Indian Gooseberry Juice Benefits: ಹೊಳಪಾದ ತ್ವಚೆ ಹಾಗೂ ಆರೋಗ್ಯಕರ ಕೇಶಗಳನ್ನು ಹೊಂದಲು ಈ ಹಸಿರು ಪಾನೀಯ ಸೇವಿಸಿ

Amla Juice Health Benefits: ಆಮ್ಲಾ ಒಂದು ಔಷಧೀಯ ಗುಣಗಳಿಂದ ಸಮೃದ್ಧ ಆಹಾರವಾಗಿದೆ. ಇದರ ಸೇವನೆ ಕೇವಲ ತ್ವಚೆ ಹಾಗೂ ಕೂದಲಿಗೆ ಅಷ್ಟೇ ಅಲ್ಲ ಇಡೀ ದೇಹಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.  

Written by - Nitin Tabib | Last Updated : May 23, 2022, 12:49 PM IST
  • ಸಾಮಾನ್ಯವಾಗಿ ಬೇಸಿಗೆ ಕಾಲ ಸೌಂದರ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ.
  • ಬಿಸಿಲು, ಬಿಸಿಗಾಳಿಗೆ ಚರ್ಮ, ಮುಖ ತನ್ನ ಕಾಂತಿಯನ್ನೇ ಕಳೆದುಕೊಳ್ಳುತ್ತವೆ,
  • ಇದಲ್ಲದೇ ಬೇಸಿಗೆ ಕಾಲದಲ್ಲಿ ಕೂದಲುಗಳು ಕೂಡ ಬೆವರು, ಧೂಳು ಹಾಗೂ ಬಿಸಿಲಿನ ತಾಪಕ್ಕೆ ನಿರ್ಜೀವವಾಗುತ್ತವೆ.
Indian Gooseberry Juice Benefits: ಹೊಳಪಾದ ತ್ವಚೆ ಹಾಗೂ ಆರೋಗ್ಯಕರ ಕೇಶಗಳನ್ನು ಹೊಂದಲು ಈ ಹಸಿರು ಪಾನೀಯ ಸೇವಿಸಿ title=
Indian Gooseberry Juice

Amla Juice Health Benefits:  ಸಾಮಾನ್ಯವಾಗಿ ಬೇಸಿಗೆ ಕಾಲ ಸೌಂದರ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಬಿಸಿಲು, ಬಿಸಿಗಾಳಿಗೆ ಚರ್ಮ, ಮುಖ ತನ್ನ ಕಾಂತಿಯನ್ನೇ ಕಳೆದುಕೊಳ್ಳುತ್ತವೆ, ಇದಲ್ಲದೇ ಬೇಸಿಗೆ ಕಾಲದಲ್ಲಿ ಕೂದಲುಗಳು ಕೂಡ ಬೆವರು, ಧೂಳು ಹಾಗೂ ಬಿಸಿಲಿನ ತಾಪಕ್ಕೆ ನಿರ್ಜೀವವಾಗುತ್ತವೆ. ಈ ಸಮಸ್ಯೆಗಳನ್ನು ತೊಡೆದುಹಾಕಲು ಆಮ್ಲಾ ಜ್ಯೂಸ್ ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗಬಹುದು, ಈ ಅದ್ಭುತ ಪಾನೀಯವನ್ನು ಹೇಗೆ ತಯಾರಿಸಬೇಕು ಮತ್ತು ಹೇಗೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

ಆಮ್ಲಾ ಜ್ಯೂಸ್ ಕುಡಿಯುವ ಪ್ರಯೋಜನಗಳು (ಭಾರತೀಯ ನೆಲ್ಲಿಕಾಯಿ ಜ್ಯೂಸ್ ಪ್ರಯೋಜನಗಳು)
ಆಮ್ಲಾ (ಭಾರತೀಯ ನೆಲ್ಲಿಕಾಯಿ) ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ಒಂದು ಹಣ್ಣಾಗಿದೆ. ಇದು ಸಾಕಷ್ಟು ಔಷಧೀಯ ಗುಣಗಳಿಂದ ಕೂಡಿದೆ ಎಂದು ಪರಿಗಣಿಸಲಾಗಿದೆ. ಇದು ಕಬ್ಬಿಣ, ವಿಟಮಿನ್ ಸಿಗಳ ಸಮೃದ್ಧ ಮೂಲವಾಗಿದೆ. ಇದರ ಜ್ಯೂಸ್ ತಯಾರಿಸಿ ಕುಡಿದರೆ ಮುಖದ ತ್ವಚೆಯಲ್ಲಿ ಅಗಾಧವಾದ ಹೊಳಪು ಬರುತ್ತದೆ ಮತ್ತು ಕೂದಲಿನ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ಇದಲ್ಲದೆ ನೆಲ್ಲಿಕಾಯಿ ರಸವು ತೂಕವನ್ನು ಕಡಿಮೆ ಮಾಡಲು ಕೂಡ ಒಂದು ಉಪಯುಕ್ತ ಮನೆಮದ್ದಾಗಿದೆ ಮತ್ತು ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆಮ್ಲಾ ಜ್ಯೂಸ್ ಅನ್ನು ಹೇಗೆ ತಯಾರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಆಮ್ಲಾ ಜ್ಯೂಸ್ ಮಾಡಲು ಬೇಕಾಗುವ ಸಾಮಾಗ್ರಿಗಳು (ಅಮ್ಲಾ ಜ್ಯೂಸ್ ತಯಾರಿಸುವುದು ಹೇಗೆ?)
- 10 ಮಧ್ಯಮ ಗಾತ್ರದ ಬೆಟ್ಟದ ನೆಲ್ಲಿಕಾಯಿಗಳು
- 4 ರಿಂದ 5 ಟೀ ಚಮಚ ಸಕ್ಕರೆ
- ಕಾಲು ಟೀ ಚಮಚ ಆಯೋಡಿನ್ ಯುಕ್ತ ಉಪ್ಪು
- ಕಾಲು ಚಮಚ ಏಲಕ್ಕಿ ಪುಡಿ
- ಕೆಲ ಐಸ್ ತುಂಡುಗಳು

ಇದನ್ನೂ ಓದಿ-Curd Benefits: ಬೇಸಿಗೆಯಲ್ಲಿ ಮೊಸರು ತಿನ್ನುವುದರಿಂದ ಈ ಅಪಾಯವನ್ನು ತಪ್ಪಿಸಬಹುದು!

ಆಮ್ಲಾ ಜ್ಯೂಸ್ ತಯಾರಿಸುವುದು ಹೇಗೆ?
ನೆಲ್ಲಿಕಾಯಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಮತ್ತು ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತು ಅದರ ಎಲ್ಲಾ ಬೀಜಗಳನ್ನು ತೆಗೆದುಹಾಕಿ. ಈಗ ಈ ತುಂಡುಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಪೇಸ್ಟ್ ತಯಾರಾದಾಗ, ಅದಕ್ಕೆ ಸಕ್ಕರೆ, ಉಪ್ಪು, ನೀರು ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದನ್ನು ಗ್ಲಾಸ್‌ನಲ್ಲಿ ಹಾಕಿ ಕೆಲ ಐಸ್ ಕ್ಯೂಬ್ ಗಳನ್ನು ಹಾಕಿ ಕುಡಿಯಲು ಕೊಡಿ.

ಇದನ್ನೂ ಓದಿ-Cholesterol Control Home Remedies: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ರಾಮಬಾಣ ಉಪಾಯ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News