ಈ ಆರೋಗ್ಯ ಸಮಸ್ಯೆ ಇರುವವರು ಬಾದಾಮಿಯನ್ನು ತಿನ್ನಲೇಬಾರದು..!

Health Tips: ಬಾದಾಮಿಯ ಪ್ರಯೋಜನಗಳ ಬಗ್ಗೆ ನೀವು ಈಗಾಗಲೇ ಕೇಳಿದ್ದೀರಿ. ಆದರೆ ಬಾದಾಮಿ ಕೆಲವರಿಗೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? ತಿಳಿದಿಲ್ಲವಾದರೇ ಇದೀಗ ತಿಳಿಯೋಣ ಬನ್ನಿ..  

Written by - Savita M B | Last Updated : Dec 18, 2023, 02:10 PM IST
  • ಆರೋಗ್ಯಕರ ಆಹಾರವನ್ನು ಸೇವಿಸುವುದು ನಿಮ್ಮ ದೇಹಕ್ಕೂ ಒಳ್ಳೆಯದು.
  • ಸಾಮಾನ್ಯವಾಗಿ ಬಾದಾಮಿಯನ್ನು ಎಲ್ಲರೂ ಹೆಚ್ಚು ಸೇವಿಸುತ್ತಾರೆ
  • ಆದರೆ ಬಾದಾಮಿಯನ್ನು ಕೆಲವು ಸಮಸ್ಯೆ ಇರುವವರು ಸೇವಸಲೇಬಾರದು
ಈ ಆರೋಗ್ಯ ಸಮಸ್ಯೆ ಇರುವವರು ಬಾದಾಮಿಯನ್ನು ತಿನ್ನಲೇಬಾರದು..!  title=

Almonds: ಆರೋಗ್ಯಕರ ಆಹಾರವನ್ನು ಸೇವಿಸುವುದು ನಿಮ್ಮ ದೇಹಕ್ಕೂ ಒಳ್ಳೆಯದು. ಆದರೆ ಜೀವನಶೈಲಿಯಲ್ಲಿನ ಬದಲಾವಣೆಯಿಂದಾಗಿ ಜನರು ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು, ಥೈರಾಯ್ಡ್ ಮತ್ತು ಬೊಜ್ಜು ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದ್ದರಿಂದಲೇ ಎಷ್ಟೇ ಬ್ಯುಸಿ ಇದ್ದರೂ ಏನು ತಿನ್ನಬೇಕು, ಕುಡಿಯಬೇಕು ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. 

ಸಾಮಾನ್ಯವಾಗಿ ಬಾದಾಮಿಯನ್ನು ಎಲ್ಲರೂ ಹೆಚ್ಚು ಸೇವಿಸುತ್ತಾರೆ.. ಏಕೆಂದರೆ ಅದು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎನ್ನುವುದು ಎಲ್ಲರಿಗೂ ಗೊತ್ತು.. ಆದರೆ ಕೆಲವರಿಗೆ ಈ ಪೌಷ್ಟಿಕ ಬಾದಾಮಿ ಹಾನಿಯುಂಟುಮಾಡುತ್ತದೆ ಎನ್ನುವುದು ನಿಮಗೆ ಗೊತ್ತೇ?.. 

ಇದನ್ನೂ ಓದಿ-ಸಾವಿರ ರೂಪಾಯಿ ಇದ್ದರೆ ಇಂದೇ ಈ ದೇಶಕ್ಕೆ ಭೇಟಿ ನೀಡಿ

ಬಾದಾಮಿ ಕೂಡ ತೂಕ ಇಳಿಸಲು ಸಹಾಯ ಮಾಡುತ್ತದೆ ಮತ್ತು ಬಾದಾಮಿ ತಿಂದರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ.. ಅದರಲ್ಲಿರುವ ಫೈಬರ್, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳು ಇದಕ್ಕೆ ಕಾರಣ. ಬಾದಾಮಿಯು ಮೆಗ್ನೀಸಿಯಮ್ ಅನ್ನು ಹೊಂದಿದ್ದು.. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮತ್ತು ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಬಹುದಾಗಿದೆ.. 

ಬಾದಾಮಿ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವುದರ ಜೊತೆಗೆ ಮೂಳೆಗಳನ್ನು ಬಲಪಡಿಸಲು ಮತ್ತು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ-ಈ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಏಕಗ್ರಾತೆಯನ್ನು ಹೆಚ್ಚಿಸಿಕೊಳ್ಳಬಹುದು..

ಇನ್ನು ನಿಮಗೆ ಜೀರ್ಣಕಾರಿ ಸಮಸ್ಯೆಗಳಿದ್ದರೆ, ಬಾದಾಮಿ ತಿನ್ನುವಾಗ ನೀವು ಜಾಗರೂಕರಾಗಿರಬೇಕು. ಬಾದಾಮಿಯಲ್ಲಿ 170 ಗ್ರಾಂ ಫೈಬರ್ ಇರುತ್ತದೆ. ದೇಹಕ್ಕೆ ಪ್ರತಿದಿನ 25 ರಿಂದ 40 ಗ್ರಾಂ ಫೈಬರ್ ಅಗತ್ಯವಿದೆ. ಆದ್ದರಿಂದ ನೀವು ಪ್ರತಿದಿನ 3 ರಿಂದ 4 ಬಾದಾಮಿಗಳನ್ನು ಸೇವಿಸಿದರೆ ದೇಹದ ಫೈಬರ್ ಅಗತ್ಯವನ್ನು ಪೂರೈಸಿಕೊಳ್ಳಬಹುದು.. ಆದರೆ ಹೆಚ್ಚು ಬಾದಾಮಿ ತಿಂದರೆ, ಅದು ಹೊಟ್ಟೆಯ ಸಮಸ್ಯೆ ಮತ್ತು ಮಲಬದ್ಧತೆಗೆ ಕಾರಣವಾಗಬಹುದು... ನೀವು ಯಾವುದಾದರೂ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಬಾದಾಮಿ ಸೇವನೆಯ ಪ್ರಮಾಣಕ್ಕೆ ಗಮನ ಕೊಡುವುದು ಮುಖ್ಯ. 

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಬಾದಾಮಿಯನ್ನು ನಿಯಂತ್ರಿತ ಪ್ರಮಾಣದಲ್ಲಿ ಸೇವಿಸಿ... ಬಾದಾಮಿಯಲ್ಲಿ ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬಿನಂಶವಿದೆ. ಹೀಗಾಗಿ ನೀವು ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಬಾದಾಮಿಯನ್ನು ಸೇವಿಸಿದರೆ ನಿಮ್ಮ ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News