Amla Juice Benefits: ಈ ಸಮಸ್ಯೆಗಳಿಗೆ ರಾಮಬಾಣ ನೆಲ್ಲಿ ಕಾಯಿ ಜ್ಯೂಸ್

Amla Juice Benefits:ಆರೋಗ್ಯ ತಜ್ಞರ ಪ್ರಕಾರ ನೆಲ್ಲಿಕಾಯಿ ರಸವನ್ನು ಆಹಾರದಲ್ಲಿ ಸೇರಿಸಿದರೆ, ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು. ಹೊಟ್ಟೆ ಮತ್ತು ಯಕೃತ್ತಿನ ಆರೋಗ್ಯ ಕಾಪಾಡುವಲ್ಲಿ ನೆಲ್ಲಿಕಾಯಿ ವಿಶೇಷ ಪಾತ್ರವನ್ನು ವಹಿಸುತ್ತದೆ. 

Written by - Ranjitha R K | Last Updated : Jul 5, 2022, 10:55 AM IST
  • ನೆಲ್ಲಿ ಕಾಯಿ ಆರೋಗ್ಯಕ್ಕೆ ತುಂಬಾ ಉಪಯುಕ್ತ
  • ನೆಲ್ಲಿಕಾಯಿ ಸೇವನೆಯಿಂದ ರಕ್ತಹೀನತೆ ನಿವಾರಣೆಯಾಗುತ್ತದೆ.
  • ತೂಕ ಕೂಡ ಕಡಿಮೆ ಮಾಡುತ್ತದೆ
Amla Juice Benefits: ಈ ಸಮಸ್ಯೆಗಳಿಗೆ ರಾಮಬಾಣ ನೆಲ್ಲಿ ಕಾಯಿ ಜ್ಯೂಸ್  title=
Amla Benefits (file photo)

Amla Juice Benefits : ನೆಲ್ಲಿ ಕಾಯಿ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ನೆಲ್ಲಿಕಾಯಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್-ಸಿ ಕಂಡು ಬರುತ್ತದೆ. ಈ ಕಾರಣದಿಂದಾಗಿ ಇದನ್ನೂ ಸೇವಿಸಿದರೆ ಯಾವುದೇ ಕಾಯಿಲೆ ಬರುವುದಿಲ್ಲ. ಆರೋಗ್ಯ ತಜ್ಞರ ಪ್ರಕಾರ ನೆಲ್ಲಿಕಾಯಿ ರಸವನ್ನು ಆಹಾರದಲ್ಲಿ ಸೇರಿಸಿದರೆ, ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು. ಹೊಟ್ಟೆ ಮತ್ತು ಯಕೃತ್ತಿನ ಆರೋಗ್ಯ ಕಾಪಾಡುವಲ್ಲಿ ನೆಲ್ಲಿಕಾಯಿ ವಿಶೇಷ ಪಾತ್ರವನ್ನು ವಹಿಸುತ್ತದೆ. 

ರಕ್ತದ ಕೊರತೆ ನೀಗಿಸುತ್ತದೆ : 
ನೆಲ್ಲಿಕಾಯಿ ಸೇವನೆಯಿಂದ ರಕ್ತಹೀನತೆ ನಿವಾರಣೆಯಾಗುತ್ತದೆ. ಆಮ್ಲಾದಲ್ಲಿರುವ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನೆಲ್ಲಿಕಾಯಿಯನ್ನು ಸೂಪರ್ ಫುಡ್ ಎಂದೇ ಪರಿಗಣಿಸಲಾಗುತ್ತದೆ.  ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆಮ್ಲಾ ಜ್ಯೂಸ್ ಸೇವಿಸುವುದರಿಂದ ಅದ್ಭುತ ಪ್ರಯೋಜನಗಳು ಸಿಗಲಿವೆ. 

ಇದನ್ನೂ ಓದಿ : ಈ ವಸ್ತುಗಳನ್ನು ಸೇವಿಸಿದರೆ ಕೇವಲ ಎರಡೇ ದಿನಗಳಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ

ತೂಕ ಕೂಡ ಕಡಿಮೆ  ಮಾಡುತ್ತದೆ : 
ನೀವು ಫಿಟ್ ಮತ್ತು ಸ್ಲಿಮ್ ಆಗಿರಬೇಕಾದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆಮ್ಲಾ ಜ್ಯೂಸ್ ಅನ್ನು ಕುಡಿಯಬಹುದು. ಇದು ತೂಕವನ್ನು ಕಡಿಮೆ ಮಾಡುವಲ್ಲಿಯೂ ಸಹಕಾರಿಯಾಗಿದೆ. ಹೆಚ್ಚಿದ ತೂಕವನ್ನು ಕಡಿಮೆ ಮಾಡಬೇಕಾದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆಮ್ಲಾ ಜ್ಯೂಸ್ ಅನ್ನು ಕುಡಿಯಬಹುದು. ಇದು ತ್ವರಿತ ತೂಕ ನಷ್ಟಕ್ಕೆ ಕಾರಣವಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚುತ್ತದೆ :
ಇದಲ್ಲದೆ, ನೆಲ್ಲಿ ಕಾಯಿ ಜ್ಯೂಸ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ, ರೋಗಗಳ ವಿರುದ್ದ ಹೋರಾಡಲು ದೇಹ ಸದಾ ಸಿದ್ದವಿರುತ್ತದೆ.  ಬಲವಾದ ರೋಗನಿರೋಧಕ ಶಕ್ತಿಯಿದ್ದರೆ ಯಾವುದೇ ರೋಗಗಳಿಂದ ಹೆಚ್ಚಿನ ಅಪಾಯವಾದಂತೆ ತಡೆಯುವುದು ಸಾಧ್ಯವಾಗುತ್ತದೆ.

ಇದನ್ನೂ ಓದಿ : Ajwain Plants: ದೊಡ್ಡಪತ್ರೆ ಎಲೆಗಳಲ್ಲಿರುವ ಪ್ರಯೋಜನಗಳನ್ನು ತಿಳಿದರೆ ಅದನ್ನು ತಪ್ಪದೇ ಸೇವಿಸುತ್ತೀರಿ

 

( ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯಲ್ಲಿ ಹಕ್ಕು ಅಥವಾ ಚಿಕಿತ್ಸೆಗೆ ಪರ್ಯಾಯವಾಗಿರಲು ಸಾಧ್ಯವಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News