Health Tips: ಹಣ್ಣು ತಿಂದ ನಂತರ ನೀರು ಕುಡಿಯಬಾರದು ಯಾಕೆ ಗೊತ್ತಾ?

ಈ ಹಣ್ಣು ತಿಂದ ನಂತರ ನೀರು ಕುಡಿಯಬೇಡಿ: ನಿಯಮಿತವಾಗಿ ಹಣ್ಣುಗಳನ್ನು ಸೇವಿಸುವುದರಿಂದ ನೀವು ದೀರ್ಘಕಾಲದವರೆಗೆ ಆರೋಗ್ಯವಾಗಿ ಮತ್ತು ಫಿಟ್ ಆಗಿರಬಹುದು. ಆದರೆ ಹಣ್ಣುಗಳನ್ನು ಹೇಗೆ ಸೇವಿಸಬೇಕು? ಹಣ್ಣು ತಿನ್ನುವ ಮೊದಲು ಮತ್ತು ನಂತರ ನೀರು ಕುಡಿಯಬೇಕಾ? ಅಥವಾ ಬೇಡ್ವಾ? ಅನ್ನೋದನ್ನು ತಿಳಿಯುವುದು ಮುಖ್ಯ.  

Written by - Puttaraj K Alur | Last Updated : Mar 3, 2023, 11:17 AM IST
  • ನೇರಳೆ ಹಣ್ಣು ತಿಂದ ನಂತರ ನೀರು ಕುಡಿದರೆ ನೆಗಡಿ ಮತ್ತು ಕೆಮ್ಮಿನ ಸಮಸ್ಯೆಯುಂಟಾಗುತ್ತದೆ
  • ಸ್ಟ್ರಾಬೆರಿ ಹಣ್ಣು ಸೇವಿಸಿದ ಬಳಿಕ ನೀರು ಕುಡಿದರೆ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಯುಂಟಾಗುತ್ತದೆ
  • ಸೇಬು ತಿಂದ ನಂತರ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಕರವೆಂದ ಆರೋಗ್ಯ ತಜ್ಞರು
Health Tips: ಹಣ್ಣು ತಿಂದ ನಂತರ ನೀರು ಕುಡಿಯಬಾರದು ಯಾಕೆ ಗೊತ್ತಾ?   title=
ಈ ಹಣ್ಣು ತಿಂದ ನಂತರ ನೀರು ಕುಡಿಯಬೇಡಿ

ನವದೆಹಲಿ: ಹಣ್ಣುಗಳು ನಮ್ಮ ದೇಹಕ್ಕೆ ವರದಾನವೆಂದು ಪರಿಗಣಿಸಲಾಗುತ್ತದೆ. ಹಣ್ಣುಗಳ ಸೇವನೆಯಿಂದ ದೇಹ ಸದೃಢವಾಗಿರುತ್ತದೆ ಜೊತೆಗೆ ಅನೇಕ ರೋಗಗಳ ಅಪಾಯವು ದೂರವಾಗುತ್ತದೆ. ದೇಹಕ್ಕೆ ನೀರು ಕೂಡ ಅಷ್ಟೇ ಮುಖ್ಯ. ನೀವು ಸಾಕಷ್ಟು ನೀರು ಕುಡಿಯದಿದ್ದರೆ ದೇಹವು ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ. ಆದರೆ ಯಾವಾಗ ನೀರು ಕುಡಿಯಬೇಕು? ಎಂಬುದು ತಿಳಿದುಕೊಳ್ಳುವುದು ಮುಖ್ಯ. ಕೆಲವು ಹಣ್ಣು ತಿನ್ನುವ ಮೊದಲು ಅಥವಾ ನಂತರ ನೀರು ಕುಡಿಯಬಾರದು. ಇದರ ಮಾಹಿತಿ ಇಲ್ಲಿದೆ ನೋಡಿ.

ಈ ಹಣ್ಣು ತಿಂದ ನಂತರ ನೀರು ಕುಡಿಯಬೇಡಿ

1. ನೇರಳೆ ಹಣ್ಣು: ನೇರಳೆ ಹಣ್ಣು ತಿಂದ ನಂತರ ನೀರು ಕುಡಿಯಬೇಡಿ. ನೇರಳೆ ಹಣ್ಣು ತಿಂದ ನಂತರ ನೀರು ಕುಡಿದರೆ ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಈ ಹಣ್ಣು ತಿಂದ ನಂತರ ಅಪ್ಪಿತಪ್ಪಿಯೂ ನೀರು ಕುಡಿಯಬೇಡಿ. ಇದರಿಂದ ನೀವು ಅನಾರೋಗ್ಯಕ್ಕೆ ಒಳಗಾಗಬಹುದು.

ಇದನ್ನೂ ಓದಿ: ತೂಕ ಇಳಿಕೆ ಜೊತೆಗೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಹುರಿಗಡಲೆ

2. ಸ್ಟ್ರಾಬೆರಿ: ಸ್ಟ್ರಾಬೆರಿಯನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ, ಆದರೆ ಇದನ್ನು ತಿಂದ ನಂತರ ನೀರು ಕುಡಿಯಬಾರದು. ವಾಸ್ತವವಾಗಿ ನೈಸರ್ಗಿಕ ಸಕ್ಕರೆ ಮತ್ತು ಯೀಸ್ಟ್ ಸ್ಟ್ರಾಬೆರಿಗಳಲ್ಲಿ ಕಂಡುಬರುತ್ತವೆ. ಇದನ್ನು ತಿಂದ ನಂತರ ಹೊಟ್ಟೆಯಲ್ಲಿ ಆಮ್ಲತೆ ಉಂಟಾಗುತ್ತದೆ. ಸ್ಟ್ರಾಬೆರಿ ತಿಂದ ನಂತರ ನೀರು ಕುಡಿದರೆ ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಅಸಿಡಿಟಿ ಉಂಟಾಗಬಹುದು. ಜೊತೆಗೆ ಹೊಟ್ಟೆ ನೋವು ಸಹ ಬರಬಹುದು.

 3. ಸೇಬು: ಸೇಬು ತಿಂದ ನಂತರ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಕರವೆಂದು ಆರೋಗ್ಯ ತಜ್ಞರು ಹೇಳಿದ್ದಾರೆ. ವಾಸ್ತವವಾಗಿ ಇದರಲ್ಲಿ ಬಹಳಷ್ಟು ಫೈಬರ್ ಕಂಡುಬರುತ್ತದೆ. ಇದನ್ನು ತಿಂದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಮತ್ತೊಂದೆಡೆ ನೀವು ಸೇಬು ತಿಂದ ತಕ್ಷಣ ನೀರು ಕುಡಿದರೆ ಅದು ನಿಮ್ಮ ಕರುಳಿಗೆ ಹಾನಿ ಮಾಡುತ್ತದಂತೆ.

 4. ಕಲ್ಲಂಗಡಿ: ಕೆಲವರು ಕಲ್ಲಂಗಡಿ ಹಣ್ಣು ತಿಂದ ನಂತರ ನೀರು ಕುಡಿಯುತ್ತಾರೆ, ಏಕೆಂದರೆ ಕಲ್ಲಂಗಡಿ ರುಚಿ ಸಿಹಿಯಾಗಿರುತ್ತದೆ. ಆದರೆ ನೀವು ಕಲ್ಲಂಗಡಿ ಸೇವಿಸಿದ ಬಳಿಕ ಅಪ್ಪಿತಪ್ಪಿಯೂ ನೀರು ಕುಡಿಯಬಾರದು. ಇದು ನಿಮ್ಮ ಹೊಟ್ಟೆ ಊದಿಕೊಳ್ಳಲು ಕಾರಣವಾಗಬಹುದು ಮತ್ತು ಜೀರ್ಣಕಾರಿ ರಸವು ದುರ್ಬಲಗೊಳ್ಳುತ್ತದೆ. ಇದು ಅಜೀರ್ಣದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

ಇದನ್ನೂ ಓದಿ: Weight Loss Workout: ಬೊಜ್ಜು & ತೂಕ ನಷ್ಟಕ್ಕೆ ಇಲ್ಲಿವೆ ನೋಡಿ 6 ಸರಳ ಸೂತ್ರಗಳು

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಸಲಹೆ ಪಾಲಿಸುವ ಮೊದಲು ವೈದ್ಯಕೀಯ ಸಲಹೆ ಪಡೆಯಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News