ಮಧ್ಯಾಹ್ನದ ಊಟದಲ್ಲಿ ಈ ಮೂರು ಸಂಗತಿಗಳಿದ್ದರೆ ಕೆಲವೇ ದಿನಗಳಲ್ಲಿ ತೂಕ ಇಳಿಕೆ ಪಕ್ಕಾ!

Weight Loss: ದೇಹದ ತೂಕ ಹೆಚ್ಚಾಗುವಿಕೆಯಿಂದ ದೇಹದ ಅನೇಕ ಭಾಗಗಳಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ, ಇದರಿಂದಾಗಿ ದೇಹದ ಒಟ್ಟಾರೆ ಆಕಾರವೇ ಹದಗೆಟ್ಟು ಹೋಗುತ್ತದೆ. ಇದನ್ನು ತಪ್ಪಿಸಲು, ನೀವು ನಿಮ್ಮ ಮಧ್ಯಾಹ್ನದ ಊಟದಲ್ಲಿ ಆಹಾರ ಪದಾರ್ಥಗಳನ್ನು ಶಾಮೀಲುಗೊಳಿಸುವುದು ತುಂಬಾ ಮುಖ್ಯ.  

Written by - Nitin Tabib | Last Updated : Jul 15, 2023, 08:01 PM IST
  • ತೂಕವನ್ನು ಕಳೆದುಕೊಳ್ಳಲು ವ್ಯಾಯಾಮ ಅವಶ್ಯಕವಾಗಿದೆ, ವ್ಯಾಯಾಮದ ಮೂಲಕ ನೀವು ಕೊಬ್ಬನ್ನು ಸುಡಬಹುದು,
  • ಆದರೆ ಇದೆ ವೇಳೆ ನೀವು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಊಟದ ಸಮಯದಲ್ಲಿ ಏನನ್ನು ತಿನ್ನುವ ಮೂಲಕ
  • ನಿಮ್ಮ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಮಧ್ಯಾಹ್ನದ ಊಟದಲ್ಲಿ ಈ ಮೂರು ಸಂಗತಿಗಳಿದ್ದರೆ ಕೆಲವೇ ದಿನಗಳಲ್ಲಿ ತೂಕ ಇಳಿಕೆ ಪಕ್ಕಾ! title=

Weight Loss: ಬದಲಾದ ಜೀವನಶೈಲಿಯ ಇಂದಿನ ಕಾಲದಲ್ಲಿ ತೂಕ ಹೆಚ್ಚಳ ಒಂದು ಪ್ರಮುಖ ಸಮಸ್ಯೆಯಾಗಿ ಹೊರಹೊಮ್ಮಿದೆ, ಕೊರೊನಾ ಸಾಂಕ್ರಾಮಿಕದ ಕಾಲದಲ್ಲಂತೂ ಈ ಸಮಸ್ಯೆ ವಿಪರೀತವಾಗಿದೆ. ಕೋವಿಡ್ -19 ರ ನಂತರ, ಜನರು ಹಲವಾರು ಬಾರಿ ಲಾಕ್‌ಡೌನ್ ಅನ್ನು ಎದುರಿಸಿದ್ದಾರೆ, ಇದರಿಂದಾಗಿ ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಜನರ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತವೆ ಮತ್ತು ನಂತರ ಅವರ ಸೊಂಟ ಮತ್ತು ಹೊಟ್ಟೆಯ ಸುತ್ತಲೂ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸಿದೆ ಮತ್ತು ಇದೀಗ ದೇಹಕ್ಕೆ ಮತ್ತೆ ಹಳೆ ಆಕಾರ ನೀಡುವುದು ಜನರ ಪಾಲಿಗೆ ಕಷ್ಟದ ಕೆಲಸ ಎಂದು ಸಾಬೀತಾಗಿದೆ.

ಮಧ್ಯಾಹ್ನ ಈ 3 ಆಹಾರ ಸೇವಿಸಿದರೆ ತೂಕ ಕಡಿಮೆಯಾಗುತ್ತದೆ
ತೂಕವನ್ನು ಕಳೆದುಕೊಳ್ಳಲು ವ್ಯಾಯಾಮ ಅವಶ್ಯಕವಾಗಿದೆ, ವ್ಯಾಯಾಮದ ಮೂಲಕ ನೀವು ಕೊಬ್ಬನ್ನು ಸುಡಬಹುದು, ಆದರೆ ಇದೆ ವೇಳೆ ನೀವು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಊಟದ ಸಮಯದಲ್ಲಿ ಏನನ್ನು ತಿನ್ನುವ ಮೂಲಕ ನಿಮ್ಮ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ತರಕಾರಿಗಳು
ತರಕಾರಿಗಳು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದಿದೆ, ಏಕೆಂದರೆ ತರಕಾರಿಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡು ಬರುತ್ತವೆ, ಇವು ದೇಹಕ್ಕೆ ಸಂಪೂರ್ಣ ಪೋಷಣೆಯನ್ನು ನೀಡುತ್ತವೆ, ಜೊತೆಗೆ ದೇಹದ ಕಾರ್ಯವು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಅದರಲ್ಲೂ ಹಸಿರು ಸೊಪ್ಪಿನ ತರಕಾರಿಗಳನ್ನು ಸೇವಿಸಿದರೆ ದೇಹಕ್ಕೆ ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣದಂತಹ ಪೋಷಕಾಂಶಗಳು ಸಿಗುತ್ತವೆ. ಕನಿಷ್ಠ ಮತ್ತು ಆರೋಗ್ಯಕರ ಎಣ್ಣೆಯಲ್ಲಿ ತರಕಾರಿಗಳನ್ನು ತಯಾರಿಸಲು ಪ್ರಯತ್ನಿಸಿ. ಇದು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ.

ದಾಲ್ 
ನಮ್ಮಲ್ಲಿ ಹೆಚ್ಚಿನವರ ಊಟ ದಾಲ್ ಅಥವಾ ಬೆಲೆ ಇಲ್ಲದೆ ಪೂರ್ಣವಾಗುವುದಿಲ್ಲ, ದಾಲ್ ಆಹಾರದ ರುಚಿ ಹೆಚ್ಚಿಉವುದರ ಜೊತೆಗೆ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸಾಮಾನ್ಯವಾಗಿ, ಪ್ರೋಟೀನ್ ಅಗತ್ಯವನ್ನು ದ್ವಿದಳ ಧಾನ್ಯಗಳ ಸಹಾಯದಿಂದ ಪೂರೈಸಲಾಗುತ್ತದೆ, ಆದರೆ ಇದರೊಂದಿಗೆ ದೇಹವು ಕಬ್ಬಿಣ ಮತ್ತು ಸತುವನ್ನು ಸಹ ಪಡೆಯುತ್ತದೆ ಮತ್ತು ತೂಕ ಇಳಿಕೆಯ ಜೊತೆಗೆ ದೇಹದ  ಇತರ ಅನೇಕ ಸಮಸ್ಯೆಗಳು ದೂರಾಗುತ್ತವೆ.

ಇದನ್ನೂ ಓದಿ-ಈ ಒಣ ಹಣ್ಣಿನ ನೀರು ಸೇವನೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ!

ಮೊಸರು
ಮಧ್ಯಾಹ್ನದ ನಿಮ್ಮ ಊಟದಲ್ಲಿ ಮೊಸರನ್ನು ಅಗತ್ಯವಾಗಿ ಶಾಮೀಲುಗೊಳಿಸಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಇರಿಸುವುದರ ಜೊತೆಗೆ ನಿಮ್ಮ ಹೆಚ್ಚುತ್ತಿರುವ ತೂಕವನ್ನು ಕೂಡ ನಿಯಂತ್ರಿಸುತ್ತದೆ.

ಇದನ್ನೂ ಓದಿ-ಹಲವು ಗಂಭೀರ ಕಾಯಿಲೆಗಳನ್ನು ತೊಡೆದು ಹಾಕುತ್ತೆ ಹಿಮಾಲಯದಲ್ಲಿ ಕಂಡುಬರುವ ಈ ಗಿಡಮೂಲಿಕೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News