Viral Video: ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು Tiger Shroff ಮಾಡಿರುವ ಈ ಸ್ಟಂಟ್ ತಪ್ಪದೆ ನೋಡಿ

Tiger Shroff Viral Video - ಬಾಲಿವುಡ್ ನ ಉದಯೋನ್ಮುಖ ಆಕ್ಷನ್ ಹಾಗೂ ಡ್ಯಾನ್ಸಿಂಗ್ ಕಿಂಗ್ ಟೈಗರ್ ಶ್ರಾಫ್ ಯಾವಾಗಲು ತಮ್ಮ ಹೊಸ-ಹೊಸ ಸ್ಟಂಟ್ ಗಳ ಮೂಲಕ ಅಭಿಮಾನಿಗಳನ್ನು ಆಶ್ಚರ್ಯಚಕಿತಗೊಳಿಸುತ್ತಲೇ ಇರುತ್ತಾರೆ. 

Written by - Nitin Tabib | Last Updated : Jan 27, 2021, 10:45 PM IST
  • ಟೈಗರ್ ಶ್ರಾಫ್ ಅವರ ಸ್ಟಂಟ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
  • ಈ ವಿಡಿಯೋಗೆ ಅಭಿಮಾನಿಗಳ ಜೊತೆಗೆ ಸೆಲಿಬ್ರಿಟಿಗಳು ಕೂಡ ಪ್ರತಿಕ್ರಿಯೆ ನೀಡುತ್ತಿದ್ದಾರೆ.
  • ಇದುವರೆಗೆ ಸುಮಾರು 14 ಲಕ್ಷಕ್ಕೂ ಅಧಿಕ ಬಾರಿ ಈ ವಿಡಿಯೋ ವೀಕ್ಷಣೆಗೆ ಒಳಗಾಗಿದೆ
Viral Video: ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು Tiger Shroff ಮಾಡಿರುವ ಈ ಸ್ಟಂಟ್ ತಪ್ಪದೆ ನೋಡಿ title=
Tiger Shroff Viral Video (Video Grab)

Tiger Shroff Viral Video - ನವದೆಹಲಿ: ಬಾಲಿವುಡ್ ನ ಉದಯೋನ್ಮುಖ ಆಕ್ಷನ್ ಹಾಗೂ ಡ್ಯಾನ್ಸಿಂಗ್ ಕಿಂಗ್ ಟೈಗರ್ ಶ್ರಾಫ್ ಯಾವಾಗಲು ತಮ್ಮ ಹೊಸ-ಹೊಸ ಸ್ಟಂಟ್ ಗಳ ಮೂಲಕ ಅಭಿಮಾನಿಗಳನ್ನು ಆಶ್ಚರ್ಯಚಕಿತಗೊಳಿಸುತ್ತಲೇ ಇರುತ್ತಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಟೈಗರ್ ಕೆಲವು ಸಾರಿ ಸ್ಟಂಟ್ ಗಳನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡರೆ ಕೆಲವೊಮ್ಮೆ ಡಾನ್ಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಟೈಗರ್ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು ತ್ರಿವರ್ಣ ಧ್ವಜ ಹಿಡಿದು ಗಾಳಿಯಲ್ಲಿ ತಮ್ಮ ಕಲೆ ಪ್ರದರ್ಶಿಸುತ್ತಿದ್ದಾರೆ. ಟೈಗರ್ ಅವರ ಈ ವಿಡಿಯೋಗೆ ಅಭಿಮಾನಿಗಳು ಭಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by Tiger Shroff (@tigerjackieshroff)

ಇದನ್ನು ಓದಿ- ಟೈಗರ್ ಶ್ರಾಫ್ ಸಹೋದರಿ ಕೃಷ್ಣ ಶ್ರಾಫ್ ಅವರ ಬಿಕಿನಿ ಅವತಾರದ VIDEO VIRAL

ತಮ್ಮ ಈ ವಿಡಿಯೋ ಅನ್ನು ಟೈಗರ್ ಶ್ರಾಫ್ (Tiger Shroff) ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡ ಅವರು "ಜೈ ಹಿಂದ್" ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಟೈಗರ್ ತಮ್ಮ ವಿಶಿಷ್ಟ ಶೈಲಿಯಲ್ಲಿ ತಮ್ಮ ಅಭಿಮಾನಿಗಳಿಗೆ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಷಯ ಕೋರಿದ್ದಾರೆ ಎಂದು ಈ ವಿಡಿಯೋ ಅನ್ನು ನೋಡಿದವರು ಹೇಳುತ್ತಿದ್ದಾರೆ. ಪ್ರಸ್ತುತ ಈ ವಿಡಿಯೋ 14 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೊಳಗಾಗಿದೆ. ಟೈಗರ್ ಅವರ ಈ ವಿಡಿಯೋ ಗೆ Wow ಹೇಳುವ ಮೂಲಕ ಶಿಲ್ಪಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಅಭಿಮಾನಿಗಳ ಜೊತೆಗೆ  ಸೆಲಿಬ್ರಿಟಿಗಳೂ ಕೂಡ ಟೈಗರ್ ಅವರ ಈ ವಿಡಿಯೋಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. 

ಇದನ್ನು ಓದಿ- VIDEO: ಬಿಡುಗಡೆಯಾಗುತ್ತಲೇ ಜಬರ್ದಸ್ತ್ ಹವಾ ಸೃಷ್ಟಿಸಿದೆ ಈ ಹಾಡು

ಟೈಗರ್ ಶ್ರಾಫ್ ಅವರ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಇತ್ತೀಚೆಗಷ್ಟೇ ಅವರ 'ಕ್ಯಾಸಿನೋವಾ' ಬಿಡುಗಡೆಯಾಗಿದೆ. ಅವರ ಈ ಮ್ಯೂಸಿಕ್ ವಿಡಿಯೋ ಪ್ರೇಕ್ಷಕರಿಂದ ಭಾರಿ ಪ್ರೀತಿ ಲಭಿಸಿದೆ. ಇನ್ನೊಂದೆಡೆ ಅವರ ಮುಂಬರುವ ಚಿತ್ರ 'ಗಣಪತ್' ಟೀಸರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಅವರು ನುಪುರ್ ಸನನ್ ಹಾಗೂ ನೋರಾ ಫತೇಹಿ ಜೊತೆಗೆ ರೋಮಾನ್ಸ್ ಮಾಡುವುದನ್ನು ನೀವು ನೋಡಬಹುದು ಎನ್ನಲಾಗುತ್ತಿದೆ. ಜೊತೆಗೆ ಇದರಲ್ಲಿ ಅವರು ಬಾಕ್ಸರ್ ಪಟುವಿನ ಪವರ್ ಫುಲ್ ಪಾತ್ರ ನಿರ್ವಹಿಸುತ್ತಿದ್ದಾರೆ.  ಈ ಚಿತ್ರವನ್ನು ಹೊರತುಪಡಿಸಿ ಟೈಗರ್ ಅವರು ಅಭಿನಯಿಸುತ್ತಿರುವ  'ಹಿರೋಪಂತಿ-2' ಹಾಗೂ 'ಬಾಗಿ-4' ಚಿತ್ರೀಕರಣ ಕೂಡ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ ಎನ್ನಲಾಗಿದೆ.

ಇದನ್ನು ಓದಿ-VIDEO:'BAAGHI 3' ಚಿತ್ರದ ಜಬರ್ದಸ್ತ್ ಟ್ರೈಲರ್ ಬಿಡುಗಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News