ಹೆಚ್ಚು ಹೊತ್ತು ಸ್ನಾನ ಮಾಡುವುದು ಕೂಡಾ ಅಪಾಯಕಾರಿ ಎನ್ನುವುದು ತಿಳಿದಿದೆಯೇ?

Ayurvedic Shower: ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸವೇ. ಈ ಕಾರಣದಿಂದ ದೇಹ ಮತ್ತು ಮನಸ್ಸಿಗೆ ಉಲ್ಲಾಸ ಸಿಗುತ್ತದೆ.

Written by - Ranjitha R K | Last Updated : Sep 9, 2021, 06:53 PM IST
  • ತಲೆ ಸ್ನಾನ ಮಾಡುವುದಕ್ಕಿಂತ ಮೊದಲು ಹೀಗೆ ಮಾಡಿ
  • ಹೆಚ್ಚು ಹೊತ್ತು ಬಾತ್ ರೂಂನಲ್ಲಿ ಕಳೆಯುವುದು ಒಳ್ಳೆಯದಲ್ಲ
  • ಸ್ನಾನಕ್ಕೆ ಬಳಸುವ ನೀರು ಹೇಗಿರಬೇಕು ತಿಳಿಯಿರಿ
ಹೆಚ್ಚು ಹೊತ್ತು ಸ್ನಾನ ಮಾಡುವುದು ಕೂಡಾ ಅಪಾಯಕಾರಿ ಎನ್ನುವುದು ತಿಳಿದಿದೆಯೇ?  title=
ಹೆಚ್ಚು ಹೊತ್ತು ಬಾತ್ ರೂಂನಲ್ಲಿ ಕಳೆಯುವುದು ಒಳ್ಳೆಯದಲ್ಲ (file photo)

ನವದೆಹಲಿ : Ayurvedic Shower: ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸವೇ. ಈ ಕಾರಣದಿಂದ ದೇಹ ಮತ್ತು ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ಆದರೆ, ಆಯುರ್ವೇದದಲ್ಲಿ ಸ್ನಾನದ ವಿಧಾನವನ್ನು ಕೂಡಾ ತಿಳಿಸಲಾಗಿದೆ.  ದೀರ್ಘಕಾಲದವರೆಗೆ ಸ್ನಾನ ಮಾಡುವುದು ಕೂಡಾ ದೇಹಕ್ಕೆ ಅಪಾಯಕಾರಿ (Ayurvedic way of bathing). ಇದರಿಂದ ಅನೇಕ ಸಮಸ್ಯೆಗಳು ಎದುರಾಗಲಿವೆ.  ಈ ಸಮಸ್ಯೆಯನ್ನು ತಪ್ಪಿಸಲು ಏನು ಮಾಡಬೇಕು ಎನ್ನುವುದನ್ನು ಆಯುರ್ವೇದ ತಜ್ಞ ರು ಹೇಗೆ ವಿವರಿಸುತ್ತಾರೆ ನೋಡೋಣ.  

ತಲೆ ಸ್ನಾನ ಮಾಡುವುದಕ್ಕಿಂತ ಮೊದಲು ಹೀಗೆ ಮಾಡಿ : 
ತಲೆ ಸ್ನಾನ ಮಾಡುವ 10 ನಿಮಿಷಗಳ ಮೊದಲು ತಲೆಗೆ ಎಣ್ಣೆ ಹಚ್ಚಬೇಕು. ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು. ಹೀಗೆ ಮಾಡಿದರೆ ಒಣ ಚರ್ಮದ (Dry Skin) ಸಮಸ್ಯೆ ಕಾಡುವುದಿಲ್ಲ. ಆದರೆ ನೆನಪಿರಲಿ,  ಆಯುರ್ವೇದದ ಪ್ರಕಾರ, ಭಾರವಾದ ದೇಹವಿರುವ  ಜನರು ಮಸಾಜ್ ಮಾಡಬಾರದು. ಇನ್ನು ಮಸಾಜ್ ಗೆ ಎಳ್ಳಿನ ಎಣ್ಣೆ ಬಳಸಿದರೆ ಎಲ್ಲಾ ಪ್ರಕಾರದ ಚರ್ಮಕ್ಕೆ ಒಳ್ಳೆಯದು.

ಇದನ್ನೂ ಓದಿ:  Protein Deficiency Symptoms: ದೇಹದಲ್ಲಿ ಪ್ರೋಟೀನ್ ಕೊರತೆಯಾದರೆ ಗೋಚರಿಸಲಿದೆ ಈ ಲಕ್ಷಣಗಳು

 ಎಷ್ಟು ಸಮಯದವರೆಗೆ ಸ್ನಾನ ಮಾಡಬೇಕು ?
ಹೆಚ್ಚೆಂದರೆ 10 ನಿಮಿಷಗಳವೆರೆಗೆ ಸ್ನಾನ ಮಾಡಬಹುದು. 10 ನಿಮಿಷಗಳಿಗಿಂತ ಹೆಚ್ಚು ಸಮಯವನ್ನು ಸ್ನಾನಕ್ಕೆ ತೆಗೆದುಕೊಳ್ಳಬಾರದು (Bathing tips) . 10 ನಿಮಿಷಗಳಿಗಿಂತ ಹೆಚ್ಚು ಕಾಲ ನೀರಿನಲ್ಲಿರುವುದು ಹಾನಿಕಾರಕ. ಏಕೆಂದರೆ, ಹೆಚ್ಚು ಕಾಲ ಹರಿಯುವ ನೀರಿನ ಅಡಿಯಲ್ಲಿ ಇದ್ದರೆ, ಚರ್ಮ ನೈಸರ್ಗಿಕ ತೈಲಗಳನ್ನು ಕಳೆದುಕೊಳ್ಳುವ ಅಪಾಯ ಹೆಚ್ಚಾಗುತ್ತದೆ. 

ಸ್ನಾನಕ್ಕೆ ಬಳಸುವ ನೀರು  ಹೀಗಿರಬೇಕು ? 
ಸ್ನಾನಕ್ಕೆ ಯಾವ ರೀತಿಯ ನೀರನ್ನು ಬಳಸುತ್ತೀರಿ ಎನ್ನುವುದು ಕೂಡಾ ಮುಖ್ಯವಾಗಿರುತ್ತದೆ. ಕೆಲವರಿಗೆ ಬಿಸಿ ಬಿಸಿ ನೀರನ್ನು (Hot water) ಬಳಸುವ ಅಭ್ಯಾಸವಿದ್ದರೆ, ಇನ್ನು ಕೆಲವರಿಗೆ ತಣ್ಣೀರನ್ನೇ ಬಳಸುವ ಅಭ್ಯಾಸವಿರುತ್ತದೆ. ಇವು ಎರಡೂ ವಿಧಾನ ಸರಿಯಲ್ಲ.  ಉಗುರುಬೆಚ್ಚಗಿನ ನೀರನ್ನು ಸ್ನಾನಕ್ಕೆ ಬಳಸುವುದು ಹೆಚ್ಚು ಪ್ರಯೋಜನಕಾರಿ. ತುಂಬಾ ಬಿಸಿ ಅಥವಾ ತಣ್ಣೀರಿನಿಂದ ಸ್ನಾನ ಮಾಡಿದರೂ ಒಣ ಚರ್ಮದ ಸಮಸ್ಯೆ ಕಾಡುತ್ತದೆ. 

ಇದನ್ನೂ ಓದಿ:  Health Tips: ಮೆಟ್ಟಿಲುಗಳನ್ನು ಹತ್ತುವಾಗ, ಇಳಿಯುವಾಗ ನಿಮಗೂ ಏದುಸಿರು ಬರುತ್ತಾ? ಈ ಬಗ್ಗೆ ಹುಷಾರಾಗಿರಿ!

ಶವರ್ ಟಿಪ್ಸ್: 
ಸ್ನಾನಕ್ಕೆ ಬಕೆಟ್ ಬಳಕೆಯನ್ನೇ ಆಯುರ್ವೇದ ಶಿಫಾರಸು ಮಾಡುತ್ತದೆ. ಏಕೆಂದರೆ, ಈ ವಿಧಾನದಲ್ಲಿ ನೀರು ತಲೆಯಿಂದ ಪಾದದವರೆಗೂ ಸಿಗುತ್ತದೆ. ಇದು ತ್ವಚೆಯ ಮೃದುತ್ವವನ್ನು ಕಾಪಾಡುತ್ತದೆ ಮತ್ತು ಶವರ್‌ನ ವೇಗದ ಹರಿವಿಗೆ ಹೋಲಿಸಿದರೆ ನೈಸರ್ಗಿಕ ಎಣ್ಣೆಯನ್ನು ಉಳಿಸಿಕೊಳ್ಳುತ್ತದೆ.

ಸಾಬೂನು : ಸ್ನಾನಕ್ಕೆ ಸೌಮ್ಯ ಶವರ್ ಜೆಲ್ ಅಥವಾ ನೈಸರ್ಗಿಕ ಸೋಪ್ ಬಳಸಿ. ನೀವು ನೈಸರ್ಗಿಕ ಸೋಪ್ ಬದಲಿಗೆ ಗಿಡಮೂಲಿಕೆ ಪುಡಿಯನ್ನು ಕೂಡ ಬಳಸಬಹುದು. 

ಆಯುರ್ವೇದ ಮಾಯಿಶ್ಚರೈಸರ್:  ಸ್ನಾನದ ನಂತರ ಸ್ವಲ್ಪ ಎಳ್ಳಿನ ಎಣ್ಣೆಯನ್ನು ಒದ್ದೆ ಚರ್ಮದ ಮೇಲೆ ಹಚ್ಚಬೇಕು.   ಹೀಗೆ ಮಾಡಿದ ನಂತರ ಮೃದುವಾದ ಟವಲ್ ನಿಂದ ಚರ್ಮವನ್ನು ಒಣಗಿಸಬೇಕು. ಮಾರುಕಟ್ಟೆಯಲ್ಲಿ ಸಿಗುವ ಮಾಯಿಶ್ಚರೈಸರ್ ಗೆ ಇದು ಅತ್ಯುತ್ತಮ ಪರ್ಯಾಯವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News