Weight Loss Tips: ತ್ವರಿತ ತೂಕ ಇಳಿಕೆಗಾಗಿ ಸೋಂಪನ್ನು ಈ ರೀತಿ ಸೇವಿಸಿ

Belly Fat Reduce: ಪ್ರಸ್ತುತ ಬಹುತೇಕ ಜನರ ಸಾಮಾನ್ಯ ಸಮಸ್ಯೆ ತೂಕ ಹೆಚ್ಚಳ.  ತೂಕ ಕಡಿಮೆ ಮಾಡಿಕೊಳ್ಳಲು ಫೆನ್ನಲ್ ಬೀಜಗಳು ಎಂದರೆ ಸೋಂಪನ್ನು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಹಾಗಿದ್ದರೆ, ತೂಕ ಇಳಿಕೆಗಾಗಿ ಸೋಂಪನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ... 

Written by - Yashaswini V | Last Updated : May 10, 2023, 11:47 AM IST
  • ದಿನಕ್ಕೆ ಗರಿಷ್ಠ ಎರಡು ಚಮಚ ಫೆನ್ನೆಲ್ ಅನ್ನು ಮಾತ್ರ ಸೇವಿಸಬೇಕು.

    ಅದಕ್ಕಿಂತ ಹೆಚ್ಚಿನ ಸೋಂಪನ್ನು ಸೇವಿಸುವ ತಪ್ಪನ್ನು ಎಂದಿಗೂ ಮಾಡಬೇಡಿ.
  • ಆಹಾರ ಸೇವನೆಯ ಬಳಿಕ ಸೋಂಪನ್ನು ಬಳಸಬಹುದು.
Weight Loss Tips: ತ್ವರಿತ ತೂಕ ಇಳಿಕೆಗಾಗಿ ಸೋಂಪನ್ನು ಈ ರೀತಿ ಸೇವಿಸಿ title=

Quick Weight Loss Tips In Kannada: ನೀವೂ ಕೂಡ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅದಕ್ಕಾಗಿ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ. ಇದರೊಂದಿಗೆ ಫೆನ್ನಲ್ ಅಥವಾ ಸೋಂಪಿನ ಬಳಕೆಯೂ ತ್ವರಿತ ತೂಕ ಇಳಿಕೆಯಲ್ಲಿ ಬಹಳ ಪರಿಣಾಮಕಾರಿ ಎಂದು ನಾಮಬಲಾಗಿದೆ. 

ಆಹಾರ ತಜ್ಞರ ಪ್ರಕಾರ, ಫೆನ್ನಲ್/ ಸೋಂಪು ತೂಕವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ ಆಗಿದೆ. ನಿಯಮಿತವಾಗಿ ಸೋಂಪನ್ನು ಬಳಸುವುದರಿಂದ ಅದು ದೇಹದಲ್ಲಿ ಸ್ಥೂಲಕಾಯತೆಯನ್ನು ಕಡಿಮೆ ಮಾಡಿ ದೇಹಕ್ಕೆ ಒಳ್ಳೆಯ ಆಕಾರವನ್ನು ನೀಡುವಲ್ಲಿ ಬಹಳ ಸಹಕಾರಿ ಎಂದು ನಂಬಲಾಗಿದೆ. ಆದರೆ, ಆರೋಗ್ಯಕರವಾಗಿ ತ್ವರಿತವಾಗಿ ತೂಕ ಇಳಿಸಿಕೊಳ್ಳಲು ನಾವು ಅದನ್ನು ಹೇಗೆ ಬಳಸುತ್ತೇವೆ ಎಂಬುದು ಕೂಡ ಬಹಳ ಮುಖ್ಯ ವಿಚಾರವಾಗಿದೆ. 

ತೂಕ ಇಳಿಕೆಗೆ ಫೆನ್ನಲ್ ಅಥವಾ ಸೋಂಪನ್ನು ಬಳಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: 
* ದಿನಕ್ಕೆ ಗರಿಷ್ಠ ಎರಡು ಚಮಚ ಫೆನ್ನೆಲ್ ಅನ್ನು ಮಾತ್ರ ಸೇವಿಸಬೇಕು. ಅದಕ್ಕಿಂತ ಹೆಚ್ಚಿನ ಸೋಂಪನ್ನು ಸೇವಿಸುವ ತಪ್ಪನ್ನು ಎಂದಿಗೂ ಮಾಡಬೇಡಿ. 
* ಆಹಾರ ಸೇವನೆಯ ಬಳಿಕ ಸೋಂಪನ್ನು ಬಳಸಬಹುದು.
* ಫೆನ್ನಲ್ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಬಳಸಬಹುದು. 
* ತ್ವರಿತ ತೂಕ ನಷ್ಟಕ್ಕೆ ಸೋಂಪನ್ನು ನೀರಿನಲ್ಲಿ ನೆನೆಸಿಟ್ಟು ಆ ನೀರನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿ ಆಗಿದೆ. 

ಇದನ್ನೂ ಓದಿ- Health Tips: ಮುಟ್ಟಿನ ಸೆಳೆತಕ್ಕೆ ಪರಿಹಾರ ನೀಡುವ ಮನೆಮದ್ದುಗಳು

ಆರೋಗ್ಯಕರವಾಗಿ ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಸೋಂಪನ್ನು ಈ ರೀತಿ ಬಳಸಿ: 
ಫೆನ್ನಲ್ ವಾಟರ್: 

ತೂಕ ಇಳಿಕೆಗಾಗಿ ಅದರಲ್ಲೂ ಬೆಳ್ಳಿ ಫ್ಯಾಟ್ ಕರಗಿಸಲು ಬಯಸುವವರಿಗೆ ಫೆನ್ನಲ್ ವಾಟರ್ ತುಂಬಾ ಪ್ರಯೋಜನಕಾರಿ ಆಗಿದೆ. ಇದಕ್ಕಾಗಿ ನಿತ್ಯ ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಚಮಚ ಸೋಂಪನ್ನು ನೆನೆಸಿಡಿ. ಬೆಳಿಗ್ಗೆ ಎದ್ದ ಕೂಡಲೇ ಈ ನೀರನ್ನು ಶೋಧಿಸಿ ಕುಡಿಯಿರಿ. ಪ್ರತಿ ದಿನ ಈ ರೀತಿ ಮಾಡುವುದರಿಂದ ಸ್ಥೂಲಕಾಯತೆ ಸಮಸ್ಯೆಯಿಂದ ತ್ವರಿತವಾಗಿ ಪರಿಹಾರ ಪಡೆಯಬಹುದಾಗಿದೆ. ಆದರೆ, ನೆನಪಿಡಿ, ಒಂದು ದಿನದಲ್ಲಿ ಗರಿಷ್ಠ ಎರಡು ಲೋಟ ಫೆನ್ನಲ್ ವಾಟರ್ ಅನ್ನು ಮಾತ್ರ ಕುಡಿಯಬಹುದು. 

ಸೋಂಪಿನ ಪುಡಿ: 
ಒಂದು ಕಪ್ ಸೋಂಪನ್ನು ತೆಗೆದುಕೊಂಡು ನೀರು ಬೆರೆಸದೆ ಅದನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಈ ಪುಡಿಯನ್ನು ಮೊಸರು, ಸಕ್ಕರೆ ಪಾಕ, ಕಾಫಿ ಇಲ್ಲವೇ ಟೀ ಈ ರೀತಿ ಯಾವುದೇ ರೀತಿಯ ಪಾನೀಯದಲ್ಲಿ ಬೆರೆಸಿ ಇದಕ್ಕೆ ಸೇವಿಸಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಜೀರ್ಣ ಕ್ರಿಯೆ ಸುಧಾರಿಸುವುದರ ಜೊತೆಗೆ ಹೊಟ್ಟೆಯ ಸುತ್ತ ಶೇಖರಣೆ ಆಗಿರುವ ಕೊಬ್ಬು ಕೂಡ ಬೇಗ ಕರಗುತ್ತದೆ. 

ಇದನ್ನೂ ಓದಿ- ಮಧುಮೇಹಿಗಳೇ ಗಮನಿಸಿ! ಬೇಸಿಗೆಯಲ್ಲಿ ಈ ಆಹಾರಗಳನ್ನು ಸೇವಿಸಲೇಬಾರದು

ಫೆನ್ನಲ್ ಟೀ:
ಪ್ರತಿ ದಿನ ಸಂಜೆ ಫೆನ್ನಲ್ ಅಥವಾ ಸೋಂಪಿನ ಬೀಜಗಳನ್ನು ಬಳಸಿ ಟೀ ತಯಾರಿಸಿ. ಇದಕ್ಕಾಗಿ ಮೊದಲು ಬಾಣಲೆಯಲ್ಲಿ ಒಂದು ಲೋಟ ನೀರು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಸೋಂಪು, ಅರ್ಧ ಚಮಚ ಬೆಲ್ಲ ಬೆರೆಸಿ ಚೆನ್ನಾಗಿ ಕುದಿಸಿ. ಬಳಿಕ ಅದನ್ನು ಶೋಧಿಸಿ ಕುಡಿಯಿರಿ. ನಿಯಮಿತವಾಗಿ ಫೆನ್ನಲ್ ಟೀ ಕುಡಿಯುತ್ತಾ ಬಂದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ದೇಹದ ತೂಕವನ್ನು ಕಡಿಮೆ ಮಾಡಲು ಕೂಡ ತುಂಬಾ ಪ್ರಯೋಜನಕಾರಿ ಆಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News