Urfi Javed: ಉರ್ಫಿ ಎದೆಯ ಮೇಲೆ ಬ್ಯಾಟರಿ ಫ್ಯಾನ್: ಬೋಲ್ಡ್ ವಿಡಿಯೋ ವೈರಲ್!

Urfi Javed New Dress: ಬಾಲಿವುಡ್‌ ನಟಿ ಉರ್ಫಿ ಜಾವೇದ್‌ ಎದೆಯ ಮೇಲೆ ಎರಡು ಸಣ್ಣ ಫ್ಯಾನ್‌ಗಳಿರುವಂತಹ ಡ್ರೆಸ್ ಧರಿಸಿಕೊಂಡು ಕೂಲ್‌ ಆಗಿ ಕಾಣಿಸಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ. ಈ ನಟಿಯ ವಿಡಿಯೋ ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. 

Written by - Zee Kannada News Desk | Last Updated : Apr 7, 2024, 11:47 AM IST
  • ಉರ್ಫಿ ಜಾವೇದ್‌ ಎದೆಯ ಮೇಲೆ ಎರಡು ಸಣ್ಣ ಫ್ಯಾನ್‌ಗಳಿರುವಂತಹ ಡ್ರೆಸ್ ಹಾಕಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
  • ನಟಿ ಉರ್ಫಿ ಜಾವೇದ್‌ ಫ್ಯಾನ್‌ ಡ್ರೆಸ್‌ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಈಕೆಯ ಹುಚ್ಚಾಟ ನೋಡಿ ಕೆಲವರು ಬಿದ್ದು ಬಿದ್ದು ನಕ್ಕಿದ್ದಾರೆ.
  • ಉರ್ಫಿ ಜಾವೇದ್‌ ಸದಾ ಸಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಆಗಿರುವ ನಟಿ ಬೋಲ್ಡ್ ಫೋಟೋಶೂಟ್‌ಗಳಿಂದ ಸದ್ದು ಮಾಡುತ್ತಿದ್ದಾರೆ.
Urfi Javed: ಉರ್ಫಿ ಎದೆಯ ಮೇಲೆ ಬ್ಯಾಟರಿ ಫ್ಯಾನ್: ಬೋಲ್ಡ್ ವಿಡಿಯೋ ವೈರಲ್! title=

Urfi Javed Fan Dress Viral Video: ಬಾಲಿವುಡ್‌ ನಟಿ ಉರ್ಫಿ ಜಾವೇದ್‌ ತನ್ನ ವಿಚಿತ್ರ ಫ್ಯಾಷನ್‌ ಸೆನ್ಸ್‌ನಿಂದ ಯಾವಾಗಲೂ ಸುದ್ದಿಯಾಗುತ್ತಿರುತ್ತಾರೆ. ಈ ನಟಿ ಡಿಸೈನ್‌ ಮಾಡಿಸುವ ಡ್ರೆಸ್‌ಗಳನ್ನು ನೋಡಿದರೇ, ಈಕೆಗೆ ಇಂತಹ ವಿಚಿತ್ರ ಐಡಿಯಾಗಳಯ ಎಲ್ಲಿಂದ ಬರುತ್ತದೋ ಅಂತ ಅನಿಸುತ್ತದೆ. ಇದೀಗ ಈ ನಟಿ ಎದೆಯ ಮೇಲೆ ಎರಡು ಸಣ್ಣ ಫ್ಯಾನ್‌ಗಳಿರುವಂತಹ ಡ್ರೆಸ್ ಹಾಕಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. 

ಹೌದು.. ನಟಿ ಉರ್ಫಿ ಜಾವೇದ್‌ ಎದೆಯ ಮೇಲೆ ಎರಡು ಸಣ್ಣ ಬ್ಲಾಲ್‌ ಆಂಟ್‌ ವೈಟ್‌ ರೌಂಡ್‌ ಫ್ಯಾನ್‌ ಇರುವಂತಹ ಬಟ್ಟೆಯನ್ನು ಧರಿಸಿದ್ದಾರೆ. ಈಕೆ ಶಾರ್ಟ್ ಸ್ಟ್ರೀಪ್‌ ಇರುವ ಟಾಪ್‌ ಧರಸಿ ಸೊಂಟದ ಅಂದವನ್ನು ತೋರಿಸುತ್ತಾ, ಎದೆಯ ಮೇಲೆ ಎರಡು ಫ್ಯಾನ್‌ಗಳನ್ನು ಹಾಕಿಕೊಂಡು ಬ್ಯಾಟರಿ ಕನೆಕ್ಷನ್ ಕೊಟ್ಟಿದ್ದಾರೆ. ಟಾಪ್‌ ಹಿಂದಗಡೆ ಸ್ವಿಚ್‌ ಕನೆಕ್ಷನ್‌ ನೀಡಿದ್ದು, ಅದನ್ನು ಆನ್‌ ಮಾಡಿ ಫ್ಯಾನ್ಸ್ ತಿರುಗಿಸುತ್ತಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Uorfi (@urf7i)

ಇದನ್ನೂ ಓದಿ: Haripriya: ಅಡ್ವೋಕೇಟ್‌ ಅಹನರಾದ ಸ್ಯಾಂಡಲ್‌ವುಡ್‌ ಬ್ಯೂಟಿ ಕ್ವೀನ್: ಕಿರುತೆರೆಯಲ್ಲಿ ಹರಿಪ್ರಿಯಾ!‌

ನಟಿ ಉರ್ಫಿ ಜಾವೇದ್‌ ಫ್ಯಾನ್‌ ಡ್ರೆಸ್‌ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಈಕೆಯ ಹುಚ್ಚಾಟ ನೋಡಿ ಕೆಲವರು ಬಿದ್ದು ಬಿದ್ದು ನಕ್ಕಿದ್ದಾರೆ. ಇನ್ನೂ ಕೆಲವರು ತಮಾಷೆಯ ಕಾಮೆಂಟ್‌ಗಳನ್ನು ಕೂಡ ಮಾಡುತ್ತಿದ್ದಾರೆ. ಮತ್ತಷ್ಟು ಸೋಶಿಯಲ್‌ ಮಿಡಿಯಾ ಬಳಕೆದಾರರು ಈಕೆಯ ಅವತಾರ ಕಂಡು ಕಮೆಂಟ್‌ ಬಾಕ್ಸ್‌ನಲ್ಲಿ "ಉರ್ಫಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಬ್ಯಾನ್ ಮಾಡಬೇಕು" ಎಂದು ಬರೆದಿದ್ದಾರೆ. ಮತ್ತೊಬ್ಬರು "ಇಷ್ಟೊಂದು ಕ್ರಿಯೇಟಿವ್ ಆಗಿ ಯೋಚಿಸುವ ಉರ್ಫಿ ದೊಡ್ಡ ಫ್ಯಾಷನ್‌ ಡಿಸೈನರ್‌ಗಳ ಜೊತೆ ಕೆಲಸ ಮಾಡಬೇಕು" ಎಂದು ಕಮೆಂಟ್‌ ಹಾಕಿದ್ದಾರೆ.

ಉರ್ಫಿ ಜಾವೇದ್‌ ಸದಾ ಸಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಆಗಿರುವ ನಟಿ ಬೋಲ್ಡ್ ಫೋಟೋಶೂಟ್‌ಗಳಿಂದ ಸದ್ದು ಮಾಡುತ್ತಿದ್ದಾರೆ. ಇದೇ ತರಹ ಕೆಲವೊಮ್ಮೆ ಆಕೆಯ ಬೋಲ್ಡ್‌ನೆಸ್ ಅತಿರೇಕಕ್ಕೆ ಹೋಗುತ್ತದೆ.ಈ ನಟಿ ಉತ್ತರ ಪ್ರದೇಶದಲ್ಲಿ ಜನಿಸಿ ಬೆಳೆದರೂ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಮೊದಲು 'ಚಂದ್ರ ನಂದಿನಿ', 'ಮೇರಿ ದುರ್ಗಾ', 'ಸಾತ್ ಫೆರೋ ಕಿ ಹೇರಾ ಫೆರೀ', 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ಅಂತಹ ಸೀರಿಯಲ್‌ಗಳಲ್ಲಿ ಬಣ್ಣ ಹಚ್ಚಿದ ನಟಿ, ನಂತರ ಹಿಂದಿ ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಎಂಟ್ರಿ ನೀಡಿ ಕೆಲವು ದಿನಗಳು ಮಾತ್ರವಿದ್ದರೂ  ಒಳ್ಳೆ ಖ್ಯಾತಿಯನ್ನೇ ಗಳಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News