ಇಷ್ಟ ಪಟ್ಟು ಅಮ್ಲೆಟ್ ಚಪ್ಪರಿಸುವ ಮೊದಲು ಈ 10 ವಿಷಯ ತಿಳಿದುಕೊಳ್ಳಿ..!

ಮೊಟ್ಟೆ ಪ್ರೊಟೀನ್ ನ ಮೂಲ. ನಮ್ಮ ಸ್ನಾಯುಗಳ ಬೆಳವಣಿಗೆಯಲ್ಲಿ ಪ್ರೊಟೀನ್  ಮುಖ್ಯ ಪಾತ್ರ ವಹಿಸುತ್ತದೆ. ಸಿಕ್ಸ್ ಪ್ಯಾಕ್ ದೇಹ ಬಯಸುವ ಯುವಕರಿಗೆ ಅಮ್ಲೇಟ್ ಸಾಕಷ್ಟು ಉಪಕಾರಿ.

Written by - Ranjitha R K | Last Updated : Mar 30, 2021, 03:01 PM IST
  • ಆಮ್ಲೆಟ್ ಬಗ್ಗೆ ಹೆಚ್ಚಿಗೆ ಏನೂ ಹೇಳಬೇಕಾದ ಅಗತ್ಯವೇ ಇಲ್ಲ.
  • ಗೊತ್ತಿರಲಿ, ಅಮ್ಲೇಟ್ ನಲ್ಲಿ ಪ್ರೊಟೀನ್ ಸಮೃದ್ಧವಾಗಿ ಸಿಗುತ್ತದೆ.
  • ಈಗ ಅಮ್ಲೆಟ್ ಮತ್ತು ಆರೋಗ್ಯಕ್ಕೆ ಅದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ
ಇಷ್ಟ ಪಟ್ಟು ಅಮ್ಲೆಟ್ ಚಪ್ಪರಿಸುವ ಮೊದಲು ಈ 10 ವಿಷಯ ತಿಳಿದುಕೊಳ್ಳಿ..! title=
ಅಮ್ಲೇಟ್ ನಲ್ಲಿ ಪ್ರೊಟೀನ್ ಸಮೃದ್ಧವಾಗಿ ಸಿಗುತ್ತದೆ (file photo)

ಬೆಂಗಳೂರು : ಆಮ್ಲೆಟ್  (Omlet) ಬಗ್ಗೆ ಹೆಚ್ಚಿಗೆ ಏನೂ ಹೇಳಬೇಕಾದ ಅಗತ್ಯವೇ ಇಲ್ಲ. ಯಾಕೆಂದರೆ,  ಅದು ನಮಗೆಲ್ಲಾ ಚಿರ ಪರಿಚಿತ. ಬ್ರೇಕ್ ಫಾಸ್ಟ್, ಊಟ, ಸ್ನಾಕ್ಸ್ ಹೀಗೆ  ಅಮ್ಲೆಟ್ ಸರ್ವವ್ಯಾಪಿ.  ಫಟಾಫಟ್ ಅಂತ ಮಾಡಿ ಬಿಡಬಹುದು. ತುಂಬಾ ಸಿಂಪಲ್. 
ಈಗ ಅಮ್ಲೆಟ್ ಮತ್ತು ಆರೋಗ್ಯಕ್ಕೆ ಅದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ. ಗೊತ್ತಿರಲಿ, ಅಮ್ಲೇಟ್ ನಲ್ಲಿ ಪ್ರೊಟೀನ್ (Protein) ಸಮೃದ್ಧವಾಗಿ ಸಿಗುತ್ತದೆ. ಹಾಗಾಗಿ, ಅದು ದೇಹಕ್ಕೆ ಬೇಕಾದ ಪೋಷಕಾಂಶಗಳ ಸಮೃದ್ಧ ಮೂಲವೂ ಹೌದು.  ಹಾಗಾದರೆ, ಆಮ್ಲೇಟ್ ತಿಂದರೆ ಆರೋಗ್ಯಕ್ಕಾಗುವ (Health) ಲಾಭಗಳೇನು..? ತಿಳಿದುಕೊಳ್ಳೋಣ.

1.  ಶಕ್ತಿಯ ಪ್ರಧಾನ ಮೂಲ.
ಸಾಮಾನ್ಯವಾಗಿ ನೀವು ನೋಡಿರಬಹುದು. ಅಥ್ಲಿಟ್ ಗಳು ಬೆಳಗೆದ್ದು ಅಮ್ಲೆಟ್ (Omlet) ತಿನ್ನುತ್ತಿರುತ್ತಾರೆ.  ಯಾಕೆ ಅಂದರೆ, ಪ್ರಾಕ್ಟಿಸ್ ಮಾಡುವಾಗ ಅಮ್ಲೇಟ್ ಸಾಕಷ್ಟು ಕ್ಯಾಲರಿ ನೀಡುತ್ತದೆ. ದೇಹಕ್ಕೆ ಕ್ಯಾಲರಿ ಕಡಿಮೆಯಾದಾಗ ಅಮ್ಲೇಟ್ ತಿನ್ನಬೇಕು. 

2. ಬೇಕಾದಷ್ಟು ಪ್ರೊಟೀನ್ ಸಿಗುತ್ತದೆ.
ಮೊಟ್ಟೆ ಪ್ರೊಟೀನ್ ನ (Protein) ಮೂಲ. ನಮ್ಮ ಸ್ನಾಯುಗಳ ಬೆಳವಣಿಗೆಯಲ್ಲಿ ಪ್ರೊಟೀನ್  ಮುಖ್ಯ ಪಾತ್ರ ವಹಿಸುತ್ತದೆ. ಸಿಕ್ಸ್ ಪ್ಯಾಕ್ ದೇಹ ಬಯಸುವ ಯುವಕರಿಗೆ ಅಮ್ಲೇಟ್ ಸಾಕಷ್ಟು ಉಪಕಾರಿ. ಮಕ್ಕಳ ಬೆಳವಣಿಗೆಗೂ ಅಮ್ಲೇಟ್ ಸಾಕಷ್ಟು  ಪ್ರಯೋಜನಕಾರಿ.

ಇದನ್ನೂ ಓದಿ : Back Pain Remedies: ಹಳೆ ಬೆನ್ನುನೋವಿನಿಂದ ಬಳಲುತ್ತಿರುವಿರಾ? ಈ ಉಪಾಯಗಳನ್ನು ಅನುಸರಿಸಿ ನೋಡಿ

3. ವಿಟಮಿನ್ ಗಳ ಕಣಜ.!
ಕ್ಯಾಲರಿ, ಪ್ರೊಟೀನ್ ಅಷ್ಟೇ ಅಲ್ಲ, ಮೊಟ್ಟೆ ವಿಟಮಿನ್ ಗಳ (Vitamin) ಗಣಿ ಕೂಡಾ. ಅಮ್ಲೆಟ್ ತಿಂದರೆ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಡಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಹೇರಳವಾಗಿ ಸಿಗುತ್ತದೆ.  ಈ ವಿಚಾರ ಸಾಕಷ್ಟು ಜನರಿಗೆ ತಿಳಿದಿಲ್ಲ. 

4. ಮೂಳೆಯ ಬಲವರ್ಧಕ.
ನೂರು ಗ್ರಾಂ ನಷ್ಟು ಅಮ್ಲೇಟಿನಲ್ಲಿ 50 ಮಿ ಗ್ರಾಂ ಕ್ಯಾಲ್ಸಿಯಂ (Calcium) ಇರುತ್ತದೆ. ನಿಮಗೆ ಗೊತ್ತೇ ಇದೆ. ಕ್ಯಾಲ್ಸಿಯಂ ಮೂಳೆಯನ್ನು ಬಲಗೊಳಿಸುತ್ತದೆ. ಜೊತೆಗೆ ಮೂಳೆ ಸಂಬಂಧಿ ಕಾಯಿಲೆಗಳನ್ನು ದೂರಮಾಡುತ್ತದೆ. ಹಾಗಾಗಿ, ಕ್ಯಾಲ್ಸಿಯಂ ಕೊರತೆ ಕಾಡುತ್ತಿದ್ದರೆ ಅಮ್ಲೆಟ್ ತಿನ್ನಿ. 

ಇದನ್ನೂ ಓದಿ : Health Benefits Of Green Cardamom: ಹಸಿರು ಏಲಕ್ಕಿ ಸೇವನೆಯ ಈ ಆರೋಗ್ಯಕರ ಲಾಭಗಳು ನಿಮಗೆ ತಿಳಿದಿವೆಯೇ?

5. ರಕ್ತ ಸಂಚಾರ ಸರಾಗವಾಗಿಸುತ್ತದೆ.
ಅಮ್ಲೆಟಿನಲ್ಲಿ ಕಬ್ಬಿಣದಾಂಶ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇದು ದೇಹದಲ್ಲಿ ರಕ್ತ ಸಂಚಾರವನ್ನು (Blood Circulation) ಉತ್ತಮಪಡಿಸುತ್ತದೆ.  ಜೊತೆ ರಕ್ತ ಸಂಬಂಧಿ ಕಾಯಿಲೆಗಳನ್ನೂ ದೂರ ಇಡುತ್ತದೆ.

6.  ಸ್ಟ್ರೆಸ್ ನಿವಾರಕ.
ಸ್ಟ್ರೆಸ್ ಗೆ ಒಳಗಾಗದ ವ್ಯಕ್ತಿ  ಈ ಪ್ರಪಂಚದಲ್ಲಿ ಯಾರೂ ಇಲ್ಲ. ಮೊಟ್ಟೆಯಲ್ಲಿ (Egg) ಮೆಗ್ನೇಶಿಯಂ ಅಂಶ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಹಾಗಾಗಿ, ಅಮ್ಲೆಟ್ ತಿಂದಾಗ, ಮೆಗ್ನೇಶಿಯಂ ಇರುವ ಕಾರಣಕ್ಕೆ ನರಗಳು ನಾರ್ಮಲ್ ಆಗಿರುತ್ತವೆ. ದೇಹಕ್ಕೆ ಆರಾಮ ಅನ್ನಿಸುತ್ತದೆ. ಒತ್ತಡ ತಪ್ಪುತ್ತದೆ. 

7.  ವೈರಸ್, ಕೆಟ್ಟ ಬ್ಯಾಕ್ಟೀರಿಯಾ ಕಿಲ್ಲರ್
ಅಮ್ಲೆಟಿನಲ್ಲಿ ಪಾಸ್ಪರಸ್ ಅಂಶ ಇದೆ. ಈ ಪಾಸ್ಪರಸ್ ದೇಹದಲ್ಲಿ ಕೆಟ್ಟ ಬ್ಯಾಕ್ಟಿರಿಯಾ, ವೈರಸ್ ಗಳ (Virus) ವಿರುದ್ದ ಸಮರ ಸಾರುತ್ತದೆ. ವೈರಸ್ ನ್ನು ದೇಹದಿಂದ ದೂರ  ಇಡುತ್ತದೆ. ದೇಹದ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ಇದನ್ನೂ ಓದಿ : ವ್ಯಾಯಾಮವಿಲ್ಲದೆ Weight control ಮಾಡಬೇಕಾದರೆ ಡಯೆಟ್ ನಲ್ಲಿರಲಿ ಫೈಬರ್

8. ನರಮಂಡಲದ ಆರೋಗ್ಯಕ್ಕೆ ಉತ್ತಮ. 
ಅಮ್ಲೆಟಿನಲ್ಲಿ ಪೊಟಾಶಿಯಂ ಅಂಶ ಸಾಕಷ್ಟು ಸಿಗುತ್ತದೆ. ಪೊಟಾಶಿಯಂ ನಮ್ಮ ನರಮಂಡಲದ ಆರೋಗ್ಯಕ್ಕೆ (Health) ತುಂಬಾ ಸಹಕಾರಿ. ಇದೇ ಕಾರಣಕ್ಕೆ ಅಥ್ಲೆಟಿಕ್ಸ್ ಗಳು ನಮ್ಮ ಡಯಟ್ ನಲ್ಲಿ ಅಮ್ಲೆಟಿಗೆ ಸಾಕಷ್ಟು ಆದ್ಯತೆ ನೀಡುತ್ತಾರೆ. 

9. ಮೆದುಳಿನ ಬೆಳವಣಿಗೆಗೆ ಬೇಕು ಅಮ್ಲೆಟ್
ಮೊಟ್ಟೆಯ ಲೋಳೆಯಲ್ಲಿ ಚೋಲಿನ್ ಎಂಬ ಅಂಶ ಇರುತ್ತದೆ. ಇದು ಮೆದುಳಿನ ಬೆಳವಣಿಗೆಯನ್ನು ಉತ್ತಮಪಡಿಸುತ್ತದೆ. ಮಕ್ಕಳ ಮೆದುಳಿನ ಬೆಳವಣಿಗೆಗೆ ಇದು ತುಂಬಾ ಸಹಕಾರಿ. 

10 ದೃಷ್ಟಿ ದೋಷ ನಿವಾರಕ.!
ಅಮ್ಲೇಟಿನಲ್ಲಿ ಕ್ಯಾರೋಟೆನಾಯ್ಡ್ ಎಂಬ ಅಂಶ ಇರುತ್ತದೆ. ಇದು ಕಣ್ಣಿನ ಆರೋಗ್ಯಕ್ಕೆ (Eye care) ಅತೀ ಅಗತ್ಯ. ಹಾಗಾಗಿ, ಅಮ್ಲೆಟ್ ತಿಂದರೆ ದೃಷ್ಟಿ ದೋಷದಿಂದ ದೂರ  ಇರಬಹುದು.

ಇದನ್ನೂ ಓದಿ : Coronavirus Second Wave: ಪುನಃ ಗತಿ ಪಡೆದುಕೊಂಡ ಕೊರೊನಾ, ಈ ಐದು ವಿಧಾನ ಅನುಸರಿಸಿ ವೈರಸ್ ನಿಂದ ಪಾರಾಗಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News