ಬೆಳಿಗ್ಗೆ ಎದ್ದು ಈ ಮೂರು ಕೆಲಸ ಮಾಡಿದರೆ ನಿಯಂತ್ರಣದಲ್ಲಿರುವುದು ಬ್ಲಡ್ ಶುಗರ್

ಕೆಲವೊಮ್ಮೆ ಔಷಧಿಗಳ ಸಹಾಯದಿಂದ ಮಧುಮೇಹದಂತಹ ಸಮಸ್ಯೆಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಬೆಳಿಗ್ಗೆ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವ ಮೂಲಕ, ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ತರುವುದು ಸಾಧ್ಯವಾಗುತ್ತದೆ.   

Written by - Ranjitha R K | Last Updated : Dec 13, 2022, 04:30 PM IST
  • ಬೆಳಗ್ಗೆ ಎದ್ದ ತಕ್ಷಣ ಉಗುರುಬೆಚ್ಚನೆಯ ನೀರು ಕುಡಿಯಿರಿ
  • ದೇಹವನ್ನು ಕ್ರಿಯಾಶೀಲವಾಗಿರಿಸಿಕೊಳ್ಳಿ
  • ಈ ವಿಷಯಗಳನ್ನು ನೆನಪಿನಲ್ಲಿಡಿ
ಬೆಳಿಗ್ಗೆ ಎದ್ದು ಈ ಮೂರು ಕೆಲಸ ಮಾಡಿದರೆ ನಿಯಂತ್ರಣದಲ್ಲಿರುವುದು ಬ್ಲಡ್ ಶುಗರ್  title=
diabetes control tips

ಬೆಂಗಳೂರು : ಚಳಿಗಾಲದಲ್ಲಿ ಮಧುಮೇಹವನ್ನು ನಿಯಂತ್ರಿಸುವುದು ಸ್ವಲ್ಪ ಕಷ್ಟ. ಯಾಕೆಂದರೆ ಚಳಿ ಎನ್ನುವ ಕಾರಣಕ್ಕೆ  ಕರಿದ ಹುರಿದ ತಿನಿಸುಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಇನ್ನು ಚಳಿಗಾಲದಲ್ಲಿ ಹೆಚ್ಚು ಹಸಿವಾಗುವುದರಿಂದ ಕೈಗೆ ಏನು ಸಿಗುತ್ತದೆಯೋ ಅದನ್ನು ತಿಂದು ಬಿಡುತ್ತೇವೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರುಪೇರಾಗಲು  ಕಾರಣವಾಗುತ್ತದೆ.  ಚಳಿಗಾಲದಲ್ಲಿ ಹೆಚ್ಚು ದೈಹಿಕವಾಗಿ ಸಕ್ರಿಯವಾಗಿರಲು ಕೂಡಾ ಸಾಧ್ಯವಾಗುವುದಿಲ್ಲ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ. ಹೆಚ್ಚಿನ ಮಧುಮೇಹ ರೋಗಿಗಳು ಚಳಿಗಾಲದಲ್ಲಿ ಔಷಧಿಗಳ ಮೇಲೆಯೇ  ಅವಲಂಬಿತರಾಗಿರುತ್ತಾರೆ. ಆದರೆ, ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.  

1. ಬೆಳಗ್ಗೆ ಎದ್ದ ತಕ್ಷಣ ಉಗುರುಬೆಚ್ಚನೆಯ ನೀರು ಕುಡಿಯಿರಿ :
ಮಧುಮೇಹ ರೋಗಿಗಳು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವುಗಳಲ್ಲಿ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಕೂಡಾ ಒಂದು. ನೀರು ಕುಡಿಯುವಾಗ ಉಗುರು ಬೆಚ್ಚಗೆ ನೀರನ್ನು ಕುಡಿಯಬೇಕು ಎನ್ನುವುದು ನೆನಪಿರಲಿ.  ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರನ್ನು ಕುಡಿಯುವುದರಿಂದ ದೇಹದಿಂದ ವಿಷಕಾರಿ ಅಂಶವನ್ನು ಹೊರಹಾಕಲು ಸಹಾಯವಾಗುತ್ತದೆ.   ಹೀಗಾಗಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಕೂಡಾ ಸಾಧ್ಯವಾಗುತ್ತದೆ. 

ಇದನ್ನೂ ಓದಿ : Winter foods: ಚಳಿಗಾಲದ ರೋಗಗಳಿಂದ ದೂರವಿರಲು ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ

2. ದೇಹವನ್ನು ಕ್ರಿಯಾಶೀಲವಾಗಿರಿಸಿಕೊಳ್ಳಿ : 
ಮಧುಮೇಹ ರೋಗಿಗಳಿಗೆ ತಮ್ಮ ದೇಹವನ್ನು ಆಕ್ಟಿವ್ ಆಗಿ ಇಟ್ಟು  ಕೊಳ್ಳುವುದರ ಬಗ್ಗೆ ಗಮ ಹರಿಸಬೇಕು.  ಚಳಿ ಎನ್ನುವ ಕಾರಣಕ್ಕೆ ಬಹುತೇಕ ಮಂದಿ ತಡವಾಗಿ ಏಳುವುದು, ಕೂತಲ್ಲೇ ಕೂರುವುದಕ್ಕೆ ಇಷ್ಟಪಡುತ್ತಾರೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯು ಅನೇಕ ಬಾರಿ ಹೆಚ್ಚಾಗುತ್ತದೆ. ಹೆಚ್ಚುತ್ತಿರುವ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು, ದೇಹವನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳಬೇಕು.   

3. ಬೆಳಗಿನ ಧ್ಯಾನ  : 
ಬೆಳಿಗ್ಗೆ ಧ್ಯಾನವನ್ನು ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಒಳಗೊಂಡಂತೆ ದೇಹದ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಮಧುಮೇಹ ರೋಗಿಗಳಿಗೆ ಬೆಳಿಗ್ಗೆ ಕನಿಷ್ಠ 15 ನಿಮಿಷಗಳ ಕಾಲ  ಮೆಡಿಟೇಶನ್ ಮಾಡುವಂತೆ ಸೂಚಿಸಲಾಗುತ್ತದೆ. ಇದು ದೇಹವು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ :  Radish Side Effect: ಮೂಲಂಗಿ ತಿಂದ ಬಳಿಕ ಈ ಆಹಾರಗಳನ್ನು ತಪ್ಪಿಯೂ ಸೇವಿಸಬೇಡಿ: ವಿಷವಾಗಿ ಪರಿಣಮಿಸುತ್ತೆ ಎಚ್ಚರ

ಈ ವಿಷಯಗಳನ್ನು ನೆನಪಿನಲ್ಲಿಡಿ :
ಯಾವುದೇ ಪರಿಸ್ಥಿತಿಯಲ್ಲಾದರೂ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಮೇಲಿನ ವಿಧಾನಗಳಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಸಾಧ್ಯವಾಗದಿದ್ದರೆ ಅದು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಅದಕ್ಕಾಗಿಯೇ ವೈದ್ಯರೊಂದಿಗೆ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದು ಅವಶ್ಯಕ. ಈ ಮೂಲಕ ಮದುಮೇಹ ನಿಯಂತ್ರಣಕ್ಕೆ ಬಾರದಿರುವುದಕ್ಕೆ ಏನು ಕಾರಣ ಎನ್ನುವುದನ್ನು  ಕಂಡುಹಿಡಿಯಬಹುದು. 

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News