Vishwambhara: ಮೆಗಾಸ್ಟಾರ್‌ನ ವಿಶ್ವಂಭರದಲ್ಲಿ ಅತಿಲೋಕ ಸುಂದರಿ ತ್ರಿಷಾ ಆಯ್ಕೆ!‌

Vishwambhara Update: ಮೆಗಾಸ್ಟಾರ್‌ ಚಿರಂಜೀವಿಯ  ಬಹುನಿರೀಕ್ಷಿತ 156ನೇ ಸಿನಿಮಾ ವಿಶ್ವಂಭರಕ್ಕೆ ಬಹುಭಾಷಾ ತಾರೆ ತ್ರಿಷಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಚಿತ್ತತಂಡ ಘೋಷಿಸಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.

Written by - Zee Kannada News Desk | Last Updated : Feb 6, 2024, 11:07 AM IST
  • ದಕ್ಷಿಣ ಭಾರತದ ಅತಿಲೋಕ ಸುಂದರಿ ತ್ರಿಷಾ ಮೆಗಾಸ್ಟಾರ್‌ ಚಿರಂಜೀವಿಯ 156ನೇ ಸಿನಿಮಾ ವಿಶ್ವಂಭರಕ್ಕೆ ಆಯ್ಕೆಯಾಗಿದ್ದಾರೆ.
  • ಬಹುಭಾಷಾ ತಾರೆ ತ್ರಿಷಾ ಕಳೆದ ಎರಡು ದಶಕಗಳಿಂದ ತೆಲುಗು ಚಿತ್ರರಂಗದ ಜೊತೆಗೆ ತಮಿಳು ಮತ್ತು ಹಿಂದಿಯಲ್ಲಿ ತಮ್ಮ ಪ್ರತಿಭೆಯನ್ನು ನಾಯಕಿಯಾಗಿ ತೋರಿಸಿದ್ದಾರೆ.
  • ಸದ್ಯ ವಿಶ್ವಂಭರ ಸಿನಿಮಾಗೆ ವಿಕ್ರಮ್, ವಂಶಿ ಮತ್ತು ಪ್ರಮೋದ್ ಹಣ ಹಾಕುತ್ತಿದ್ದು, ಚಿರಂಜೀವಿ ಸಿನಿಕರಿಯ್ ನಲ್ಲಿ ಅತ್ಯಂತ ದುಬಾರಿ ವೆಚ್ಚದ ಚಿತ್ರವಾಗಿದೆ.
Vishwambhara: ಮೆಗಾಸ್ಟಾರ್‌ನ ವಿಶ್ವಂಭರದಲ್ಲಿ ಅತಿಲೋಕ ಸುಂದರಿ ತ್ರಿಷಾ ಆಯ್ಕೆ!‌ title=

Trisha In Vishwambhara: ಟಾಲಿವುಡ್‌ ಸ್ಟಾರ್ ನಟ ಚಿರಂಜೀವಿಯ ಬಹುನಿರೀಕ್ಷಿತ ಸಿನಿಮಾ ವಿಶ್ವಂಭರ‌ ಬಗ್ಗೆ ಒಂದಾದ ಮೇಲೆ ಒಂದು ಅಪ್ಡೇಟ್‌ ಸಿಗುತ್ತಿದ್ದು, ಅದರಂತೆ ಇದೀಗ ಚಿತ್ರದ ನಾಯಕಿ ಆಯು ಎಂಬ ಮಾಹಿತಿ ಹೊರಬಂದಿದೆ.ದಕ್ಷಿಣ ಭಾರತದ ಅತಿಲೋಕ ಸುಂದರಿ ತ್ರಿಷಾ ಮೆಗಾಸ್ಟಾರ್‌ ಚಿರಂಜೀವಿಯ 156ನೇ ಸಿನಿಮಾ ವಿಶ್ವಂಭರಕ್ಕೆ  ಆಯ್ಕೆಯಾಗಿದ್ದಾರೆ. 18 ವರ್ಷಗಳ ನಂತರ ತ್ರಿಷಾ  ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ತೆಲುಗಿನಲ್ಲಿ ಮತ್ತೆ ನಟಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದು, ನಿನ್ನೆ ತ್ರಿಷಾ ಈ ಚಿತ್ರದ ಶೂಟಿಂಗ್ ವಿಡಿಯೋವನ್ನು ಚಿರಂಜೀವಿ ಹಂಚಿಕೊಂಡಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Trish (@trishakrishnan)

ಬಹುಭಾಷಾ ತಾರೆ ತ್ರಿಷಾ ಕಳೆದ ಎರಡು ದಶಕಗಳಿಂದ ತೆಲುಗು ಚಿತ್ರರಂಗದ ಜೊತೆಗೆ ತಮಿಳು ಮತ್ತು ಹಿಂದಿಯಲ್ಲಿ ತಮ್ಮ ಪ್ರತಿಭೆಯನ್ನು  ನಾಯಕಿಯಾಗಿ ತೋರಿಸಿದ್ದಾರೆ. ಕೆಲ ಕಾಲ ಕರಿಯರ್ ಗೆ ಗ್ಯಾಪ್ ನೀಡಿದ ಈ ಚೆಲುವೆ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ ಮೂಲಕ ಮತ್ತೊಮ್ಮೆ ಲೈಮ್ ಲೈಟ್ ಕಡೆಗೆ ಹೆಜ್ಜೆಹಾಕಿದರು. ಈ ಸಿನಿಮಾದ ನಂತರ ಕೆರಿಯರ್ ಗ್ರಾಫ್ ಏರಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇತ್ತೀಚಿಗೆ ಲಿಯೋ ಚಿತ್ರದಲ್ಲಿ ದಳಪತಿ ವಿಜಯ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಸ್ಟಾಲಿನ್ ಚಿತ್ರದ ನಂತರ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ ಇದಾಗಿದೆ.

ಇದನ್ನೂ ಓದಿ: Shahid Kapoor: ಛತ್ರಪತಿ ಶಿವಾಜಿ ಮಹರಾಜನ ಪಾತ್ರದಲ್ಲಿ ಶಾಹಿದ್‌!

ವಿಶ್ವಂಭರ ಸಿನಿಮಾಗೆ ಆರಂಭದಲ್ಲಿ ನಟಿ ಸಮಂತಾ ನಾಯಕಿ ಎನ್ನಲಾಗಿದ್ದು, ಆದರೆ ದಿಢೀರನೆ ಈ ನಟಿಯ ಪಕ್ಕದಲ್ಲಿದ್ದ ತ್ರಿಷಾಗೆ ಆ ಸ್ಥಾನ ಕನ್ಫರ್ಮ್ ಆಗಿತ್ತು. ಮೊನ್ನೆಯಷ್ಟೇ ಸಂಕ್ರಾಂತಿ ಹಬ್ಬದ ದಿನದಂದು ವಿಶ್ವಂಭರ ಟೈಟಲ್ ಟೀಸರ್  ಮೂಲಕ ಸುಗ್ಗಿ ಸಂಭ್ರಮವನ್ನು ಚಿತ್ರತಂಡ ಹೆಚ್ಚಿಸಿದ್ದು, ಈ ಚಿತ್ರಕ್ಕೆ ವಿಶ್ವಂಭರ ಎಂಬ ಟೈಟಲ್ ಇಡಲಾಗಿದೆ. ಈ ಟೈಟಲ್ ಟೀಸರ್ ನಲ್ಲಿ ಗ್ರಾಫಿಕ್ಸ್ ಕೆಲಸ ಪರಿಣಾಮಕಾರಿಯಾಗಿದ್ದು, ಈ ಮೆಗಾ ಫ್ಯಾಂಟಸಿ ಸಾಹಸವನ್ನು ಬಿಂಬಿಸಾರ ಖ್ಯಾತಿಯ ವಸಿಷ್ಠ ಯುವಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ದೇಶಿಸಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Trish (@trishakrishnan)

ಸದ್ಯ ವಿಶ್ವಂಭರ ಸಿನಿಮಾಗೆ ವಿಕ್ರಮ್, ವಂಶಿ ಮತ್ತು ಪ್ರಮೋದ್ ಹಣ ಹಾಕುತ್ತಿದ್ದು, ಚಿರಂಜೀವಿ ಸಿನಿಕರಿಯ್ ನಲ್ಲಿ ಅತ್ಯಂತ ದುಬಾರಿ ವೆಚ್ಚದ ಚಿತ್ರವಾಗಿದೆ. ವಿಶ್ವಂಭರ ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ಸಂಯೋಜಿಸಿದ್ದು, ಚೋಟಾ ಕೆ ನಾಯ್ಡು ಸಿನಿಮಾದ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಎಎಸ್ ಪ್ರಕಾಶ್ ನಿರ್ಮಾಣ ವಿನ್ಯಾಸ, ಸುಶ್ಮಿತಾ ಕೊನಿಡೇಲ ವಸ್ತ್ರ ವಿನ್ಯಾಸ ಮಾಡಿದ್ದು,ಕೋಟಗಿರಿ ವೆಂಕಟೇಶ್ವರರಾವ್ ಮತ್ತು ಸಂತೋಷ್ ಕಾಮಿರೆಡ್ಡಿ ಚಿತ್ರಕ್ಕೆ ಸಂಕಲನ ನೀಡಿದ್ದಾರೆ. ಶ್ರೀ ಶಿವಶಕ್ತಿ ದತ್ತ ಮತ್ತು ಚಂದ್ರಬೋಸ್ ಗೀತರಚನೆಕಾರರಾಗಿದ್ದರೆ, ಶ್ರೀನಿವಾಸ್ ಗವಿರೆಡ್ಡಿ, ಗಂಟಾ ಶ್ರೀಧರ್, ನಿಮ್ಮಗಡ್ಡ ಶ್ರೀಕಾಂತ್ ಮತ್ತು ಮಯೂಖ್ ಆದಿತ್ಯ ಅವರು ಚಿತ್ರಕಥೆ ಸಹಾಯಕರಾಗಿದ್ದಾರೆ. ವಿಶ್ವಂಭರವನ್ನು 2025 ರ ಸಂಕ್ರಾಂತಿಗೆ ರಿಲೀಸ್ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News