Weight Loss In Winter: ಚಳಿಗಾಲದಲ್ಲಿ ವೇಗವಾಗಿ ತೂಕ ಇಳಿಸಲು ಈ 5 ದಿನಚರಿಯನ್ನು ತಪ್ಪದೇ ಪಾಲಿಸಿ

Weight Loss In Winter: ತೂಕ ಇಳಿಕೆಗೆ ನಮ್ಮ ಆಹಾರ ಪದ್ದತಿ, ದಿನಚರಿ ಎಲ್ಲವೂ ಕಾರಣವಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ತೂಕ ಇಳಿಕೆ ಯಾವುದೇ ಸವಾಲಿಗಿಂತ ಕಡಿಮೆ ಇಲ್ಲ. ಆದರೆ, ನೀವು 5 ಸರಳ ದಿನಚರಿ ಅಳವಡಿಸಿಕೊಳ್ಳುವ ಮೂಲಕ ತ್ವರಿತವಾಗಿ ನಿಮ್ಮ ತೂಕ ಕಳೆದುಕೊಳ್ಳಬಹುದು. 

Last Updated : Nov 30, 2023, 12:42 PM IST
  • ಸಾಮಾನ್ಯವಾಗಿ ಚಳಿಗಾಲದಲ್ಲಿ ವಾತಾವರಣದಿಂದಾಗಿ ಜನ ವಾಕ್, ವರ್ಕ್‌ಔಟ್‌ ಮಾಡುವುದನ್ನು ಕೈ ಬಿಡುತ್ತಾರೆ.
  • ಆದರೆ, ಬೇರೆಲ್ಲಾ ಋತುಮಾನಗಳಿಗಿಂತ ಚಳಿಗಾಲದಲ್ಲಿ ಹೆಚ್ಚು ಆಹಾರ ಸೇವನೆ, ಜೊತೆಗೆ ತಾಲೀಮುಗಳನ್ನು ಕೈಬಿಡುವುದರಿಂದ ತೂಕ ಯತೇಚ್ಛವಾಗಿ ಹೆಚ್ಚಾಗುತ್ತದೆ.
  • ಇದನ್ನು ತಪ್ಪಿಸಲು ಒಳಾಂಗಣ ವ್ಯಾಯಾಮವನ್ನು ರೂಢಿಸಿಕೊಳ್ಳುವುದು ನಿಮಗೆ ಒಳ್ಳೆಯ ಆಯ್ಕೆಯಾಗಿದೆ.
Weight Loss In Winter: ಚಳಿಗಾಲದಲ್ಲಿ ವೇಗವಾಗಿ ತೂಕ ಇಳಿಸಲು ಈ 5 ದಿನಚರಿಯನ್ನು ತಪ್ಪದೇ ಪಾಲಿಸಿ  title=

Weight Loss In Winter: ಸ್ಲಿಮ್ ಆಗಿ ಫಿಟ್ ಅಂಡ್ ಫೈನ್ ಆಗಿರಬೇಕು ಎಂದುಕೊಳ್ಳುವುದು ಪ್ರತಿಯೊಬ್ಬರ ಕನಸು. ಆದರೆ, ಆರೋಗ್ಯಕರ ತೂಕ ಮತ್ತು ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಯಾವುದೇ ಸವಾಲಿಗಿಂತ ಕಡಿಮೆ ಇಲ್ಲ. ನೀವು ಕೂಡ ಆರೋಗ್ಯಕರವಾಗಿ ತೂಕ ಕಡಿಮೆ ಮಾಡಲು ಬಯಸಿದರೆ, ಚಳಿಗಾಲದಲ್ಲಿ ಈ ಐದು ಸರಳ ದಿನಚರಿಯನ್ನು ಅಳವಡಿಸಿಕೊಳ್ಳುವ ಮೂಲಕ ವೇಗವಾಗಿ ಫ್ಯಾಟ್ ಬರ್ನ್ ಮಾಡಬಹುದು. 

ಚಳಿಗಾಲದಲ್ಲಿ ತೂಕ ಇಳಿಕೆಗೆ ಹೀಗಿರಲಿ ನಿಮ್ಮ 5 ದಿನಚರಿ:- 
* ಇನ್ ಡೋರ್ ವರ್ಕ್‌ಔಟ್‌: 

ಸಾಮಾನ್ಯವಾಗಿ ಚಳಿಗಾಲದಲ್ಲಿ ವಾತಾವರಣದಿಂದಾಗಿ ಜನ ವಾಕ್, ವರ್ಕ್‌ಔಟ್‌ ಮಾಡುವುದನ್ನು ಕೈ ಬಿಡುತ್ತಾರೆ. ಆದರೆ, ಬೇರೆಲ್ಲಾ ಋತುಮಾನಗಳಿಗಿಂತ ಚಳಿಗಾಲದಲ್ಲಿ ಹೆಚ್ಚು ಆಹಾರ ಸೇವನೆ, ಜೊತೆಗೆ ತಾಲೀಮುಗಳನ್ನು ಕೈಬಿಡುವುದರಿಂದ ತೂಕ ಯತೇಚ್ಛವಾಗಿ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ಒಳಾಂಗಣ ವ್ಯಾಯಾಮವನ್ನು ರೂಢಿಸಿಕೊಳ್ಳುವುದು ನಿಮಗೆ ಒಳ್ಳೆಯ ಆಯ್ಕೆಯಾಗಿದೆ. 

* ಬೆಚ್ಚಗಿನ ಪಾನೀಯ: 
ಬೇಸಿಗೆ ಕಾಲದಲ್ಲಿ ಹೈಡ್ರೇಟ್ ಆಗಿರಲು ಹೆಚ್ಚು ಹೆಚ್ಚು ನೀರು, ಜ್ಯೂಸ್ ಸೇರಿದಂತೆ ಆಗಾಗ್ಗೆ ಪಾನೀಯಗಳನ್ನು ತೆಗೆದುಕೊಳ್ಳುತ್ತಿರುತ್ತೇವೆ. ಆದರೆ, ಚಳಿಗಾಲದಲ್ಲಿ ನೀರು ಕುಡಿಯುವುದೆಂದರೆ ಕೆಲವರಿಗೆ ಕಷ್ಟ. ಆದರೆ, ನೀವು ತಣ್ಣೀರು ಕುಡಿಯದಿದ್ದರೂ ಸಹ ಚಳಿಗಾಲದಲ್ಲಿ ಗ್ರೀನ್ ಟೀ, ಶುಂಠಿ ವಾಟರ್, ಹಾಟ್ ಲೆಮನ್ ವಾಟರ್ ಸೇರಿದಂತೆ ಆರೋಗ್ಯಕರವಾದ ಬೆಚ್ಚಗಿನ ಪಾನೀಯಗಳನ್ನು ನಿಮ್ಮ ಆಹಾರದ ಭಾಗವಾಘಿಸಿ. ಇದರಿಂದ ಹೈಡ್ರೇಟ್ ಆಗುವುದರ ಜೊತೆಗೆ ಆರೋಗ್ಯಕರ ತೂಕ ಇಳಿಕೆಗೂ ಪ್ರಯೋಜನಕಾರಿ ಆಗಿದೆ. 

ಇದನ್ನೂ ಓದಿ- Brighten Skin: ಹೊಳೆಯುವ ಕೋಮಲ ತ್ವಚೆಗಾಗಿ ರಾತ್ರಿ ಮಲಗುವ 5 ನಿಮಿಷ ಮೊದಲು ಈ ಕೆಲಸ ಮಾಡಿದರೆ ಸಾಕು

* ಪ್ರೊಟೀನ್ ಮತ್ತು ಫೈಬರ್ ರಿಚ್ ಫುಡ್ಗೆ ಆದ್ಯತೆ: 
ಚಳಿಗಾಲದಲ್ಲಿ ಕರಿದ ಆಹಾರಗಳ ಬಯಕೆ ಹೆಚ್ಚಾಗುವುದು ಸಹಜವೇ. ಆದೇ, ಈ ಋತುವಿನಲ್ಲಿ , ಫೈಬರ್ ಭರಿತ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ನಿಮ್ಮ ಡಯಟ್ ಭಾಗವಾಗಿಸಿ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತೇಜಿಸುವುದರ ಜೊತೆಗೆ ತೂಕವನ್ನು ಕಡಿಮೆ ಮಾಡಲು ಸಹ ಲಾಭದಾಯಕವಾಗಿದೆ. 

* ದೈಹಿಕ ವ್ಯಾಯಾಮ:
ಚಳಿಗಾಲದಲ್ಲಿ ಬೇಗ ಎದ್ದೇಳುವುದು ಬಾಹ್ಯ ವ್ಯಾಯಾಮಗಳನ್ನು ಮಾಡುವುದು ಕಷ್ಟವೆನಿಸಿದರೂ ಸಹ ವಾರಕ್ಕೆ ಕನಿಷ್ಠ ಮೂರ್ನಾಲ್ಕು ದಿನವಾದರೂ ದೈಹಿಕ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳಿ. ಇದರಿಂದ ದೇಹದಲ್ಲಿ ಶೇಖರಣೆ ಆಗಿರುವ ಫ್ಯಾಟ್ ಬರ್ನ್ ಆಗಲು ಸಹಾಯಕವಾಗಿದೆ. 

ಇದನ್ನೂ ಓದಿ- ಒಡೆದ ಹಿಮ್ಮಡಿಗೆ ಈ ಮನೆಮದ್ದಿನಿಂದ ಒಂದೇ ವಾರದಲ್ಲಿ ಸಿಗುತ್ತೆ ಸುಲಭ ಪರಿಹಾರ

* ಸಾಕಷ್ಟು ನಿದ್ರೆ: 
ಹಸಿವು ಮತ್ತು ಚಯಾಪಚಯವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ನಿಯಂತ್ರಿಸಲು ಪ್ರತಿನಿತ್ಯ ಸಾಕಷ್ಟು ನಿದ್ರೆ ಮಾಡುವುದು ಕೂಡ ತುಂಬಾ ಅವಶ್ಯಕ. ನೀವು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಪ್ರತಿನಿತ್ಯ ಕನಿಷ್ಠ 7-8ಗಂಟೆಗಳ ಕಾಲ ನಿದ್ರೆ ಮಾಡುವುದುದನ್ನು ನಿಮ್ಮ ದಿನಚರಿಯ ಭಾಗವಾಗಿಸುವುದನ್ನು ಮರೆಯಬೇಡಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News