Uorfi Javed: ನಿಮ್ಮಿಂದ ಭಾರತದ ಪ್ರತಿಷ್ಠೆ ಹಾಳು ಎಂದ ಅಪರಿಚಿತ ವ್ಯಕ್ತಿಗೆ ಉರ್ಫಿ ಜಾವೇದ್ ಕ್ಲಾಸ್​..ವಿಡಿಯೋ ವೈರಲ್‌

Urofi Javed Viral Video : ಅರೆಬರೆ ಬಟ್ಟೆ ತೊಟ್ಟು ಫೇಮಸ್​ ಆಗಿರುವ ಕಿರುತರೆ ನಟಿ ಉರ್ಫಿ ಜಾವೇದ್ ನಿಮ್ಮಿಂದ ಭಾರತದ ಪ್ರತಿಷ್ಠೆ ಹಾಳು ಎಂದ ಅಪರಿಚಿತ ವ್ಯಕ್ತಿಗೆ ಮುಂಬೈ ಏರ್​ಪೋರ್ಟ್​ನಲ್ಲಿ ಸಾರ್ವಜನಿಕವಾಗಿ ಕ್ಲಾಸ್​ ತೆಗೆದುಕೊಂಡಿರುವ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್​ ಆಗಿದೆ. 

Written by - Savita M B | Last Updated : Jul 25, 2023, 12:35 PM IST
  • ಪ್ರತಿ ಬಾರಿಯೂ ತನ್ನ ಡ್ರೆಸ್ಸಿಂಗ್‌ ಸೆನ್ಸ್‌ನಿಂದ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್‌
  • ಇದೀಗ ನಟಿ ತನ್ನನ್ನು ಕೆಣಕಿದ ಅಪರಿಚಿತ ವ್ಯಕ್ತಿಗೆ ಕೆಂಡಾಮಂಡಲವಾಗಿ ಉತ್ತರ ನೀಡಿ ಮತ್ತೆ ಸುದ್ದಿಯಲ್ಲಿದ್ದಾರೆ.
  • ಸದ್ಯ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.
Uorfi Javed: ನಿಮ್ಮಿಂದ ಭಾರತದ ಪ್ರತಿಷ್ಠೆ ಹಾಳು ಎಂದ ಅಪರಿಚಿತ ವ್ಯಕ್ತಿಗೆ ಉರ್ಫಿ ಜಾವೇದ್ ಕ್ಲಾಸ್​..ವಿಡಿಯೋ ವೈರಲ್‌ title=

Urofi Javed :  ಪ್ರತಿ ಬಾರಿಯೂ ತನ್ನ ಡ್ರೆಸ್ಸಿಂಗ್‌ ಸೆನ್ಸ್‌ನಿಂದ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್‌. ಇದೀಗ ನಟಿ ತನ್ನನ್ನು ಕೆಣಕಿದ ಅಪರಿಚಿತ ವ್ಯಕ್ತಿಗೆ ಕೆಂಡಾಮಂಡಲವಾಗಿ ಉತ್ತರ ನೀಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಸೋಮವಾರ (ಜುಲೈ 24) ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಉರ್ಫಿ ಜಾವೇದ್​ ಹಸಿರು ಬಣ್ಣದ ಬ್ಯಾಕ್​ಲೆಸ್​ ಗೌನ್​ ಧರಿಸಿದ್ದರು. ನಟಿ ವಿಮಾನ ನಿಲ್ದಾಣದಿಂದ ಹೊರಬರುವ ವೇಳೆ ಎದುರು ಬಂದ ಅಪರಿಚಿತ ವ್ಯಕ್ತಿಯೊಬ್ಬರು ಇಂಡಿಯಾ ಕಾ ನಾಮ್ ಖರಾಬ್ ಮತ್ ಕರೋ (ಭಾರತದ ಹೆಸರನ್ನು ಹಾಳು ಮಾಡಬೇಡಿ) ಎಂದಿದ್ದಾರೆ.

 
 
 
 

 
 
 
 
 
 
 
 
 
 
 

A post shared by Viral Bhayani (@viralbhayani)

ಇದನ್ನೂ ಓದಿ-Sakshi Dhoni: ಕೂಲ್ ಕ್ಯಾಪ್ಟನ್ ಧೋನಿ ಪತ್ನಿ ಸಾಕ್ಷಿ ಈ ಸೂಪರ್ ಸ್ಟಾರ್ ನಟನ ಬಿಗ್‌ ಫ್ಯಾನ್..!

ಇದರಿಂದ ಕೋಪಗೊಂಡ ಉರ್ಫಿ, "ಆಪ್ಕೇ ಬಾಪ್ ಕಾ ಕುಚ್ ಜಾ ರಹಾ ಹೈಂ? ನಹೀ ಜಾ ರಹಾ ಹೈ ನ ಆಪ್ಕೇ ಬಾಪ್ ಕಾ? ಜಾವೋ ಅಪ್ನಾ ಕಾಮ್ ಕರೋ" (ನಿಮ್ಮ ಅಪ್ಪಂದು ಏನಾದ್ರೂ ಗಂಟು ಹೋಯ್ತಾ ನನ್ನಿಂದ..ನಿಮ್‌ ಕೆಲಸ ಎಷ್ಟು ಇದೆಯೋ ಅಷ್ಟು ನೋಡಿಕೊಳ್ಳಿ) ಎಂದು ಗುಡುಗಿದ್ದಾರೆ. ಈ ಸಂದರ್ಭದಲ್ಲಿ ಉರ್ಫಿ ಜೊತೆಯಿದ್ದ ಅವರ ಸ್ನೇಹಿತೆ ಪರಿಸ್ಥಿತಿ ನಿಯಂತ್ರಿಸಿದ್ದಾರೆ. 

ಇನ್ನು ನಟಿ ಉರ್ಫಿ ನಿನ್ನೆಯಷ್ಟೇ ಹೊಸ ಮೇಕಪ್‌ ಐಟಂ ಬಳಸಿ ಮುಖದ ಅಂದವನ್ನು ಹಾಳು ಮಾಡಿಕೊಂಡಿದ್ದೇನೆ ಎಂದು ಸೋಷಿಯಲ್‌ ಮಿಟಿಯಾದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ವಿಚಾರವಾಗಿಯೂ ನಟಿ ಸುದ್ದಿಯಲ್ಲಿದ್ದರು. 

ಇದನ್ನೂ ಓದಿ-ಪ್ರಭುದೇವನಿಗಾಗಿ ಸಸ್ಯಾಹಾರಿಯಾಗಿದ್ದೆ..ಆತನನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದೆ-ನಟಿ ವನಿತಾ ವಿಜಯಕುಮಾರ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News