ಉರ್ಫಿ ಜಾವೇದ್ ವಿಚಿತ್ರ ವೇಷ.. ಬೇರು, ಎಲೆಗಳಿಂದ ಮೈ ಮುಚ್ಚಿಕೊಂಡ ಉರ್ಫಿ ವಿಡಿಯೋ ವೈರಲ್‌

Urfi Javed : ಉರ್ಫಿ ಜಾವೇದ್‌ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನೀಲ್ ರನೌತ್ ಅವರ ಸಹಯೋಗದಲ್ಲಿ ಈ ಉಡುಪನ್ನು ಮಾಡಿರುವುದಾಗಿ ಹೇಳಿದ್ದಾರೆ. ಯಾವುದೇ ಹಣವನ್ನು ಖರ್ಚು ಮಾಡದೆ ಈ ವಿಚಿತ್ರ ಉಡುಪನ್ನು ಸಿದ್ಧಪಡಿಸಲಾಗಿದೆ.   

Written by - Chetana Devarmani | Last Updated : Jul 29, 2023, 12:04 PM IST
  • ಉರ್ಫಿ ಜಾವೇದ್‌ ಹೊಸ ಲುಕ್‌ ವಿಡಿಯೋ ವೈರಲ್‌
  • ಬೇರು, ಎಲೆಗಳಿಂದ ಮೈ ಮುಚ್ಚಿಕೊಂಡ ಉರ್ಫಿ
  • ಎಲ್ಲೆಡೆ ವೈರಲ್‌ ಆದ ಉರ್ಫಿಯ ಈ ವಿಡಿಯೋ
ಉರ್ಫಿ ಜಾವೇದ್ ವಿಚಿತ್ರ ವೇಷ.. ಬೇರು, ಎಲೆಗಳಿಂದ ಮೈ ಮುಚ್ಚಿಕೊಂಡ ಉರ್ಫಿ ವಿಡಿಯೋ ವೈರಲ್‌   title=
Urfi Javed

Urfi Javed Unique Look: ಉರ್ಫಿ ಜಾವೇದ್ ಸದಾ ತಮ್ಮ ವಿಚಿತ್ರ ಉಡುಪಿನ ಶೈಲಿಯಿಂದ ಟ್ರೋಲ್‌ ಆಗುತ್ತಾರೆ. ಬಗೆಬಗೆಯ ಬಟ್ಟೆಗಳನ್ನು ತಯಾರಿಸಿರುವ ಉರ್ಫಿ ಈ ಬಾರಿ ಬೇರು, ಪೊದೆ, ಎಲೆಗಳಿಂದ ಡ್ರೆಸ್ ತಯಾರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದೆ. ಉರ್ಫಿ ಅವರ ಹೊಸ ಲುಕ್ ತುಂಬಾ ವೈರಲ್ ಆಗುತ್ತಿದೆ. ಇದರಲ್ಲಿ ಅವರು ನಿಜವಾಗಿಯೂ ಬೇರುಗಳು, ಹುಲ್ಲು ಮತ್ತು ಎಲೆಗಳಿಂದ ಮಾಡಿದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಕಲ್ಪನೆಯು ಉರ್ಫಿಯದ್ದಲ್ಲ.

ಉರ್ಫಿ ಜಾವೇದ್‌ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ನೀಲ್ ರನೌತ್ ಅವರ ಸಹಯೋಗದಲ್ಲಿ ಈ ಉಡುಪನ್ನು ಮಾಡಿರುವುದಾಗಿ ಹೇಳಿದ್ದಾರೆ. ಯಾವುದೇ ಹಣವನ್ನು ಖರ್ಚು ಮಾಡದೆ ಈ ವಿಶಿಷ್ಟ ಬಟ್ಟೆಯನ್ನು ತಯಾರಿಸಲಾಗಿದೆ. 

ಇದನ್ನೂ ಓದಿ: ಹಸಿರ ನಿಸರ್ಗ ಮಡಿಲಲ್ಲಿ ʼಕನ್ನಡತಿʼ ನಟಿ ರಂಜನಿ ರಾಘವನ್; ಫೋಟೊಸ್‌ ನೋಡಿ

ಗೆಡ್ಡೆ-ಬೇರಿನಿಂದ ಉಡುಪನ್ನು ತಯಾರಿಸಿದ ಈ ವಿನ್ಯಾಸಕ ಮತ್ತು ಅದನ್ನು ಧರಿಸಿದ ಉರ್ಫಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋ ವೈರಲ್ ಆದ ತಕ್ಷಣ ಜನ ಅನೇಕ ರೀತಿಯ ಕಾಮೆಂಟ್ ಮಾಡಿದ್ದಾರೆ. ಕೆಲವರು ಉರ್ಫಿಯನ್ನು ಹುಚ್ಚಿ ಎಂದು ಕರೆಯುತ್ತಿದ್ದಾರೆ ಮತ್ತು ಕೆಲವರು ಅವಳ ಕೆಂಪು ಬಣ್ಣದ ಕೂದಲಿಗೆ ಹಸಿರು ಬಣ್ಣ ಬಳಿಯುವಂತೆ ಸಲಹೆ ನೀಡುತ್ತಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Uorfi Javed (@urf7i)

 

ಅಂದಹಾಗೆ, ಇದಕ್ಕೂ ಮೊದಲು, ಕೆಲವು ಸಮಯದ ಹಿಂದೆ ಉರ್ಫಿಯ ವೀಡಿಯೊ ವೈರಲ್ ಆಗಿತ್ತು, ಅದರಲ್ಲಿ ಅವರು ಮರದ ತೊಗಟೆಯನ್ನು ಧರಿಸಿದ್ದರು. ಉರ್ಫಿಯ ಈ ಶೈಲಿಯನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ಉರ್ಫಿ ಜಾವೇದ್ ಇಂದು ರೆಸ್ಟೋರೆಂಟ್‌ನ ಹೊರಗೆ ಕಾಣಿಸಿಕೊಂಡರು, ಅಲ್ಲಿ ಅವರ ವಿಭಿನ್ನ ನೋಟ ವೈರಲ್ ಆಗುತ್ತಿದೆ. ಉರ್ಫಿ ಹಸಿರು ಬಣ್ಣದ ಥಾಯ್ ಸ್ಲೀಟ್ ಗೌನ್ ಧರಿಸಿ ತುಂಬಾ ಬೋಲ್ಡ್ ಶೈಲಿಯಲ್ಲಿ ಆಗಮಿಸಿದ್ದರು.

ಇದನ್ನೂ ಓದಿ: ಅಭಿಷೇಕ್ ಬಚ್ಚನ್ ಪತ್ನಿಯಾಗಬೇಕಿತ್ತು ಕರಿಷ್ಮಾ, ನಿಶ್ಚಿತಾರ್ಥ ಮುರಿದುಬಿದ್ದಿದ್ದು ಯಾಕೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News