Watermelon: ಆಲ್ಕೋಹಾಲ್ ಸೇವಿಸುವವರೇ ಕಲ್ಲಂಗಡಿ ತಿನ್ನುವ ಮೊದಲು ಇರಲಿ ಎಚ್ಚರ

ಬೇಸಿಗೆಯಲ್ಲಿ ನೀವು ಸಹ ಕಲ್ಲಂಗಡಿ ತಿನ್ನುತ್ತಿದ್ದರೆ, ಅದರ ಅನಾನುಕೂಲತೆಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.  

Written by - Yashaswini V | Last Updated : Apr 9, 2021, 02:49 PM IST
  • ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ
  • ಕಲ್ಲಂಗಡಿ ಸೇವನೆ ಆರೋಗ್ಯದ ದೃಷ್ಟಿಯಿಂದ ಬಹಳ ಪ್ರಯೋಜನಕಾರಿಯಾಗಿದೆ
  • ಆದರೆ ಕೆಲವರಿಗೆ ಕಲ್ಲಂಗಡಿ ಸೇವನೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು
Watermelon: ಆಲ್ಕೋಹಾಲ್ ಸೇವಿಸುವವರೇ ಕಲ್ಲಂಗಡಿ ತಿನ್ನುವ ಮೊದಲು ಇರಲಿ ಎಚ್ಚರ title=
Watermelon Side Effects

ಬೆಂಗಳೂರು: ಬೇಸಿಗೆಯಲ್ಲಿ ತಂಪಾದ ಆಹಾರ, ಪಾನೀಯ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅಂತೆಯೇ ಬೇಸಿಗೆಯಲ್ಲಿ ಇತರ ಆಹಾರಗಳಿಗಿಂತ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಅದರಲ್ಲೂ ಬಹಳ ಮಂದಿಗೆ ಕಲ್ಲಂಗಡಿ ಹಣ್ಣೆಂದರೆ ಬಲು ಪ್ರೀತಿ.  ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.  ಏಕೆಂದರೆ ಇದು ದೇಹದಲ್ಲಿನ ನೀರಿನ ಕೊರತೆಯನ್ನು ಸರಿದೂಗಿಸುತ್ತದೆ.  

ಕಲ್ಲಂಗಡಿಯಲ್ಲಿ ಸುಮಾರು 97% ನೀರಿನ ಅಂಶ ಇರುತ್ತದೆ, ಇದು ದೇಹದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಪೂರೈಸುತ್ತದೆ. ಕಲ್ಲಂಗಡಿ ಸೇವನೆ ಆರೋಗ್ಯದ ದೃಷ್ಟಿಯಿಂದ ಬಹಳ ಪ್ರಯೋಜನಕಾರಿಯಾಗಿದೆ. ಆದರೆ ಕೆಲವರಿಗೆ ಕಲ್ಲಂಗಡಿ ಸೇವನೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಅಂತಹ ಪರಿಸ್ಥಿತಿಯಲ್ಲಿ ನೀವು ಕೂಡ ಬೇಸಿಗೆಯಲ್ಲಿ ಹೆಚ್ಚಾಗಿ ಕಲ್ಲಂಗಡಿ ತಿನ್ನುತ್ತಿದ್ದರೆ, ಅದರ ಅನಾನುಕೂಲತೆಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. 

- ಸಕ್ಕರೆ ರೋಗಿಗಳಿಗೆ ಕಲ್ಲಂಗಡಿ (Watermelon) ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸುತ್ತದೆ. ನೈಸರ್ಗಿಕ ಸಕ್ಕರೆ ಕಲ್ಲಂಗಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. 

ಇದನ್ನೂ ಓದಿ - Watermelon Seeds Benefits:ಕಲ್ಲಂಗಡಿ ಬೀಜಗಳ ಪ್ರಯೋಜನಗಳನ್ನು ತಿಳಿದರೆ ನೀವು ಎಂದಿಗೂ ಅದನ್ನು ಎಸೆಯುವುದಿಲ್ಲ

- ಕಲ್ಲಂಗಡಿ ಹೃದಯ ರೋಗಿಗಳಿಗೆ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸುತ್ತದೆ. ಕಲ್ಲಂಗಡಿಯಲ್ಲಿ ಪೊಟ್ಯಾಸಿಯಮ್ ಪ್ರಮಾಣ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ಇದನ್ನು ತಿನ್ನುವುದರಿಂದ ಹೃದಯ (Heart) ಬಡಿತ  ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ - ಕಲ್ಲಂಗಡಿ ಜೊತೆಗೆ ಅದರ ಸಿಪ್ಪೆ-ಬೀಜಗಳು ಸಹ ನೀಡುತ್ತೆ ಆರೋಗ್ಯಕರ ಪ್ರಯೋಜನಗಳು

- ಕಲ್ಲಂಗಡಿ ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಬಹುದು. ಕಲ್ಲಂಗಡಿ ಸೋರ್ಬಿಟೋಲ್ ಎಂಬ ಸಕ್ಕರೆ ಸಂಯುಕ್ತವನ್ನು ಹೊಂದಿರುತ್ತದೆ, ಇದರಿಂದಾಗಿ ಕೆಲವರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.

- ಆಲ್ಕೋಹಾಲ್ ಸೇವಿಸುವ ಜನರು ಕಲ್ಲಂಗಡಿ ತಿನ್ನಬಾರದು. ವಾಸ್ತವವಾಗಿ, ಕಲ್ಲಂಗಡಿಯಲ್ಲಿ ಹೆಚ್ಚಿನ ಪ್ರಮಾಣದ ಲೈಕೋಪೀನ್ ಕಂಡುಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆಲ್ಕೋಹಾಲ್ ಸೇವಿಸುವ ಜನರು ಕಲ್ಲಂಗಡಿ ತಿನ್ನುವುದರಿಂದ  ಯಕೃತ್ತಿನಲ್ಲಿ ಊತದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಆಲ್ಕೋಹಾಲ್ ಸೇವಿಸುವವರು ಕಲ್ಲಂಗಡಿ ತಿನ್ನುವ ಮೊದಲು ಎಚ್ಚರದಿಂದಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News