Controlling Blood Sugar: ಮಧುಮೇಹ ರೋಗಿಗಳು ಈ ವೆಜ್ ಮತ್ತು ನಾನ್ ವೆಜ್ ಆಹಾರವನ್ನು ಸೇವಿಸಿದರೆ ಏರುಪೇರಾಗುವುದಿಲ್ಲ ಬ್ಲಡ್ ಶುಗರ್

Superfoods for Blood Sugar Control: ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳಲ್ಲಿ ಮಧುಮೇಹ ರೋಗಿಗಳಿಗೆ ಆರೋಗ್ಯಕರ ಆಹಾರ ಯಾವುದು ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ. 

Written by - Ranjitha R K | Last Updated : Jan 25, 2024, 01:36 PM IST
  • ಮಧುಮೇಹದಿಂದ ಬಳಲುತ್ತಿದ್ದರೆ ಆಹಾರಕ್ರಮದತ್ತ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ.
  • ಇಲ್ಲವಾದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.
  • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಈ ಎರಡು ಪದಾರ್ಥಗಳು
Controlling Blood Sugar: ಮಧುಮೇಹ ರೋಗಿಗಳು ಈ ವೆಜ್ ಮತ್ತು ನಾನ್ ವೆಜ್ ಆಹಾರವನ್ನು ಸೇವಿಸಿದರೆ ಏರುಪೇರಾಗುವುದಿಲ್ಲ ಬ್ಲಡ್ ಶುಗರ್   title=

Health Tips for Managing Diabetes: ನೀವು ಮಧುಮೇಹದಿಂದ ಬಳಲುತ್ತಿದ್ದರೆ ಆಹಾರಕ್ರಮದತ್ತ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ಇಲ್ಲವಾದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.ಕೆಲವು ಆಹಾರ ಪದಾರ್ಥಗಳು ಹೆಚ್ಚಿನ ಪ್ರಮಾಣದ ಗ್ಲೂಕೋಸ್ ಸ್ಪೈಕ್‌ಗಳನ್ನು ಉಂಟುಮಾಡುತ್ತವೆ. ಇನ್ನು ಕೆಲವು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತವೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳಲ್ಲಿ ಮಧುಮೇಹ ರೋಗಿಗಳಿಗೆ ಆರೋಗ್ಯಕರ ಆಹಾರ ಯಾವುದು ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ. 

ಈ ಎರಡು ಪದಾರ್ಥಗಳನ್ನು ತಿನ್ನುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು : 
1. ಹಸಿರು ಎಲೆ ತರಕಾರಿಗಳು :

ಹಸಿರು ಎಲೆಗಳ ತರಕಾರಿಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುತ್ತವೆ. ಇತರ ತರಕಾರಿಗಳಿಗೆ ಹೋಲಿಸಿದರೆ ಇದರಲ್ಲಿ ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ಕಡಿಮೆ ಇರುತ್ತದೆ. ಇದರರ್ಥ ಈ ತರಕಾರಿಗಳನ್ನು ಎಷ್ಟು ತಿಂದರೂ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗುವುದಿಲ್ಲ. ಪಾಲಕ್ ಮತ್ತು ಬಸಳೆ ಸೊಪ್ಪು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ. ಟೈಪ್ 2 ಡಯಾಬಿಟಿಸ್ ಇರುವವರಲ್ಲಿ ವಿಟಮಿನ್ ಸಿ ಸಕ್ಕರೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಈ ಸೊಪ್ಪು ವಿಶೇಷವಾದ ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿರುತ್ತವೆ. ಇದು ಮಧುಮೇಹದ ಕಾರಣದಿಂದ ದೃಷ್ಟಿ ಮಂಜಾಗುವುದನ್ನು ಕೂಡಾ ಇದು ತಡೆಯುತ್ತದೆ. 

ಇದನ್ನೂ ಓದಿ : ಆತಂಕ, ಒತ್ತಡದಿಂದ ಪರಿಹಾರಕ್ಕಾಗಿ ಚಳಿಗಾಲದಲ್ಲಿ ರಾತ್ರಿ ಮಲಗುವ ಮುನ್ನ ಇವುಗಳನ್ನು ತಪ್ಪದೇ ಸೇವಿಸಿ

2.ಕೊಬ್ಬಿನ ಅಂಶವಿರುವ ಮೀನು : 
ನಿಮಗೆ ಮಧುಮೇಹ ಇರಲಿ ಅಥವಾ ಇಲ್ಲದಿರಲಿ, ಫ್ಯಾಟಿ ಫಿಶ್  ನಿಮ್ಮ ಆಹಾರದ ಭಾಗವಾಗಿರಬೇಕು.ಇದು ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಇದರಿಂದ ನೀವು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ. ಸಾಲ್ಮನ್ ನಂಥಹ ಕೊಬ್ಬಿನ ಅಂಶವಿರುವ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಅಡಗಿರುತ್ತವೆ. ಈ ಮೀನಿನಲ್ಲಿರುವ  DHA ಮತ್ತು EPA,  ಮಧುಮೇಹದಿಂದ ಉಂಟಾಗಬಹುದಾದ ಸಂಭವನೀಯ ತೊಡಕುಗಳಿಂದ ನಿಮ್ಮ ಹೃದಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.ಮಧುಮೇಹವಿದ್ದಾಗ  ನಿಮ್ಮ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯ ದ್ವಿಗುಣಗೊಳ್ಳುತ್ತದೆ. ನಿಮ್ಮ ಆಹಾರದಲ್ಲಿ ಕೊಬ್ಬಿನ ಅಂಶ ಇರುವ ಮೀನುಗಳನ್ನು ಸೇವಿಸುವುದರಿಂದ ಈ ಅಪಾಯವನ್ನು ತೊಡೆದು ಹಾಕಬಹುದು. ಇದಲ್ಲದೆ, ಈ ಮೀನುಗಳು ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ. 

ಇದನ್ನೂ ಓದಿ : Cholesterol Control Tips: ನಿಯಮಿತವಾಗಿ ಈ ಉಂಡೆ ಸೇವಿಸಿದರೆ, ರಕ್ತ ನಾಳಗಳಲ್ಲಿನ ಜಿಡ್ಡು ಪದಾರ್ಥ ಬೆಣ್ಣೆಯಂತೆ ಕರಗಿ ಹೊರಹೋಗುತ್ತದೆ!

(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News