Trisha Krishnan: ರಾಜಕೀಯಕ್ಕೆ ನಟಿ ತ್ರಿಷಾ ಕೃಷ್ಣನ್‌ ಎಂಟ್ರಿ.!

Trisha Krishnan Entry into politics : ಸಿನಿಮಾ ತಾರೆಯರು ರಾಜಕೀಯಕ್ಕೆ ಬರುವುದು ಹೊಸದೇನಲ್ಲ. ಈಗಾಗಲೇ ಹಲವು ಸಿನಿಮಾ ತಾರೆಯರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಇನ್ನೊಬ್ಬ ನಟಿ ಕೂಡ ರಾಜಕೀಯಕ್ಕೆ ಬರಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.  

Written by - Chetana Devarmani | Last Updated : Aug 19, 2022, 04:10 PM IST
  • ಸಿನಿಮಾ ತಾರೆಯರು ರಾಜಕೀಯಕ್ಕೆ ಬರುವುದು ಹೊಸದೇನಲ್ಲ
  • ಈಗಾಗಲೇ ಹಲವು ಸಿನಿಮಾ ತಾರೆಯರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ
  • ಇದೀಗ ಇನ್ನೊಬ್ಬ ನಟಿ ಕೂಡ ರಾಜಕೀಯಕ್ಕೆ ಬರಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ
Trisha Krishnan: ರಾಜಕೀಯಕ್ಕೆ ನಟಿ ತ್ರಿಷಾ ಕೃಷ್ಣನ್‌ ಎಂಟ್ರಿ.!  title=
ತ್ರಿಷಾ ಕೃಷ್ಣನ್

Trisha Krishnan Entry into politics : ಸಿನಿಮಾ ತಾರೆಯರು ರಾಜಕೀಯಕ್ಕೆ ಬರುವುದು ಹೊಸದೇನಲ್ಲ. ಈಗಾಗಲೇ ಹಲವು ಸಿನಿಮಾ ತಾರೆಯರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ತಮಿಳುನಾಡಿನಲ್ಲಿ ಅನೇಕ ಸಿನಿಮಾ ತಾರೆಯರು ರಾಜಕೀಯದಲ್ಲಿ ಮಿಂಚುತ್ತಿದ್ದಾರೆ. ಮತ್ತು ರಾಜಕೀಯದಲ್ಲಿ ಪುರುಷರಿಗಿಂತ ಕಡಿಮೆಯಿಲ್ಲ ಎಂದು ಮಹಿಳೆಯರು ಕೂಡ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಅನೇಕ ತಮಿಳು ಮತ್ತು ತೆಲುಗು ಮಹಿಳೆಯರು ಈಗಾಗಲೇ ರಾಜಕೀಯದಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೇ ಸ್ಟಾರ್ ಹೀರೋಯಿನ್ ಕೂಡ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜಯಲಲಿತಾ ತಮಿಳುನಾಡು ರಾಜಕೀಯದಲ್ಲಿ ಮಿಂಚಿರುವ ವಿಚಾರ ರಲ್ಲರಿಗೂ ತಿಳಿದಿರುವುದೆ ಆಗಿದೆ. ಇದೀಗ ಇನ್ನೊಬ್ಬ ನಟಿ ಕೂಡ ರಾಜಕೀಯಕ್ಕೆ ಬರಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಆ ನಟಿ ಬೇರಾರು ಅಲ್ಲ, ಚೈನ್ನೈ ಚಂದ್ರಂ ತ್ರಿಷಾ ಕೃಷ್ಣನ್.

ಇದನ್ನೂ ಓದಿ: ಮುಸ್ತಫಾ ರಾಜ್ - ಪ್ರಿಯಾಮಣಿ ಸಂಬಂಧದಲ್ಲಿ ಬಿರುಕು! ವಿಚ್ಛೇದನ ಪಡೀತಾರಾ ಬಹುಭಾಷಾ ನಟಿ?

ತೆಲುಗು, ತಮಿಳು ಭಾಷೆಗಳಲ್ಲಿ ತ್ರಿಶಾ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದು ಗೊತ್ತೇ ಇದೆ. ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಎದುರು ನಾಯಕಿಯಾಗಿ ತ್ರಿಷಾ ನಟಿಸಿದ್ದರು. ಈ ಹಿಂದೆ ಮಾರಾಟವಾಗುವ ಸಿನಿಮಾಗಳ ಆವೇಗ ಕೊಂಚ ಕಡಿಮೆಯಾಗಿದೆ ಎಂದೇ ಹೇಳಬೇಕು. ಇತ್ತೀಚೆಗೆ ತ್ರಿಷಾ ತೆಲುಗು ಚಿತ್ರಗಳಿಂದ ದೂರ ಉಳಿದಿದ್ದಾರೆ. ತಮಿಳಿನಲ್ಲಿ ಲೇಡಿ ಓರಿಯೆಂಟೆಡ್ ಸಿನಿಮಾಗಳನ್ನು ಮಾಡುವ ಮೂಲಕ ತ್ರಿಷಾ ರಂಜಿಸಿದ್ದಾರೆ. 

ಇದೀಗ ಈ ನಟಿ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಸದ್ಯದಲ್ಲೇ ತ್ರಿಷಾ ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎನ್ನಲಾಗಿದೆ. ಅಲ್ಲದೇ ತ್ರಿಷಾ ರಾಜಕೀಯ ಪ್ರವೇಶದ ಹಿಂದೆ ದಳಪತಿ ವಿಜಯ್ ಕೈವಾಡವಿದೆ ಎಂಬ ಸುದ್ದಿ ಕೂಡ ಕಾಲಿವುಡ್ ನಲ್ಲಿ ಕೇಳಿ ಬರುತ್ತಿದೆ. ತ್ರಿಷಾಗೆ ರಾಜಕೀಯಕ್ಕೆ ಬರುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನಲಾಗಿದೆ. ಮತ್ತು ಈ ಸುದ್ದಿಯಲ್ಲಿ ಸತ್ಯ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಇದನ್ನೂ ಓದಿ:ಪತಿ ಚಿರು ಸಾವಿನ ನಂತರದ ಜೀವನದ ಸತ್ಯ ಬಿಚ್ಚಿಟ್ಟ ಮೇಘನಾ ರಾಜ್ ಸರ್ಜಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News