Weight Loss: ಎಲ್ಲಾ ಪ್ರಯತ್ನಗಳ ಬಳಿಕವೂ ತೂಕ ಇಳಿಯುತ್ತಿಲ್ಲವೇ, ಈಗಲೇ ಎಚ್ಚೆತ್ತುಕೊಳ್ಳಿ

Weight Loss Myths - ಒಂದು ವೇಳೆ ನೀವೂ ಕೂಡ ತೂಕ ಇಳಿಕೆಗೆ ಎಲ್ಲಾ ರೀತಿಯ ಪ್ರಯನ್ತಗಳನ್ನು ಮಾಡುತ್ತಿದ್ದು, ತೂಕ ಇಳಿಯುತ್ತಿಲ್ಲ ಎಂದಾದಲ್ಲಿ ಈಗಲೇ ಎಚ್ಚೆತ್ತುಕೊಳ್ಳಿ.

Written by - Nitin Tabib | Last Updated : Aug 28, 2021, 01:25 PM IST
  • ತುಂಬಾ ಕಡಿಮೆ ಕ್ಯಾಲೋರಿ ಇರುವ ಆಹಾರವು ದೇಹದ ಚಯಾಪಚಯ ಕ್ರಿಯೆಯನ್ನು ಹಾನಿಗೊಳಿಸುತ್ತದೆ.
  • ಇದು ಹೆಚ್ಚಿನ ಕ್ಯಾಲೋರಿ ಆಹಾರಕ್ಕಾಗಿ ನಿಮ್ಮ ಹಂಬಲವನ್ನು ಹೆಚ್ಚಿಸುತ್ತದೆ.
  • ಹಲವು ಬಾರಿ ಆಹಾರವನ್ನು ತ್ಯಜಿಸಿದ ನಂತರವೂ, ತೂಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
Weight Loss: ಎಲ್ಲಾ ಪ್ರಯತ್ನಗಳ ಬಳಿಕವೂ ತೂಕ ಇಳಿಯುತ್ತಿಲ್ಲವೇ, ಈಗಲೇ ಎಚ್ಚೆತ್ತುಕೊಳ್ಳಿ title=
Weight Loss Myths

ನವದೆಹಲಿ:  Weight Loss Myths - ಹಲವು ಬಾರಿ ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರಿ ಆದರೆ ದೀರ್ಘಕಾಲ ಎಲ್ಲಾ ಕ್ರಮಗಳನ್ನು ತೆಗೆದುಕೊಂಡ ನಂತರವೂ ನಿಮ್ಮ ತೂಕ ಕಡಿಮೆಯಾಗುವುದಿಲ್ಲ ಮತ್ತು ಹಾಗೆಯೇ ಇರುತ್ತದೆ. ತಜ್ಞರ ಪ್ರಕಾರ, ನಿಮ್ಮ ಸಣ್ಣ ತಪ್ಪುಗಳಿಂದಾಗಿ ಇದು ಸಂಭವಿಸುತ್ತದೆ. ತ್ವರಿತ ತೂಕ ಇಳಿಕೆಯ ಹುಡುಕಾಟದಲ್ಲಿ ಜನರು ಕೆಲವು  ವಿಷಯಗಳನ್ನು ಗಮನಿಸುವುದಿಲ್ಲ. ಅವರು ವ್ಯವಸ್ಥಿತ ಆಹಾರ ಮತ್ತು ವ್ಯಾಯಾಮದ ನಿಯಮಗಳನ್ನು ಅನುಸರಿಸುವುದಿಲ್ಲ, ಇದರ ಪರಿಣಾಮವಾಗಿ ಅವರ ತೂಕ ಕಡಿಮೆಯಾಗುವುದಿಲ್ಲ.

ತೂಕ ಇಳಿಕೆ ಎಂದರೆ ಅಗತ್ಯಕ್ಕಿಂತ ಕಡಿಮೆ ತಿನ್ನುವುದು ಎಂದಲ್ಲ ಅಥವಾ ದೀರ್ಘ ಕಾಲದ ವರೆಗೆ ವ್ಯಾಯಾಮ ಮಾಡುವುದು ಎಂದೂ ಅಲ್ಲ. ತಪ್ಪಾದ ಕ್ರ್ಯಾಶ್ ಡಯಟ್ ಹಾಗೂ ವೇಟ್ ಲಾಸ್ ಉತ್ಪನ್ನಗಳ ಕಾರಣ ಕೂಡ ತೂಕ ಇಳಿಕೆಯಾಗುವುದಿಲ್ಲ.

ಅತಿ ಹೆಚ್ಚು ಲೋ ಕ್ಯಾಲೋರಿ ಆಹಾರ
ತೂಕ ಇಳಿಕೆಗಾಗಿ ಅತಿ ಕಡಿಮೆ ಆಹಾರ ಸೇವಿಸಬೇಡಿ. ಸಾಮಾನ್ಯವಾಗಿ ಜನರು ಕಡಿಮೆ ತಿನ್ನುವುದರಿಂದ ಅವರ ತೂಕ ವೇಗವಾಗಿ ಕಡಿಮೆಯಾಗುತ್ತದೆ ಎಂದು ಭಾವಿಸುತ್ತಾರೆ, ಆದರೆ ಅದು ತಪ್ಪು. ತುಂಬಾ ಕಡಿಮೆ ಕ್ಯಾಲೋರಿ ಇರುವ ಆಹಾರವು (Low Calorie Food) ದೇಹದ ಚಯಾಪಚಯ ಕ್ರಿಯೆಯನ್ನು ಹಾನಿಗೊಳಿಸುತ್ತದೆ. ಈ ಆಹಾರವು ನಿಮಗೆ ಆರಂಭದಲ್ಲಿ ಸ್ವಲ್ಪಮಟ್ಟಿಗೆ ಕೆಲಸ ಮಾಡಬಹುದು, ಆದರೆ ನೀವು ಈ ಆಹಾರವನ್ನು ದೀರ್ಘಕಾಲದವರೆಗೆ ಅನುಸರಿಸುವ ಸಮಯದಲ್ಲಿ, ಹೆಚ್ಚಿನ ಕ್ಯಾಲೋರಿ ಆಹಾರಕ್ಕಾಗಿ ನಿಮ್ಮ ಹಂಬಲ ಹೆಚ್ಚಾಗಲು ಆರಂಭವಾಗುತ್ತದೆ.

ಒಮ್ಮೆಲೇ ತಿನ್ನುವುದನ್ನು ಬಿಟ್ಟುಬಿಡುವುದು
ಕೆಲವರು ತೂಕ ಇಳಿಸಿಕೊಳ್ಳಲು (Weight Loss) ತಿನ್ನುವುದನ್ನೇ ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಇದೇ ವೇಳೆ ಹಲವು  ಬಾರಿ ಆಹಾರವನ್ನು ತ್ಯಜಿಸಿದ ನಂತರವೂ, ತೂಕದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಈ ಕಾರಣದಿಂದಾಗಿ ನೀವು ನಿರುತ್ಸಾಹಗೊಳ್ಳಲು ಪ್ರಾರಂಭಿಸುತ್ತೀರಿ ಮತ್ತು ಭಾವನಾತ್ಮಕರಾಗುತ್ತೀರಿ ಮತ್ತು ನಿರಂತರವಾಗಿ ತಿನ್ನಲು ಪ್ರಾರಂಭಿಸುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ಕ್ಯಾಲೋರಿ ಸೇವನೆಯು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ ಮತ್ತು ತೂಕವು ಮತ್ತೆ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಇದು ಪೌಷ್ಠಿಕಾಂಶದ ಕೊರತೆಗೆ ಕಾರಣವಾಗುತ್ತದೆ ಮತ್ತು ನೀವು ಯಾವಾಗಲೂ ಸುಸ್ತಾಗಿರುತ್ತೀರಿ.

ಇದನ್ನೂ ಓದಿ-Stretch Marks Removal: ಸ್ಟ್ರೆಚ್ ಮಾರ್ಕ್ಸ್ ತೆಗೆಯಲು ಬಹಳ ಸಹಕಾರಿ ಈ 4 ವಸ್ತುಗಳು

ಆಹಾರದಲ್ಲಿ ಸಾಕಷ್ಟು ಪ್ರಮಾಣದ ನಾರಿನಂಶದ ಕೊರತೆ 
ನಿಮ್ಮ ಆಹಾರವನ್ನು ನೀವೇ ನಿರ್ಧರಿಸಿದಾಗ, ಅನೇಕ ಬಾರಿ ಅದರಲ್ಲಿ ಸಾಕಷ್ಟು ಫೈಬರ್ (Fiber) ಮತ್ತು ಪ್ರೋಟೀನ್ (Protein) ಇರುವುದಿಲ್ಲ, ಆದರೆ ಪ್ರೋಟೀನ್ ಮತ್ತು ಫೈಬರ್ ನಿಮ್ಮ ದೇಹಕ್ಕೆ ಅವಶ್ಯಕವಾಗಿದೆ. ಇದನ್ನು ಆಹಾರದಲ್ಲಿ ಸೇರಿಸುವುದು ಪ್ರಯೋಜನಕಾರಿ. ಈ ಪೋಷಕಾಂಶಗಳನ್ನು ಚಯಾಪಚಯಗೊಳಿಸಲು ದೇಹವು ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತದೆ, ಇದು ಆಹಾರದ ಹಂಬಲವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ-Mustard Oil Benefits : ಸಾಸಿವೆ ಎಣ್ಣೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ? ಇದನ್ನ ಅಡುಗೆಗೆ ಏಕೆ ಬಳಸಬೇಕು?

ಕೇವಲ ಆರೋಗ್ಯ ಉತ್ಪನ್ನಗಳ ಮೇಲೆ ಅವಲಂಭಿಸುವುದು
ತೂಕವನ್ನು ವೇಗವಾಗಿ ಕಳೆದುಕೊಳ್ಳಲು, ನೀವು ಅನೇಕ ರೀತಿಯ ತೂಕ ಇಳಿಸುವ ಉತ್ಪನ್ನಗಳನ್ನು ಬಳಸಲು ಪ್ರಾರಂಭಿಸುತ್ತೀರಿ. ತಿನ್ನುವ ಬದಲು, ಪುಡಿಗಳ ಮೇಲೆ ಅವಲಂಭಿತರಾಗುತ್ತೀರಿ ಮತ್ತು ಅನೇಕ ಜನರು 3 ರಿಂದ 4 ಬಾರಿ ಹಸಿರು ಚಹಾವನ್ನು ಕುಡಿಯಲು ಪ್ರಾರಂಭಿಸುತ್ತಾರೆ. ನಿಮ್ಮ ತೂಕವನ್ನು ಕಡಿಮೆ ಮಾಡಲು ಈ ವಸ್ತುಗಳು ನಿಮಗೆ ಸಹಾಯ ಮಾಡುವುದಿಲ್ಲ ಎಂಬುದನ್ನು ನೆನಪಿಡಿ.

ಇದನ್ನೂ ಓದಿ-ಅತಿಯಾಗಿ ಬೆಳ್ಳುಳ್ಳಿ ಸೇವನೆ ಕೂಡಾ ಅಪಾಯಕಾರಿ, ಆರೋಗ್ಯಕ್ಕಾಗಿ ಇಷ್ಟು ಮಾತ್ರ ತಿನ್ನಬೇಕು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News