Weight Loss Exercise: ತೂಕ ಇಳಿಸಲು ಯಾವ ಸಮಯದಲ್ಲಿ ವ್ಯಾಯಾಮ ಮಾಡಬೇಕು?

ತೂಕ ಇಳಿಸುವ ವ್ಯಾಯಾಮಕ್ಕೆ ಸರಿಯಾದ ಸಮಯ: ಸಂಶೋಧನೆಯೊಂದರಲ್ಲಿ ಸಂಜೆಗೆ ಹೋಲಿಸಿದರೆ ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ವ್ಯಕ್ತಿಯು ತನ್ನ ತೂಕವನ್ನು ವೇಗವಾಗಿ ಕಡಿಮೆ ಮಾಡಬಹುದು. ಈ ಕಾರಣದಿಂದ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. 

Written by - Puttaraj K Alur | Last Updated : Feb 16, 2023, 12:56 PM IST
  • ಬೆಳಗ್ಗೆ ವ್ಯಾಯಾಮ ಮಾಡುವುದು ಉಳಿದ ದಿನಗಳಿಗಿಂತ ಹೆಚ್ಚು ಪ್ರಯೋಜನಕಾರಿ
  • ಮಧ್ಯಾಹ್ನ-ಸಂಜೆಯ ವ್ಯಾಯಾಮವು ಬೆಳಗಿನ ವ್ಯಾಯಾಮದಷ್ಟು ಕೊಬ್ಬು ಕರಗಿಸುವುದಿಲ್ಲ
  • ಬೆಳಗಿನ ವ್ಯಾಯಾಮದಿಂದ ಉತ್ತಮ ಫಲಿತಾಂಶ ದೊರೆತಿದೆ ಎಂದಿರುವ ತಜ್ಞರು
Weight Loss Exercise: ತೂಕ ಇಳಿಸಲು ಯಾವ ಸಮಯದಲ್ಲಿ ವ್ಯಾಯಾಮ ಮಾಡಬೇಕು? title=
ತೂಕ ಇಳಿಸುವ ವ್ಯಾಯಾಮಕ್ಕೆ ಸರಿಯಾದ ಸಮಯ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೆಚ್ಚಿನ ತೂಕದ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಅದನ್ನು ಕಡಿಮೆ ಮಾಡಲು ಜನರು ಅನೇಕ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಆದರೆ ಅವರ ತೂಕ ಮಾತ್ರ ಕಡಿಮೆಯಾಗುವುದಿಲ್ಲ.ಆಹಾರದ ಬದಲಾವಣೆ ಮತ್ತು ವ್ಯಾಯಾಮದ ಮೂಲಕ ತೂಕ ನಷ್ಟದಲ್ಲಿ ಫಲಿತಾಂಶ ಕಾಣಬಹುದು. ಆದರೆ ಇದು ವ್ಯಾಯಾಮದ ಸಮಯವನ್ನು ಅವಲಂಬಿಸಿರುತ್ತದೆ, ಯಾವ ಸಮಯದಲ್ಲಿ ವ್ಯಾಯಾಮವು ಹೆಚ್ಚಿನ ಪ್ರಯೋಜನ ನೀಡುತ್ತದೆ. ಸಂಜೆಗೆ ಹೋಲಿಸಿದರೆ ಬೆಳಗ್ಗೆ ವ್ಯಾಯಾಮ ಮಾಡಿದರೆ ಅದು ನಿಮ್ಮ ತೂಕವನ್ನು 2 ಪಟ್ಟು ಹೆಚ್ಚು ವೇಗದಲ್ಲಿ ಕಡಿಮೆ ಮಾಡುತ್ತದೆ. ಇದರ ಬಗ್ಗೆ ಸಂಶೋಧನೆ ಏನು ಹೇಳಿದೆ ಎಂದು ತಿಳಿಯಿರಿ.

ಪ್ರತಿಯೊಬ್ಬರೂ ವ್ಯಾಯಾಮಕ್ಕೆ ತಮ್ಮದೇ ಆದ ಸಮಯ ನಿಗದಿಪಡಿಸಿರುತ್ತಾರೆ. ಕೆಲವರು ಸಂಜೆ ವ್ಯಾಯಾಮ ಮಾಡಲು ಇಷ್ಟಪಡುತ್ತಾರೆ, ಆದರೆ ಕೆಲವರು ಬೆಳಗ್ಗೆ ವ್ಯಾಯಾಮ ಮಾಡಲು ಬಯಸುತ್ತಾರೆ. ಬೆಳಗ್ಗೆ ಮತ್ತು ಸಂಜೆ ಸಮಯವಿಲ್ಲವೆಂದು ಕೆಲವರು ಮಧ್ಯಾಹ್ನ ವ್ಯಾಯಾಮ ಮಾಡುತ್ತಾರೆ. ಬೆಳಗ್ಗೆ ವ್ಯಾಯಾಮ ಮಾಡುವುದು ಉಳಿದ ದಿನಗಳಿಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಮಧ್ಯಾಹ್ನ ಅಥವಾ ಸಂಜೆಯ ವ್ಯಾಯಾಮವು ಬೆಳಗಿನ ವ್ಯಾಯಾಮದಷ್ಟು ಕೊಬ್ಬನ್ನು ಸುಡುವುದಿಲ್ಲ.

ಇದನ್ನೂ ಓದಿ: ಬಾಳೆಹಣ್ಣಿನ ಜೊತೆ ಮೊಸರು ಸೇವಿಸಿದ್ರೆ ಈ ರೋಗಗಳು ಹತ್ತಿರವೂ ಸುಳಿಯುವುದಿಲ್ಲ

ಈ ಬಗ್ಗೆ ಸಂಶೋಧಕರು ಉನ್ನತಮಟ್ಟದ ಅಧ್ಯಯನ ಕೈಗೊಂಡಿದ್ದಾರೆ. ಈ ಅಧ್ಯಯನದಲ್ಲಿ ಬೆಳಗಿನ ವ್ಯಾಯಾಮವು ಕೊಬ್ಬನ್ನು ವೇಗವಾಗಿ ಸುಡುತ್ತದೆ ಎಂದು ಕಂಡುಬಂದಿದೆ. ಬೆಳಗ್ಗೆ ತಡವಾಗಿ ವ್ಯಾಯಾಮ ಮಾಡುವುದರಿಂದ, ವ್ಯಕ್ತಿಯು ಸಂಜೆಗಿಂತ ವೇಗವಾಗಿ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಬಹುದು ಎಂದು ಸಂಶೋಧನೆ ತೋರಿಸುತ್ತದೆ.

ಬೆಳಗಿನ ವ್ಯಾಯಾಮ ಉತ್ತಮವೆಂದು ನಮ್ಮ ಫಲಿತಾಂಶಗಳು ಸೂಚಿಸುತ್ತವೆಂದು ತಜ್ಞರು ಹೇಳಿದ್ದಾರೆ. ಬೆಳಗಿನ ವ್ಯಾಯಾಮವು ಚಯಾಪಚಯ ಹೆಚ್ಚಿಸಲು ಮತ್ತು ಕೊಬ್ಬನ್ನು ಕಡಿಮೆ ಮಾಡಲು ಉತ್ತಮವಾಗಿದೆ. ಆದರೆ ತಡರಾತ್ರಿಯ ವ್ಯಾಯಾಮವು ನಿಮಗೆ ಹೆಚ್ಚು ಪ್ರಯೋಜನ ನೀಡುವುದಿಲ್ಲ. ನೀವು ತೂಕ ಇಳಿಸಿಕೊಳ್ಳಬಯಸಿದರೆ, ಬೆಳಗಿನ ವ್ಯಾಯಾಮವು ನಿಮಗೆ ಉತ್ತಮ ಮತ್ತು ಉತ್ತಮ ಪರಿಹಾರವಾಗಿದೆ.

ಇದನ್ನೂ ಓದಿ: ನಿಮ್ಮನ್ನು ಶೀತ-ಕೆಮ್ಮಿನಿಂದ ದೂರವಿರಿಸುತ್ತೆ ಈ 5 ಹಣ್ಣುಗಳು

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News