Potato Juice Benefits:ಕೊಲೆಸ್ಟ್ರಾಲ್ ಕಡಿಮೆ ಮಾಡುವ ತಾಕತ್ತಿದೆ ಈ ಜ್ಯೂಸ್ ಗೆ, ತಯಾರಿಸುವ ವಿಧಾನ ಇಲ್ಲಿದೆ

Potato Juice Benefits: ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಆಲೂಗಡ್ಡೆ ಜ್ಯೂಸ್ ಒಂದು ಪರಿಣಾಮಕಾರಿ ಮನೆಮದ್ದಾಗಿದೆ.

Written by - Nitin Tabib | Last Updated : Nov 6, 2021, 08:21 PM IST
  • ಆಲೂಗಡ್ಡೆಯನ್ನು ಹೆಚ್ಚಿನ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ.
  • ಆದರೆ ಆಲೂಗಡ್ಡೆ ಜ್ಯೂಸ್ ಸೇವನೆಯು ಅಧಿಕ ಕೊಲೆಸ್ಟ್ರಾಲ್ (Cholestrol) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ.
  • ಆಲೂಗಡ್ಡೆ ರಸವನ್ನು ಕಚ್ಚಾ ಆಲೂಗಡ್ಡೆಯಿಂದ ತಯಾರಿಸಲಾಗುತ್ತದೆ.
Potato Juice Benefits:ಕೊಲೆಸ್ಟ್ರಾಲ್ ಕಡಿಮೆ ಮಾಡುವ ತಾಕತ್ತಿದೆ ಈ ಜ್ಯೂಸ್ ಗೆ, ತಯಾರಿಸುವ ವಿಧಾನ ಇಲ್ಲಿದೆ title=
Potato Juice Benefits (File Photo)

ನವದೆಹಲಿ: Health Benefits Of Potato Juice - ಆಲೂಗಡ್ಡೆಯನ್ನು ಹೆಚ್ಚಿನ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ, ಆದರೆ ಆಲೂಗಡ್ಡೆ ಜ್ಯೂಸ್ ಸೇವನೆಯು ಅಧಿಕ ಕೊಲೆಸ್ಟ್ರಾಲ್ (Cholestrol) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ. ಆಲೂಗಡ್ಡೆ ರಸವನ್ನು ಕಚ್ಚಾ ಆಲೂಗಡ್ಡೆಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ವಿಟಮಿನ್ ಬಿ, ವಿಟಮಿನ್ ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ರಂಜಕದಂತಹ ಪೋಷಕಾಂಶಗಳಿವೆ. ಆಲೂಗಡ್ಡೆ ರಸವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ತಯಾರಿಸುವ ವಿಧಾನ - ಆಲೂಗೆಡ್ಡೆ ರಸವನ್ನು ತಯಾರಿಸಲು, ನಾಲ್ಕು ಮಧ್ಯಮ ಗಾತ್ರದ ಆಲೂಗಡ್ಡೆಗಳನ್ನು ತೆಗೆದುಕೊಂಡು ಅವುಗಳನ್ನು ಸಿಪ್ಪೆ ಸುಲಿಯಿರಿ ಮತ್ತು ಸಣ್ಣ ತುಂಡುಗಳಾಗಿ ಕತ್ತರಿಸಿ. ಇದರ ನಂತರ ಆಲೂಗಡ್ಡೆಯ ಈ ಕ್ಯೂಬ್ ಗಳನ್ನು ಜ್ಯೂಸರ್ನಲ್ಲಿ ಹಾಕಿ. ಯಾವುದೇ ರುಚಿ ಅಥವಾ ಸುವಾಸನೆ ಇಲ್ಲದೆ ಹಸಿಯಾಗಿ ಕುಡಿಯಿರಿ. ಇದರಿಂದ ನೀವು ಹೆಚ್ಚಿನ ಲಾಭ ಪಡೆಯುತ್ತೀರಿ.

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಲಾಭಕಾರಿ
ಆಲೂಗಡ್ಡೆ ರಸದಲ್ಲಿ ಫೈಬರ್, ವಿಟಮಿನ್ ಎ, ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದರ ಸೇವನೆಯು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ
ಆಲೂಗಡ್ಡೆಯಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಶೀತ ಅಥವಾ ಯಾವುದೇ ರೀತಿಯ ಸೋಂಕಿನಿಂದ ನಿಮ್ಮನ್ನು ರಕ್ಷಿಸುತ್ತದೆ. ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಆಲೂಗೆಡ್ಡೆ ರಸವನ್ನು ಸೇವಿಸುವುದರಿಂದ ನೀವು ಪ್ರಯೋಜನವನ್ನು ಪಡೆಯಬಹುದು.

ಸಂಧಿವಾತ ಸಮಸ್ಯೆಗೆ ಪರಿಣಾಮಕಾರಿ
ಆಲೂಗೆಡ್ಡೆ ರಸವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಕೀಲು ನೋವಿನ ಸಮಸ್ಯೆಯಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಆಲೂಗೆಡ್ಡೆಯ ಚೂರುಗಳನ್ನು ನೋವಿನ ಜಾಗಕ್ಕೆ ಹಚ್ಚುವುದರಿಂದಲೂ ನೀವು ಪ್ರಯೋಜನ ಪಡೆಯಬಹುದು.

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
ಅಧ್ಯಯನದ ಪ್ರಕಾರ, ಆಲೂಗಡ್ಡೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಗ್ಲೈಕೋಲ್ಕಲಾಯ್ಡ್ ಎಂಬ ರಾಸಾಯನಿಕ ಸಂಯುಕ್ತವನ್ನು ಹೊಂದಿರುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಅಲ್ಸರ್ ಚಿಕಿತ್ಸೆಗೆ ಪರಿಣಾಮಕಾರಿ
ಆಲೂಗೆಡ್ಡೆ ರಸದ ಸೇವನೆಯು ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಬೆಳಗ್ಗೆ ಆಲೂಗೆಡ್ಡೆಯ ರಸ ಸೇವನೆಯಿಂದ ಅಲ್ಸರ್ ಸಮಸ್ಯೆ ದೂರವಾಗುತ್ತದೆ.

ಲೀವರ್ ಗೆ ಲಾಭಕಾರಿ
ಆಲೂಗಡ್ಡೆ ರಸವು ಡಿಟಾಕ್ಸ್ ಪಾನೀಯ ರೀತಿ ಕಾರ್ಯನಿರ್ವಹಿಸುತ್ತದೆ. ಇದರ ಸೇವನೆಯು ಯಕೃತ್ತಿನ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ-ದಕ್ಷಿಣ ಏಷ್ಯಾದವರಲ್ಲಿ ಕಂಡುಬರುವ ಹೊಸ ಜೀನ್ COVID-19 ಸಾವುಗಳನ್ನು ದ್ವಿಗುಣಗೊಳಿಸಬಹುದಂತೆ..!

ಮಲಬದ್ಧತೆ ಸಮಸ್ಯೆ ನಿವಾರಕ
ಫೈಬರ್ ಭರಿತ ಆಲೂಗಡ್ಡೆ ರಸವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ-Eggs beneficial in winter : ಚಳಿಗಾಲದ ಈ ಸಮಯದಲ್ಲಿ ಬೇಯಿಸಿದ 2 ಮೊಟ್ಟೆ ಸೇವಿಸಿ : ಇದರಿಂದ ಅದ್ಭುತ ಪ್ರಯೋಜನಗಳನ್ನ ಪಡೆಯಿರಿ

(Disclaimer:ಇಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದು ಹಾಗೂ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅವುಗಳನ್ನು ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆಯಲು ಮರೆಯಬೇಡಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Milk : ಶೀತವಾದಾಗ ಹಾಲು ಕುಡಿಯುವುದರಿಂದ ಪರಿಸ್ಥಿತಿ ಹದಗೆಡುತ್ತದೆಯೇ? ತಜ್ಞರು ಏನು ಹೇಳಿದ್ದಾರೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News