Cholesterol ಗೆ ಮಾರಕ ಈ 10 ಸೂಪರ್ ಫುಡ್ ಗಳು

Food To Avoid Cholesterol:  ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಮಾರಕ. ಆದರೆ ಕೆಲವು ವಿಶೇಷವಾದ ಸೂಪರ್‌ಫುಡ್‌ಗಳನ್ನು ಸೇವಿಸುವುದರಿಂದ ನೀವು ಕೆಟ್ಟ ಕೊಲೆಸ್ಟ್ರಾಲ್ ನಿಂದಾಗುವ ಸಮಸ್ಯೆಯಿಂದ ಪಾರಾಗಬಹುದು.  

Written by - Nitin Tabib | Last Updated : Oct 16, 2022, 10:26 AM IST
  • ಸಾಮಾನ್ಯ ಮಟ್ಟದಲ್ಲಿ, ಇದು ನಮ್ಮ ದೇಹಕ್ಕೆ ಅಗತ್ಯವಾದ ವಸ್ತುವಾಗಿದೆ.
  • ಆದಾಗ್ಯೂ, ರಕ್ತದಲ್ಲಿ ಇದರ ಉಪಸ್ಥಿತಿ ತುಂಬಾ ಹೆಚ್ಚಾದರೆ,
  • ಅದು ಸೈಲೆಂಟ್ ಕಿಲ್ಲರ್ ಆಗಿ ಪರಿಣಮಿಸುತ್ತದೆ,
Cholesterol ಗೆ ಮಾರಕ ಈ 10 ಸೂಪರ್ ಫುಡ್ ಗಳು title=
Superfoods To Tame Cholesterol

Cholesterol Lowering Superfoods: ಕೊಲೆಸ್ಟ್ರಾಲ್ ನಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಕೂಡ ಇರುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕೂಡ ಇರುತ್ತದೆ. ಸಾಮಾನ್ಯ ಮಟ್ಟದಲ್ಲಿ, ಇದು ನಮ್ಮ ದೇಹಕ್ಕೆ ಅಗತ್ಯವಾದ ವಸ್ತುವಾಗಿದೆ. ಆದಾಗ್ಯೂ, ರಕ್ತದಲ್ಲಿ ಇದರ ಉಪಸ್ಥಿತಿ ತುಂಬಾ ಹೆಚ್ಚಾದರೆ, ಅದು ಸೈಲೆಂಟ್ ಕಿಲ್ಲರ್ ಆಗಿ ಪರಿಣಮಿಸುತ್ತದೆ, ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ನಮ್ಮ ದೇಹದ ಪ್ರತಿಯೊಂದು ಕೋಶದಲ್ಲಿಯೂ ಇರುತ್ತದೆ ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳುವಲ್ಲಿ ಹಾರ್ಮೋನು ಉತ್ಪಾದಿಸುವಲ್ಲಿ ಮತ್ತು ವಿಟಮಿನ್ ಡಿ ಉತ್ಪಾದಿಸುವಲ್ಲಿ ಅದು ಪ್ರಮುಖ ನೈಸರ್ಗಿಕ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ,  ಸಾಮಾನ್ಯವಾಗಿ ನಮ್ಮ ದೇಹವು ಅದನ್ನು ಉತ್ಪಾದಿಸುತ್ತದೆ, ಆದರೆ ಅದನ್ನು ನಾವು ಆಹಾರದ ಮೂಲಕವೂ ಕೂಡ ಪಡೆಯಬಹುದು.

ಕೊಲೆಸ್ಟ್ರಾಲ್‌ನಲ್ಲಿ 2 ವಿಧಗಳಿವೆ
ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (LDL) - ಇದನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದೂ ಕರೆಯುತ್ತಾರೆ.
ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ (ಎಚ್‌ಡಿಎಲ್) - ಇದನ್ನು ಉತ್ತಮ ಕೊಲೆಸ್ಟ್ರಾಲ್ ಎಂದೂ ಕರೆಯುತ್ತಾರೆ.

ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೇಗಿರಬೇಕು?
ಇದಕ್ಕಾಗಿ ನೀವು ಲಿಪಿಡ್ ಪ್ರೊಫೈಲ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.
>> LDL ಮಟ್ಟವು 100 ಕ್ಕಿಂತ ಕಡಿಮೆಯಿದ್ದರೆ, ಚಿಂತಿಸಬೇಕಾಗಿಲ್ಲ.
>> ದೇಹದಲ್ಲಿ ಯಾವುದೇ ಸಮಸ್ಯೆ ಇಲ್ಲದವರಿಗೆ -100 ರಿಂದ 129 mg/dL ಸರಿ, ಆದರೆ ಹೃದ್ರೋಗ ಇರುವವರಿಗೆ ಇದು ಅಪಾಯಕಾರಿ.
>> 130 ರಿಂದ 159 mg/dL ಅನ್ನು ಗಡಿರೇಖೆಯ ಉನ್ನತ ಮಟ್ಟವೆಂದು ಪರಿಗಣಿಸಲಾಗುತ್ತದೆ.
>> 160 ರಿಂದ 189 mg/dL ಚಿಂತೆಗೀಡು ಮಾಡುವ ಮಟ್ಟವಾಗಿದೆ.
>> 190 ಕ್ಕಿಂತ ಹೆಚ್ಚಿನ ಮಟ್ಟದ mg/dL ಅನ್ನು ಅತಿ ಅಪಾಯಕಾರಿ ಮಟ್ಟವೆಂದು ಪರಿಗಣಿಸಲಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ 10 ಆಹಾರಗಳು
ಗ್ರೇಟರ್ ನೋಯ್ಡಾದ GIMS ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಿದ್ಧ ಆಹಾರ ತಜ್ಞ ಡಾ. ಆಯುಷಿ ಯಾದವ್, ನಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳನ್ನು ಶಾಮೀಲುಗೊಳಿಸಿದರೆ, ಅದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಮ್ಮ ಮತ್ತೊಂದು ವೆಬ್ ಸೈಟ್ ಆಗಿರುವ ZEE NEWS ಗೆ ತಿಳಿಸಿದ್ದಾರೆ. ಸಾಮಾನ್ಯವಾಗಿ, ಅವುಗಳಲ್ಲಿ ಫೈಬರ್ ಆಧಾರಿತ ಆಹಾರಗಳ ಸಂಖ್ಯೆ ಜಾಸ್ತಿಯಾಗಿದೆ.

1. ಓಟ್ಸ್
2. ಬಾರ್ಲಿ
3. ಸಂಪೂರ್ಣ ಧಾನ್ಯಗಳು
4. ದ್ವಿದಳ ಧಾನ್ಯಗಳು
5. ಬಿಳಿಬದನೆ
6. ಬೆಂಡೆಕಾಯಿ
7. ವಿವಿಧ ರೀತಿಯ ಬೀಜಗಳು
8. ಕ್ಯಾನೋಲಾ ಆಯಿಲ್
9. ಸೋಯಾ ಆಧಾರಿತ ಆಹಾರ
10. ಕೊಬ್ಬಿನ ಮೀನು

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಇತರ ಮಾರ್ಗಗಳು
ಆರೋಗ್ಯಕರ ಆಹಾರಗಳ ಹೊರತಾಗಿ, ನೀವು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹಲವು ವಿಧಗಳಲ್ಲಿ ಕಡಿಮೆ ಮಾಡಬಹುದು. ಇದಕ್ಕಾಗಿ ನಿಮ್ಮ ದೈನಂದಿನ ಜೀವನಶೈಲಿ ಮತ್ತು ದಿನಚರಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಆದಾಗ್ಯೂ, ನೀವು 4 ವಿಷಯಗಳಿಗೆ ವಿಶೇಷ ಗಮನ ಕೊಡಬೇಕು.

ಇದನ್ನೂ ಓದಿ-Diabetes: ಮಧುಮೇಹಿಗಳು ನಿತ್ಯ ಈ ಪಾನೀಯಗಳನ್ನು ಸೇವಿಸಿದರೆ, ಸಕ್ಕರೆ ಪ್ರಮಾಣ ಯಾವಾಗಲು ನಿಯತ್ರಣದಲ್ಲಿರುತ್ತದೆ

1. ಆರೋಗ್ಯಕರ ಆಹಾರವನ್ನು ಸೇವಿಸಿ
2. ನಿಯಮಿತ ವ್ಯಾಯಾಮ
3. ಧೂಮಪಾನವನ್ನು ತ್ಯಜಿಸಿ
4. ತೂಕವನ್ನು ಕಾಪಾಡಿಕೊಳ್ಳಿ

ಇದನ್ನೂ ಓದಿ-Health Tips: ಬೆಳಗ್ಗೆ ಎದ್ದು ಹಳಸಿದ ಬಾಯಿ ನೀರು ಸೇವನೆಯ ಈ ಲಾಭಗಳು ನಿಮಗೆ ತಿಳಿದಿವೆಯೇ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನಮೆದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News