ಬಲು ವಿಶೇಷವಾಗಿದೆ ಮೂರನೇ ಕೃಷ್ಣಪ್ಪ ಟ್ರೇಲರ್: ಪಕ್ಕ ಹಳ್ಳಿ ಸೊಗಡಿನ ಸಿನಿಮಾ ಮೇ 24ಕ್ಕೆ ರಿಲೀಸ್

Sandalwood: ಮೂರನೇ ಕೃಷ್ಣಪ್ಪ ಟ್ರೇಲರ್ ಬಿಡುಗಡೆಯಾಗಿದೆ. ಲೂಸ್ ಮಾದ ಯೋಗಿ ಸಂಭಾಷಣೆಯಲ್ಲಿ‌ ಶುರುವಾಗುವ ಟ್ರೇಲರ್‌’ನಲ್ಲಿ ಕೋಲಾರ‌ ಕನ್ನಡ , ರಂಗಾಯಣ ರಘು, ಸಂಪತ್ ಮೈತ್ರಿಯಾಯಂತಹ ಅದ್ಭುತ ಕಲಾವಿದರ ಅಭಿನಯ, ಹಳ್ಳಿ ಸೊಗಡನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ.

Written by - YASHODHA POOJARI | Last Updated : May 12, 2024, 05:28 PM IST
    • ವಿಭಿನ್ನ ಕಥಾಹಂದರದ ಮೂಲಕವೇ ಪ್ರೇಕ್ಷಕರಿಗೆ ಮನರಂಜನೆ
    • ಮೂರನೇ ಕೃಷ್ಣಪ್ಪ ಟ್ರೇಲರ್ ಬಿಡುಗಡೆಯಾಗಿದೆ
    • ಲೂಸ್ ಮಾದ ಯೋಗಿ ಸಂಭಾಷಣೆಯಲ್ಲಿ‌ ಶುರುವಾಗುವ ಟ್ರೇಲರ್‌
ಬಲು ವಿಶೇಷವಾಗಿದೆ ಮೂರನೇ ಕೃಷ್ಣಪ್ಪ ಟ್ರೇಲರ್: ಪಕ್ಕ ಹಳ್ಳಿ ಸೊಗಡಿನ ಸಿನಿಮಾ ಮೇ 24ಕ್ಕೆ ರಿಲೀಸ್ title=
Moorane Krishnappa Movie

Movie Update :ವಿಭಿನ್ನ ಕಥಾಹಂದರದ ಮೂಲಕವೇ ಪ್ರೇಕ್ಷಕರಿಗೆ ಮನರಂಜನೆ ನೀಡಲು ಹೊರಟಿರುವ ಸಿನಿಮಾ ಮೂರನೇ ಕೃಷ್ಣಪ್ಪ. ಶುರುವಾದಾಗಿನಿಂದಲೂ ಇಲ್ಲಿವರೆಗೂ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿರುವ ಈ ಚಿತ್ರದ ಮೊದಲ ನೋಟ ಇದೀಗ ಪ್ರೇಕ್ಷಕರನ್ನು ಆವರಿಸಿಕೊಂಡಿದೆ.

ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗಿಲ್ಲ ಈ ನಾಲ್ವರು ಆಟಗಾರರು! ಯಾರವರು ಗೊತ್ತಾ?

ಮೂರನೇ ಕೃಷ್ಣಪ್ಪ ಟ್ರೇಲರ್ ಬಿಡುಗಡೆಯಾಗಿದೆ. ಲೂಸ್ ಮಾದ ಯೋಗಿ ಸಂಭಾಷಣೆಯಲ್ಲಿ‌ ಶುರುವಾಗುವ ಟ್ರೇಲರ್‌’ನಲ್ಲಿ ಕೋಲಾರ‌ ಕನ್ನಡ , ರಂಗಾಯಣ ರಘು, ಸಂಪತ್ ಮೈತ್ರಿಯಾಯಂತಹ ಅದ್ಭುತ ಕಲಾವಿದರ ಅಭಿನಯ, ಹಳ್ಳಿ ಸೊಗಡನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಟ್ರೇಲರ್ ಪ್ರಾಮಿಸಿಂಗ್ ಆಗಿದ್ದು, ಸಿನಿಪ್ರಿಯರಿಗೆ ಮನರಂಜನೆ ಗ್ಯಾರೆಂಟಿ ಎಂಬ ಸಂದೇಶ ರವಾನಿಸಿದೆ.

'ಮೂರನೇ ಕೃಷ್ಣಪ್ಪ' ಸಿನಿಮಾವನ್ನು ನವೀನ್ ರೆಡ್ಡಿ ನಿರ್ದೇಶನ ಮಾಡಿದ್ದು, ವಿಭಿನ್ನ ಶೀರ್ಷಿಕೆಯೊಂದಿಗೆ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಮುಂದಾಗಿದ್ದಾರೆ.

ರೆಡ್ ಡ್ರ್ಯಾಗನ್ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. 'ಮೂರನೇ ಕೃಷ್ಣಪ್ಪ' ಸಿನಿಮಾಗೆ ಮೋಹನ್ ರೆಡ್ಡಿ ಜಿ, ರವಿಶಂಕರ್ ಹಣ ಹೂಡಿದ್ದಾರೆ. ಆನೇಕಲ್ ಭಾಗದ ಭಾಷೆಯ ಸೊಬಗನ್ನು ಇಟ್ಟುಕೊಂಡು ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಸಂಪತ್ ಮೈತ್ರೀಯಾ ನಾಯಕನಾಗಿ ನಟಿಸುತ್ತಿದ್ದರೆ, ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಶ್ರೀಪ್ರಿಯಾ ನಾಯಕಿಯಾಗಿದ್ದಾರೆ.

ಇದನ್ನೂ ಓದಿ: ಕೆಕೆಆರ್ ಆಟಗಾರನ ವಿರುದ್ಧ ಬಿಸಿಸಿಐ ಕ್ರಮ: ಪಂದ್ಯ ಶುಲ್ಕದ ಶೇಕಡಾ 20 ರಷ್ಟು ದಂಡ

ಇವರೊಂದಿಗೆ ತುಕಾಲಿ ಸಂತೋಷ್, ಉಗ್ರಂ ಮಂಜು ಸೇರಿದಂತೆ ಹಲವರು ನಟಿಸಿದ್ದಾರೆ. 'ಮೂರನೇ ಕೃಷ್ಣಪ್ಪ' ಸಿನಿಮಾಕ್ಕೆ ಆನಂದ್ ರಾಜವಿಕ್ರಮ್ ಸಂಗೀತ ನೀಡಿದ್ದು, ಶ್ರೀಕಾಂತ್ ಎಡಿಟಿಂಗ್ ಮಾಡಿದ್ದರೆ, ಯೋಗಿ ಕ್ಯಾಮರಾ ಹ್ಯಾಂಡಲ್ ಮಾಡಿದ್ದಾರೆ. ಮೇ 24ಕ್ಕೆ ಮೂರನೇ ಕೃಷ್ಣಪ್ಪನ ಕಥೆ ತೆರೆಗೆ ಬರಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News