ಹೃದಯದಲ್ಲಿ ಬ್ಲೋಕೆಜ್ ಇದೆ ಎನ್ನುವುದನ್ನು ತೋರಿಸುತ್ತದೆ ಈ ಲಕ್ಷಣಗಳು! ಜನ ಇದನ್ನು ನಿರ್ಲಕ್ಷಿಸುವುದೇ ಹೆಚ್ಚು

Warning Signs And Symptoms Of Heart Blockage : ಹಾರ್ಟ್ ನಲ್ಲಿ ಬ್ಲೋಕೆಜ್ ಇದ್ದಾಗ ಅನೇಕ ರೀತಿಯ ಸಂಕೇತಗಳು ನಮಗೆ ಸಿಗುತ್ತವೆ.ಆದರೆ ಸಾಮಾನ್ಯವಾಗಿ ಇದನ್ನು ನಾವು ನಿರ್ಲಕ್ಷಿಸಿ ಬಿಡುತ್ತೇವೆ.  ಈ ನಿರ್ಕ್ಷ್ಯವೇ ಹೃದಯಾಘಾತಕ್ಕೆ ಕಾರಣವಾಗಬಹುದು. ​

Written by - Ranjitha R K | Last Updated : May 28, 2024, 05:55 PM IST
  • ಹಾರ್ಟ್ ಬ್ಲಾಕ್ ನಲ್ಲಿ ಮೂರು ಹಂತಗಳಿರುತ್ತವೆ.
  • ಮೊದಲ ಹಂತದಲ್ಲಿ ಇದು ಕನಿಷ್ಠ ಸಮಸ್ಯೆಗಳನ್ನು ಉಂಟುಮಾಡಬಹುದು.
  • ಈ ನಿರ್ಲಕ್ಷ್ನವೇ ಹೃದಯಾಘಾತಕ್ಕೆ ಕಾರಣವಾಗಬಹುದು.
 ಹೃದಯದಲ್ಲಿ ಬ್ಲೋಕೆಜ್ ಇದೆ ಎನ್ನುವುದನ್ನು ತೋರಿಸುತ್ತದೆ ಈ ಲಕ್ಷಣಗಳು! ಜನ ಇದನ್ನು ನಿರ್ಲಕ್ಷಿಸುವುದೇ ಹೆಚ್ಚು  title=

Warning Signs And Symptoms Of Heart Blockage : ಹೃದಯದ ಅಪ್ಪರ್ ಚೇಂಬರ್ ನಿಂದ ವಿದ್ಯುತ್ ಸಂಕೇತಗಳು ಹೃದಯದ ಕೆಳಗಿನ ಚೇಂಬರ್ ಗೆ ಸರಿಯಾಗಿ ತಲುಪದಿದ್ದಾಗ ಹಾರ್ಟ್ ಬ್ಲಾಕ್ ಆಗುತ್ತದೆ.ಮೂರು ಹಂತಗಳಲ್ಲಿ ಹಾರ್ಟ್ ಬ್ಲಾಕ್ ಆಗುತ್ತದೆ. ಮೊದಲ ಹಂತದಲ್ಲಿ ಹೆಚ್ಚು  ಸಮಸ್ಯೆಯಾಗುವುದಿಲ್ಲ. ಆದರೆ,ಮೂರನೇ ಹಂತದಲ್ಲಿ ಪ್ರಾಣವೇ ಹೋಗಬಹುದು. ವಯಸ್ಸು ಹೆಚ್ಚಾದಂತೆ ಹೃದಯಾಘಾತದ ಅಪಾಯ ಕೂಡಾ ಹೆಚ್ಚುತ್ತದೆ.ಹಾರ್ಟ್ ನಲ್ಲಿ ಬ್ಲೋಕೆಜ್ ಇದ್ದಾಗ ಅನೇಕ ರೀತಿಯ ಸಂಕೇತಗಳು ನಮಗೆ ಸಿಗುತ್ತವೆ.ಆದರೆ ಸಾಮಾನ್ಯವಾಗಿ ಇದನ್ನು ನಾವು ನಿರ್ಲಕ್ಷಿಸಿ ಬಿಡುತ್ತೇವೆ.  ಈ ನಿರ್ಕ್ಷ್ಯವೇ ಹೃದಯಾಘಾತಕ್ಕೆ ಕಾರಣವಾಗಬಹುದು. 

ಉಸಿರಾಟದ ಸಮಸ್ಯೆ : 
ಕೆಲವರಿಗೆ ಪದೇ ಪದೇ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.ಉಸಿರಾಟ ಬಹಳ ತ್ರಾಸದಾಯಕವಾಗಿರುತ್ತದೆ.ಈ ಸಮಸ್ಯೆಗೆ ಕಾರಣ ಏನಿರಬಹುದು ಎಂದು ನಿಮ್ಮಷ್ಟಕ್ಕೆ ಯೋಚನೆ ಮಾಡುವ ಬದಲು ತಕ್ಷಣ ವೈದ್ಯರನ್ನು ಭೇಟಿ ಮಾಡಿ. 

ಇದನ್ನೂ ಓದಿ : ಹೊಟ್ಟೆಯ ಈ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಕಿಡ್ನಿ ಸ್ಟೋನ್ ಆಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ !ಬೇರೆ ಲಕ್ಷಣಗಳು ಹೀಗಿರುತ್ತವೆ

ಮೂರ್ಛೆ ಹೋಗುವುದು : 
ಪದೇ ಪದೇ ಮೂರ್ಛೆ ಹೋಗುತ್ತಿದ್ದರೆ, ಅದು ಹೃದಯದಲ್ಲಿ ಬ್ಲೋಕೆಜ್ ಇರುವ ಸಂಕೇತವಾಗಿರಬಹುದು. ಹೃದಯಾಘಾತವಾದಾಗಲೂ ಈ ಸಂಕೇತ ಕಂಡು ಬರುತ್ತದೆ.ಇದರೊಂದಿಗೆ,ನಿಮ್ಮ ಹೃದಯ ಬಡಿತಡ ವೇಗ ವಿಪರೀತ ಹೆಚ್ಚಾಗುತ್ತದೆ.ಈ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಎದೆ ನೋವು : 
ಹೃದಯದಲ್ಲಿ ಬ್ಲೋಕೆಜ್ ಇದ್ದರೆ ಎದೆ ನೋವು ಕಾಣಿಸಿಕೊಳ್ಳುತ್ತದೆ.ಹೆಚ್ಚಿನವರು ಈ ಲಕ್ಷಣವನ್ನು ಗ್ಯಾಸ್ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ.ಆದರೆ, ಈ ಸಮಸ್ಯೆ  ದೀರ್ಘಕಾಲದವರೆಗೆ ಕಾಡುತ್ತಿದ್ದರೆ ಸ್ಥಿತಿ ಹದಗೆಡಬಹುದು. ಹಾಗಾಗಿ ಎದೆ ಮತ್ತು ಸುತ್ತ ಮುತ್ತ ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ. 

ಇದನ್ನೂ ಓದಿ : ಜೀರಿಗೆ ಮತ್ತು ಈ ಬೀಜದ ನೀರನ್ನು ಬೆಳಗ್ಗೆ ಎದ್ದ ಕೂಡಲೇ ಕುಡಿದರೆ ಶುಗರ್ ಮತ್ತು ಕೊಲೆಸ್ಟ್ರಾಲ್ ಸುಲಭವಾಗಿ ನಿಯಂತ್ರಣಕ್ಕೆ ಬರುವುದು

ತಲೆಸುತ್ತುವುದು : 
ತಲೆ ಸುತ್ತುವುದು ಹೃದಯದ ಬ್ಲೋಕೆಜ್ ನ ಸಂಕೇತವಾಗಿರಬಹುದು. ಯಾವುದೇ ಕಾರಣವಿಲ್ಲದೆ ಆಗಾಗ ತಲೆಸುತ್ತುತ್ತಿದ್ದರೆ ಅದು ಹೃದಯದ ಬ್ಲೋಕೆಜ್ ಅನ್ನು ಸೂಚಿಸುತ್ತದೆ.ಇಂತಹ ಚಿಹ್ನೆಗಳು ಸಾಮಾನ್ಯವಾಗಿ ಅನೇಕ ಸಾಮಾನ್ಯ ಸಂದರ್ಭಗಳಲ್ಲಿ ಸಂಭವಿಸುತ್ತವೆ.ಆದ್ದರಿಂದಲೇ ಜನ ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. 

ವಾಕರಿಕೆ : 
ಯಾವುದೇ ಕಾರಣವಿಲ್ಲದೆ ವಾಕರಿಕೆ ಮತ್ತು ವಾಂತಿ ಕಾಣಿಸಿಕೊಳ್ಳುವುದು ಕೂಡಾ ಹೃದಯದ ಬ್ಲೋಕೆಜ್ ಅನ್ನು ಸೂಚಿಸುತ್ತದೆ. ಜನರು ಸಾಮಾನ್ಯವಾಗಿ ಇಂಥಹ ಚಿಹ್ನೆಗಳ ಬಗ್ಗೆ ನಿರ್ಲಕ್ಷ್ಯ ತೋರಿ ಬಿಡುತ್ತಾರೆ. ನಿಮ್ಮ ದೇಹದಲ್ಲಿಯೂ ಇಂಥಹ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ತಜ್ಞರ ಸಲಹೆ ಪಡೆಯಿರಿ. 

(ಸೂಚನೆ: ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಧಾನಗಳು ಮತ್ತು ಸಲಹೆಗಳನ್ನು ಕಾರ್ಯಗತಗೊಳಿಸುವ ಮೊದಲು, ದಯವಿಟ್ಟು ವೈದ್ಯರನ್ನು ಅಥವಾ ಸಂಬಂಧಿತ ತಜ್ಞರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News