ಬೆಳಗ್ಗೆ ಎದ್ದ ತಕ್ಷಣ ಹಳಸಿದ ಬಾಯಲ್ಲೇ ಈ ದೇಶೀ ಕಷಾಯ ಕುಡಿಯಿರಿ… ಹೊಟ್ಟೆಯ ಹಠಮಾರಿ ಕೊಬ್ಬು ಸುಲಭವಾಗಿ ಕರಗಿ ಸ್ಲಿಮ್ ಆಗ್ತೀರ..

Weight Loss Tips: ಕಡಿಮೆ ತೂಕ ಹೊಂದಿರುವ ಅನೇಕ ಜನರದ್ದೂ ಹೊಟ್ಟೆ ಸುತ್ತ ಕಾಡುವ ಹಠಮಾರಿ ಬೊಜ್ಜಿನ ಕಾಟ ಇರುತ್ತದೆ. ಇದಕ್ಕಾಗಿ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರನ್ನು ಸೇವಿಸಿ ಎಂದು ತಜ್ಞರು ಹೇಳುವುದುಂಟು. ಆದರೆ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಲು ಬೇರೊಂದು ಪ್ರಯೋಜನಕಾರಿಯಾದ ಪಾನೀಯಗಳಿವೆ

Written by - Bhavishya Shetty | Last Updated : Nov 26, 2023, 11:33 PM IST
    • ಕೆಲವರಿಗೆ ತೂಕ ಇಳಿಸುವುದು ಹೆಚ್ಚು ಕಷ್ಟಕರವಾದ ಕೆಲಸ
    • ವ್ಯಾಯಾಮ ಮತ್ತು ಯೋಗವನ್ನು ಮಾಡಿದರೂ ಪ್ರಯೋಜನವಿರುವುದಿಲ್ಲ.
    • ಕಳೆದುಕೊಳ್ಳುತ್ತಾರೆ ಆದರೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಭಾರೀ ಕಷ್ಟ.
ಬೆಳಗ್ಗೆ ಎದ್ದ ತಕ್ಷಣ ಹಳಸಿದ ಬಾಯಲ್ಲೇ ಈ ದೇಶೀ ಕಷಾಯ ಕುಡಿಯಿರಿ… ಹೊಟ್ಟೆಯ ಹಠಮಾರಿ ಕೊಬ್ಬು ಸುಲಭವಾಗಿ ಕರಗಿ ಸ್ಲಿಮ್ ಆಗ್ತೀರ.. title=
ajwain water

Weight Loss Tips: ಕೆಲವರಿಗೆ ತೂಕ ಇಳಿಸುವುದಕ್ಕಿಂತಲೂ ಹೆಚ್ಚು ಕಷ್ಟಕರವಾದ ಕೆಲಸವೆಂದರೆ ಉಬ್ಬಿದಂತೆ ಕಾಣುವ ಹೊಟ್ಟೆಯನ್ನು ನಿಯಂತ್ರಿಸುವುದು. ಸಾಮಾನ್ಯವಾಗಿ ಜನರು ಸುಲಭವಾಗಿ ತೂಕವನ್ನು ಕಳೆದುಕೊಳ್ಳುತ್ತಾರೆ ಆದರೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಭಾರೀ ಕಷ್ಟ. ಎಲ್ಲಾ ರೀತಿಯ ವ್ಯಾಯಾಮ ಮತ್ತು ಯೋಗವನ್ನು ಮಾಡಿದರೂ ಪ್ರಯೋಜನವಿರುವುದಿಲ್ಲ.

ಕಡಿಮೆ ತೂಕ ಹೊಂದಿರುವ ಅನೇಕ ಜನರದ್ದೂ ಹೊಟ್ಟೆ ಸುತ್ತ ಕಾಡುವ ಹಠಮಾರಿ ಬೊಜ್ಜಿನ ಕಾಟ ಇರುತ್ತದೆ. ಇದಕ್ಕಾಗಿ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರನ್ನು ಸೇವಿಸಿ ಎಂದು ತಜ್ಞರು ಹೇಳುವುದುಂಟು. ಆದರೆ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಲು ಬೇರೊಂದು ಪ್ರಯೋಜನಕಾರಿಯಾದ ಪಾನೀಯಗಳಿವೆ.

ಇದನ್ನೂ ಓದಿ: ಅರ್ಧಶತಕದ ಜೊತೆ ಧೋನಿಯ ಶ್ರೇಷ್ಠ ದಾಖಲೆ ಮುರಿದ ಇಶಾನ್ ಕಿಶನ್: ಗುರುವನ್ನೇ ಮೀರಿಸಿಬಿಟ್ಟನಲ್ಲ ಶಿಷ್ಯ

ಸಾಮಾನ್ಯವಾಗಿ ಜನರು ಪ್ರತಿದಿನ ಬೆಳಿಗ್ಗೆ ಬಿಸಿ ನೀರು ಅಥವಾ ಇತರ ರೀತಿಯ ಪಾನೀಯಗಳನ್ನು ಕುಡಿಯುತ್ತಾರೆ. ಆದರೂ, ಹೆಚ್ಚಿನ ಪರಿಣಾಮವನ್ನು ಕಾಣಿಸುವುದಿಲ್ಲ. ಆದ್ದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ 3 ಪಾನೀಯಗಳನ್ನು ಸೇವಿದಿ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಜ್ವೈನ್ ಪಾನೀಯ:

ಅಜ್ವೈನ್ ನೀರನ್ನು ತೂಕ ನಷ್ಟ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ರಾಮಬಾಣವೆಂದು ಪರಿಗಣಿಸಲಾಗಿದೆ. ಸೆಲರಿ ಅಥವಾ ಅಜ್ವೈನ್ ಉರಿಯೂತ ನಿವಾರಕ, ಆ್ಯಂಟಿ ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದರ ಸಹಾಯದಿಂದ ಅಸಿಡಿಟಿ ಸಮಸ್ಯೆಯಿಂದಲೂ ಪರಿಹಾರ ನೀಡುತ್ತದೆ. ರಾತ್ರಿ ವೇಳೆ ಒಂದು ಲೋಟ ನೀರಿನಲ್ಲಿ ಒಂದು ಚಮಚ ಸೆಲರಿಯನ್ನು ಬೆರೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೊಟ್ಟೆಯ ಕೊಬ್ಬನ್ನು ಸಹ ಕಡಿಮೆ ಮಾಡುತ್ತದೆ.

ಅಜ್ವೈನ್ ಮತ್ತು ನಿಂಬೆ ನೀರು:

ದೇಹದಲ್ಲಿ ವಿಟಮಿನ್ ಸಿ ಕೊರತೆಯನ್ನು ಪೂರೈಸಲು ನಿಂಬೆ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದರ ಜೊತೆಗೆ ಅಜ್ವೈನ್ ನೀರನ್ನು ಕುದಿಸಿ ಅದಕ್ಕೆ ನಿಂಬೆ ನೀರನ್ನು ಸೇರಿಸಿ ಕುಡಿಯುತ್ತಿದ್ದರೆ, ನಿಮ್ಮ ತೂಕವನ್ನು ಕಡಿಮೆ ಮಾಡಬಹುದು.

ಅಜ್ವೈನ್ ಮತ್ತು ಜೀರಿಗೆ ನೀರು:

ಅಜ್ವೈನ್ ಮತ್ತು ಜೀರಿಗೆ ನೀರು ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ನೀವು ಇದನ್ನು ಪ್ರತಿದಿನ ಬೆಳಿಗ್ಗೆ ಸೇವಿಸಬಹುದು. 1 ಲೋಟ ನೀರಿನಲ್ಲಿ ಅರ್ಧ ಚಮಚ ಜೀರಿಗೆ ಮತ್ತು ಅರ್ಧ ಚಮಚ ಅಜ್ವೈನ್ ಸೇರಿಸಿ ಚೆನ್ನಾಗಿ ಕುದಿಸಿ. ಇದನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಅಂದಹಾಗೆ ಈ ಪಾನೀಯಗಳನ್ನು ಬೆಳಗ್ಗೆ ಬ್ರಶ್ ಮಾಡುವ ಮುನ್ನ ಕುಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಡ್ಯಾನ್ಸರ್ ಆಗಿ ಕರಿಯರ್ ಆರಂಭಿಸಿದ್ದ ಈತ ಇಂದು ಬಾಲಿವುಡ್’ನ ಸೂಪರ್’ಸ್ಟಾರ್… 1000 ಕೋಟಿ ರೂ. ಸಂಭಾವನೆ ಪಡೆಯುವ ನಟ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News