Black Plum Health Benefits: ನಿತ್ಯ ನೇರಳೆ ಹಣ್ಣು ಸೇವನೆಯ 6 ಲಾಭಗಳು ಇಲ್ಲಿವೆ

Health Benefits Of Black Pulm: ನೇರಳೆ ಹಣ್ಣು (Black Pulm) ಯಾರಿಗೆ ಇಷ್ಟ ಇಲ್ಲ ಹೇಳಿ, ಆದರೆ ಬಹುತೇಕ ಜನರಿಗೆ ಇದರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ, ಈ ಹಣ್ಣು ಹಲವಾರು ರೋಗಗಳಿಗೆ ರಾಮಬಾಣ.  

Written by - Nitin Tabib | Last Updated : Mar 11, 2022, 12:28 PM IST
  • ನೇರಳೆ ಹಣ್ಣು ಸೇವನೆಯ ಲಾಭಗಳು
  • ಸಕ್ಕರೆ ಕಾಯಿಲೆ ಇರುವವರಿಗೆ ಸಹಕಾರಿ
  • ಹಲ್ಲುಗಳ ಆರೋಗ್ಯಕ್ಕೆ ಉತ್ತಮ
Black Plum Health Benefits: ನಿತ್ಯ ನೇರಳೆ ಹಣ್ಣು ಸೇವನೆಯ 6 ಲಾಭಗಳು ಇಲ್ಲಿವೆ  title=
Black Plum Health Benefits (File Photo)

ನವದೆಹಲಿ: Jamun Benefits In Diabetes - ಬೇಸಿಗೆಯ ಹಣ್ಣುಗಳಲ್ಲಿ ಜಾಮೂನ್ ಅಥವಾ ನೇರಳೆ ಹಣ್ಣು ತುಂಬಾ ಫೇಮಸ್. ಕರಿಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಇದನ್ನು ತಿನ್ನಲು ಜನ ತುಂಬಾ ಇಷ್ಟಪಡುತ್ತಾರೆ. ಆದರೆ, ನೇರಳೆ ಹಣ್ಣು ಕೇವಲ ರುಚಿಯಾಗಿರುವುದು ಮಾತ್ರವಲ್ಲದೆ, ಆರೋಗ್ಯವನ್ನು ಸಹ ಕಾಪಾಡುವ ಹಲವು ಅಂಶಗಳನ್ನು ಒಳಗೊಂಡಿದೆ ಎಂಬುದು ಕೆಲವೇ ಜನರಿಗೆ ತಿಳಿದಿದೆ. ಜಾಮೂನ್ ಅಥವಾ ನೇರಳೆ ಹಣ್ಣುಗಳು ಹಲವು ಔಷಧಿಯ ಗುಣಗಳನ್ನು ಹೊಂದಿವೆ. ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಹಣ್ಣಿನಲ್ಲಿರುವ ಹೆಚ್ಚಿನ ಆರೋಗ್ಯಕರ ಲಾಭಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,

1. ಮಧುಮೇಹದಲ್ಲಿ ಸಹಾಯ (Black PUlm Health Benefits In Diabetes)
ಬೆರ್ರಿ ಹಣ್ಣುಗಳನ್ನು ತಿನ್ನುವುದು ಮಧುಮೇಹದ (Diabetes) ಸಮಸ್ಯೆಯಲ್ಲಿ ಲಾಭದಾಯಕವಾಗಿದೆ ಎಂದು ಅಧ್ಯಯನಗಳು ಹೇಳುತ್ತವೆ. ನೇರಳೆ ಹಣ್ಣು ಎರಡು ಪ್ರಮುಖ ಜೈವಿಕ ಸಕ್ರೀಯ ಸಂಯುಕ್ತಗಳಾದ ಜಾಂಬೋಲಿನ್ ಮತ್ತು ಜಾಂಬೋಸಿನ್ ಅನ್ನು ಹೊಂದಿರುತ್ತವೆ, ಇವು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತವೆ.

2. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ (High BP)
ಎಲಾಜಿಕ್ ಹೆಸರಿನ ಆಮ್ಲವು ನೇರಳೆ ಹಣ್ಣಿನ ಬೀಜಗಳಲ್ಲಿ ಕಂಡುಬರುತ್ತದೆ, ಇದು ಅತ್ಯಂತ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ಇದು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ತೂಕ ಇಳಿಕೆಗೆ ಸಹಾಯಕ (Weight Loss)
ನೇರಳೆ ಹಣ್ಣಿನ ತಿರುಳು ಮತ್ತು ಬೀಜಗಳಲ್ಲಿ ಉತ್ತಮ ಪ್ರಮಾಣದ ನಾರಿನಂಶ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇದು ತೂಕ ಇಳಿಕೆಗೆ (Weight Loss Tips) ಇದು ತುಂಬಾ ಪರಿಣಾಮಕಾರಿಯಾಗಿದೆ. ಇದಲ್ಲದೆ ಬೆರ್ರಿ ಹಣ್ಣುಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆ. ಇದಲ್ಲದೇ ಅಲ್ಸರ್  ಸಮಸ್ಯೆ ನಿವಾರಣೆಗೂ ಕೂಡ ಈ ಹಣ್ಣು ತುಂಬಾ ಸಹಕಾರಿಯಾಗಿದೆ. 

4. ಉತ್ತಮ ಮೊಡವೆ ನಿವಾರಕ ಕೂಡ ಹೌದು
ನೇರಳೆ ಹಣ್ಣು ಚರ್ಮದ ಆರೋಗ್ಯಕ್ಕೆ ತುಂಬಾ ಹಿತಕಾರಿ ಎಂದು ಪರಿಗಣಿಸಲಾಗಿದೆ. ಇದರ ಬೀಜಗಳು ಮೊಡವೆಗಳನ್ನು ತೆಗೆದುಹಾಕುವಲ್ಲಿ ತುಂಬಾ ಪರಿಣಾಮಕಾರಿಯಾಗಿವೆ. ಇದರಿಂದ ನಿಮ್ಮ ಮುಖದ ಚರ್ಮವು ನೈಸರ್ಗಿಕ ರೀತಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತದೆ.

5. ಹಲ್ಲುಗಳ ಆರೋಗ್ಯಕ್ಕೆ ಉತ್ತಮ
ನೇರಳೆ ಹಣ್ಣುಗಳು ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಹೊಂದಿವೆ. ಇದರಿಂದ ಹಲ್ಲುಗಳು ಗಟ್ಟಿಗೊಳ್ಳುತ್ತವೆ.

ಇದನ್ನೂ ಓದಿ-Sugarcane Juice: ಬೇಸಿಗೆಯಲ್ಲಿ ಕಬ್ಬಿನ ರಸ ಸೇವನೆಯಿಂದ ಸಿಗುತ್ತೆ ಅದ್ಭುತ ಆರೋಗ್ಯ ಪ್ರಯೋಜನಗಳು

6. ಹಿಮೋಗ್ಲೋಬಿನ್ ಹೆಚ್ಚಿಸುವಲ್ಲಿ ಪರಿಣಾಮಕಾರಿ
ನೇರಳೆ ಹಣ್ಣು ಕಬ್ಬಿಣ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರಕ್ತದ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಅದನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-ನೀವು ಮಗುವಿಗೆ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಲು ಕುಡಿಸುತ್ತೀರಾ? ಇದು ಅಪಾಯಕಾರಿಯಾದೀತು ಎಚ್ಚರ!

(Disclaimer:ಇಲ್ಲಿ ನೀಡಲಾಗಿರುವ ಮನೆಮದ್ದು ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿವೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Cycling Benefit: ಹೊಟ್ಟೆಯ ಕೊಬ್ಬು ಕರಗಿಸಲು ನಿತ್ಯ ಇಷ್ಟು ನಿಮಿಷ ಸೈಕಲ್ ಓಡಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News