Almond Side Effects : ನೀವು ಈ ಸಮಸ್ಯೆಗಳಿಂದ ಬಳಲುತ್ತಿದ್ದರೆ ತಿನ್ನಬೇಡಿ 'ಬಾದಾಮಿ' : ತಿಂದರೆ ಅಪಾಯ ತಪ್ಪಿದಲ್ಲ!

ಈ ಸಮಸ್ಯೆಗಳಿಂದ ಬಳಲುವವರು ಬಾದಾಮಿ ತಿಂದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ನಿಮ್ಮ ಸಮಸ್ಯೆಯನ್ನು ಹೆಚ್ಚಿಸಬಹುದು.

Written by - Channabasava A Kashinakunti | Last Updated : Jan 20, 2022, 09:58 AM IST
  • ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆ ಹೆಚ್ಚಾಗಬಹುದು
  • ಕಿಡ್ನಿ ಸಮಸ್ಯೆ ಇದ್ದರೆ ಸೇವಿಸಬೇಡಿ
  • ಇದರಿಂದ ಹೆಚ್ಚಾಗಬಹುದು ಬೊಜ್ಜು
Almond Side Effects : ನೀವು ಈ ಸಮಸ್ಯೆಗಳಿಂದ ಬಳಲುತ್ತಿದ್ದರೆ ತಿನ್ನಬೇಡಿ 'ಬಾದಾಮಿ' : ತಿಂದರೆ ಅಪಾಯ ತಪ್ಪಿದಲ್ಲ! title=

ನವದೆಹಲಿ : ಬಾದಾಮಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತಿದೆ, ಆದರೆ ಬಾದಾಮಿ ಸೇವನೆಯು ಕೆಲವು ಸಮಸ್ಯೆಗಳಲ್ಲಿ ನಿಮಗೆ ಭಾರೀ ಹಾನಿ ಉಂಟು ಮಾಡುತ್ತದೆ. ಈ ಸಮಸ್ಯೆಗಳಿಂದ ಬಳಲುವವರು ಬಾದಾಮಿ ತಿಂದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ನಿಮ್ಮ ಸಮಸ್ಯೆಯನ್ನು ಹೆಚ್ಚಿಸಬಹುದು.

ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುವವರು

ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಬಾದಾಮಿ(Almond) ತಿನ್ನಬೇಡಿ. ಇದರಲ್ಲಿ ಸಾಕಷ್ಟು ಫೈಬರ್ ಇದ್ದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇದು ಅಸಿಡಿಟಿ ಮತ್ತು ಮಲಬದ್ಧತೆಗೆ ಕಾರಣವಾಗಬಹುದು. ನಾರಿನಂಶವಿರುವ ಬಾದಾಮಿಯನ್ನು ಸೇವಿಸುವುದರಿಂದ ಮೆಗ್ನೀಸಿಯಮ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಸತುವು ದೇಹದಲ್ಲಿ ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದು ನಿಮಗೆ ಸಂಪೂರ್ಣ ಪೋಷಣೆಯನ್ನು ನೀಡುವುದಿಲ್ಲ.

ಇದನ್ನೂ ಓದಿ : Black Pepper With Ghee: ಉತ್ತಮ ಆರೋಗ್ಯಕ್ಕಾಗಿ ನಿತ್ಯ ಬೆಳಿಗ್ಗೆ ಕರಿಮೆಣಸನ್ನು ತುಪ್ಪದೊಂದಿಗೆ ಸೇವಿಸಿ

ಮೂತ್ರಪಿಂಡದಲ್ಲಿ ಕಲ್ಲು ಹೊಂದಿರುವ

ಮೂತ್ರಪಿಂಡ ಅಥವಾ ಪಿತ್ತಕೋಶದಲ್ಲಿ ಕಲ್ಲಿನ ಸಮಸ್ಯೆಯಿದ್ದರೆ, ಬಾದಾಮಿ ಸೇವನೆಯು ಇದರಲ್ಲೂ ನಿಮಗೆ ಹಾನಿ ಮಾಡುತ್ತದೆ. ಕಲ್ಲುಗಳ ಸಮಸ್ಯೆಯಲ್ಲಿ ಬಾದಾಮಿ ಸೇವಿಸಬೇಡಿ. ಇದನ್ನು ತಿಂದರೆ ಸಮಸ್ಯೆ ಹೆಚ್ಚಾಗಬಹುದು.

ಅಧಿಕ ರಕ್ತದೊತ್ತಡ ಇರುವವರು

ರಕ್ತದೊತ್ತಡದ(Blood Pressure) ಔಷಧಿಗಳನ್ನು ನಿಯಮಿತವಾಗಿ ಸೇವಿಸುವ ಅಧಿಕ ರಕ್ತದೊತ್ತಡ ರೋಗಿಗಳಿಗೆ ಬಾದಾಮಿ ಸೇವನೆಯು ಹಾನಿಕಾರಕವಾಗಿದೆ. ಅಧಿಕ ರಕ್ತದೊತ್ತಡದ ಸಮಸ್ಯೆಯಲ್ಲಿ ಬಾದಾಮಿ ಸೇವನೆಯನ್ನು ತಪ್ಪಿಸಿ.

ಬೊಜ್ಜು ಸಮಸ್ಯೆ ಇರುವವರು 

ಬಾದಾಮಿಯಲ್ಲಿ ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬಿನಂಶವಿದೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು. ನೀವು ತೂಕ ಇಳಿಸಿಕೊಳ್ಳುವ ಯೋಚನೆಯಲ್ಲಿದ್ದರೆ ಬಾದಾಮಿಯನ್ನು ಸೇವಿಸಬೇಡಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News