೆ.

Coronavirus ವಿರುದ್ಧದ ಯುದ್ಧಕ್ಕೆ ಸಿದ್ಧವಾಯ್ತು ರೈಲ್ವೆ ಇಲಾಖೆ, ಸಿದ್ಧತೆಗಳನ್ನು ನೋಡಿದರೆ ನೀವೂ ಹೇಳ್ತೀರಾ Wow

ಭಾರತೀಯ ರೈಲ್ವೆಯ 'ರೈಲ್ ಕೋಚ್ ಫ್ಯಾಕ್ಟರಿ (ಆರ್‌ಸಿಎಫ್), ಕಪುರ್ಥಲಾ' ರಾಷ್ಟ್ರವ್ಯಾಪಿ 28 ದಿನಗಳ ಲಾಕ್​ಡೌನ್ (Lockdown)​  ನಂತರ 2020ರ ಏಪ್ರಿಲ್ 23ರಿಂದ ಮತ್ತೊಮ್ಮೆ ಉತ್ಪಾದನೆಯನ್ನು ಪ್ರಾರಂಭಿಸಿದೆ. ಕೋವಿಡ್ -19 ವಿರುದ್ಧದ ಹೋರಾಟದ ಮಧ್ಯೆ ಗೃಹ ಸಚಿವಾಲಯ ಮತ್ತು ಸ್ಥಳೀಯ ಆಡಳಿತ ಹೊರಡಿಸಿದ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ ಕಾರ್ಖಾನೆಯನ್ನು ಮತ್ತೆ ತೆರೆಯಲಾಗಿದೆ. ಒಟ್ಟಾರೆಯಾಗಿ ಆರ್‌ಸಿಎಫ್ ಕ್ಯಾಂಪಸ್ ಟೌನ್ಶಿಪ್ ಒಳಗೆ ವಾಸಿಸುತ್ತಿರುವ 3744 ಉದ್ಯೋಗಿಗಳಿಗೆ ಕೆಲಸ ಪ್ರಾರಂಭಿಸಲು ಅವಕಾಶ ನೀಡಲಾಗಿದೆ. ಗೃಹ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳು ಮತ್ತು ರಾಜ್ಯ ಸರ್ಕಾರಗಳ ಸಲಹೆಯ ಪ್ರಕಾರ ಭಾರತೀಯ ರೈಲ್ವೆಯ ಇತರ ಉತ್ಪಾದನಾ ಘಟಕಗಳು ಈ ನಿಟ್ಟಿನಲ್ಲಿ ಸಲಹೆ ಪಡೆದ ಕೂಡಲೇ ನಿರ್ಮಾಣ ಕಾರ್ಯಗಳನ್ನು ಪುನರಾರಂಭಿಸುತ್ತವೆ.

ರೈಲ್ವೆ ಕೋಚ್ ಗಳನ್ನು ತಯಾರಿಸಲು ಸಂಪನ್ಮೂಲಗಳ ಸೀಮಿತ ಲಭ್ಯತೆಯ ಹೊರತಾಗಿಯೂ ಆರ್‌ಸಿಎಫ್ ಕಪುರ್ಥಾಲಾ ಕೇವಲ ಎರಡು ದಿನಗಳಲ್ಲಿ ಎರಡು ಬೋಗಿಗಳನ್ನು ಸಿದ್ಧಪಡಿಸಿದೆ. ಇವುಗಳಲ್ಲಿ ಪ್ರತಿಯೊಂದೂ ಎಲ್‌ಎಚ್‌ಬಿ ಹೈ ಕೆಪಾಸಿಟಿ ಪಾರ್ಸೆಲ್ ವ್ಯಾನ್ ಮತ್ತು ಲಗೇಜ್ ಕಮ್ ಜನರೇಟರ್ ಕಾರುಗಳನ್ನು ಒಳಗೊಂಡಿದೆ. ಇವುಗಳನ್ನು ಕ್ರಮವಾಗಿ 23 ಏಪ್ರಿಲ್ 2020 ಮತ್ತು 24 ಏಪ್ರಿಲ್ 2020 ರಂದು ಉತ್ಪಾದಿಸಲಾಗಿದೆ. ಈ ಬೋಗಿಗಳ ಉತ್ಪಾದನೆಯು ಪಾರ್ಸೆಲ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಬಳಕೆಗೆ ಅನುಕೂಲವಾಗಲಿದೆ.

Trending News