ವಿಜಯ್‌ ಜೊತೆ ʼಪೂಜಾ ಹೆಗ್ಡೆʼ ನಟಿಸಲ್ಲ..! ದೇವರಕೊಂಡಗೆ ಜೊತೆಯಾದ ಬಿಟೌನ್‌ ಸುಂದರಿ ʼಮೃಣಾಲ್‌ʼ

Vijay devarakonda new movie : ಲೈಗರ್‌ ಸೋಲಿನ ನಂತರ ವಿಜಯ್ ದೇವರಕೊಂಡ ನಿರ್ದೇಶಕ ಪರಶುರಾಮ್‌ ಜೊತೆ ಸಿನಿಮಾ ಮಾಡಲಿದ್ದಾರೆ. ಹಿಂದೆ ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ ಎಂದು ಹೇಳಲಾಗುತ್ತಿತ್ತು. ಆದ್ರೆ ಇದೀಗ ಪೂಜಾ ಬದಲಾಗಿ ಸೀತಾರಾಮಂ ಖ್ಯಾತಿಯ ಮೃಣಾಲ್‌ ಠಾಕೂರ್‌ ನಟಿಸಲಿದ್ದಾರೆ.

Written by - Krishna N K | Last Updated : Jun 14, 2023, 05:54 PM IST
  • ನಟ ವಿಜಯ್‌ ದೇವರಕೊಂಡ ಹಾಗೂ ನಿರ್ದೇಶಕ ಪರಶುರಾಮ್‌ ಹೊಸ ಸಿನಿಮಾ.
  • ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ ಎಂದು ಹೇಳಲಾಗುತ್ತಿತ್ತು.
  • ಆದ್ರೆ ಇದೀಗ ಪೂಜಾ ಬದಲಾಗಿ ಸೀತಾರಾಮಂ ಖ್ಯಾತಿಯ ಮೃಣಾಲ್‌ ಠಾಕೂರ್‌ ನಟಿಸಲಿದ್ದಾರೆ.
ವಿಜಯ್‌ ಜೊತೆ ʼಪೂಜಾ ಹೆಗ್ಡೆʼ ನಟಿಸಲ್ಲ..! ದೇವರಕೊಂಡಗೆ ಜೊತೆಯಾದ ಬಿಟೌನ್‌ ಸುಂದರಿ ʼಮೃಣಾಲ್‌ʼ title=

Vijay devarakonda Mrunal thakur : ಟಾಲಿವುಡ್‌ ಸ್ಟಾರ್‌ ನಟ ವಿಜಯ್‌ ದೇವರಕೊಂಡ ಹಾಗೂ ನಿರ್ದೇಶಕ ಪರಶುರಾಮ್‌ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾಗೆ ಇನ್ನು ಹೆಸರಿಟ್ಟಲ್ಲ. ಈ ಹಿಂದೆ ಈ ಸಿನಿಮಾದಲ್ಲಿ ವಿಜಯ್‌ ಜೊತೆ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅಲ್ಲದೆ ಈ ವಿಚಾರ ವಿಜಯ್‌ ಫ್ಯಾನ್ಸ್‌ಗೆ ಖುಷಿ ಕೊಟ್ಟಿತ್ತು. ಆದ್ರೆ ಇದೀಗ ಈ ಸುದ್ದಿ ಸುಳ್ಳಾಗಿದೆ.

ಹೌದು.. ವಿಜಯ್ ದೇವರಕೊಂಡ ಮುಂಬರುವ ಸಿನಿಮಾಗೆ ನಾಯಕಿ ಬದಲಾವಣೆಯಾಗಿದೆ. ಈ ಹಿಂದೆ ಪೂಜಾ ಹೆಗ್ಡೆ ಹೆಸರು ಕೇಳಿ ಬಂದಿತ್ತು ಆದ್ರೆ, ಇದೀಗ ದೇವರಕೊಂಡಗೆ ಜೊತೆಯಾಗಿ ಬಾಲಿವುಡ್‌ ಬೆಡಗಿ ಸೀತಾರಾಮಂ ಖ್ಯಾತಿಯ ಮೃಣಾಲ್ ಠಾಕೂರ್‌ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Namratha Gowda: ಕಿರುತೆರೆ ನಟಿ ನಮ್ರತಾ ಗೌಡ ಬೆಡ್‌ರೂಮ್‌ ವಿಡಿಯೋ ವೈರಲ್‌.!

ಈಗಾಗಲೇ ಮೃಣಾಲ್ ಠಾಕೂರ್ ಸೀತಾರಾಮಂ ಸಿನಿಮಾದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಪರಿಚಯವಾಗಿದ್ದಾರೆ. ಈ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್‌ಗೆ ಜೊತೆಯಾಗಿ ನಟಿಸಿದ್ದರು. ಅದ್ಭುತ ಪ್ರೇಮ ಕಥಾಹಂದರ ಹೊಂದಿದ್ದ ಈ ಚಿತ್ರ ಸಿನಿರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ ವಿಜಯ್‌ ದೇವರಕೊಂಡ ನಟನೆಯ ಮುಂಬರುವ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಇಂದು ಈ ಚಿತ್ರ ಮುಹೂರ್ತ ಕಾರ್ಯಕ್ರಮ ಕೂಡ ನೆರವೇರಿತು.

ಇನ್ನು ಮೃಣಾಲ್‌ಗೆ ಟಾಲಿವುಡ್‌ನಿಂದ ಸಾಕಷ್ಟು ಸಿನಿಮಾ ಆಫರ್‌ಗಳು ಬರುತ್ತಿವೆ. ರಾಮ್ ಚರಣ್ ಸದ್ಯ ಶಂಕರ್ ನಿರ್ದೇಶನದಲ್ಲಿ ಸಿನಿಮಾ ಶುರು ಮಾಡುತ್ತಿದ್ದಾರೆ. ಈ ಚಿತ್ರದ ನಂತರ ರಾಮ್ ಉಪ್ಪೇನ ಖ್ಯಾತಿಯ ಡೈರೆಕ್ಟರ್‌ ಬುಚ್ಚಿಬಾಬು ಸನಾ ಜೊತೆ ಸಿನಿಮಾ ಮಾಡಲಿದ್ದಾರೆ. ನವೆಂಬರ್‌ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ವರದಿ ಪ್ರಕಾರ ಈ ಸಿನಿಮಾದಲ್ಲಿ ಮೃಣಾಲ್‌ ನಟಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರೀಲ್ಸ್‌ ಸ್ಟಾರ್‌ ʼಸೋಫಿಯಾ ಅನ್ಸಾರಿʼ ಬಾತ್‌ ರೂಮ್‌ ಫೋಟೋಸ್‌ ವೈರಲ್‌..!

ಅಲ್ಲದೆ, ಮೃಣಾಲ್‌ಗೆ ಮತ್ತೊಂದು ದೊಡ್ಡ ಅವಕಾಶ ಸಿಕ್ಕಿದೆಯಂತೆ. ಹಿರಿಯ ನಾಯಕ ನಾಗಾರ್ಜುನ ಸದ್ಯ ಸತತ ಫ್ಲಾಪ್ ಚಿತ್ರಗಳಿಂದ ಸಂಕಷ್ಟದಲ್ಲಿದ್ದಾರೆ. ಅವರಿಗೆ ಇದೀಗ ಒಂದು ಹಿಟ್ ಅಗತ್ಯವಿದೆ. ಹೀಗಾಗಿ ಅವರು ತಮ್ಮ ಮುಂದಿನ ಚಿತ್ರವನ್ನು ಬರಹಗಾರ ಬೆಜವಾಡ ಪ್ರಸನ್ನ ಕುಮಾರ್ ಅವರೊಂದಿಗೆ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಎಲ್ಲಾ ಕೆಲಸ ಮುಕ್ತಾಯವಾಗಿದೆ. ಈ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News