ವರುಣ್ ತೇಜ್ ಮತ್ತು ಲಾವಣ್ಯ ಆರತಕ್ಷತೆ ನಡೆಯುವ ಸ್ಥಳದ ಮಾಲೀಕರು ಈ ಸ್ಟಾರ್‌ ಹೀರೋ..!

Varun Tej and Lavanya reception: ಮೆಗಾ ಪ್ರಿನ್ಸ್ ವರುಣ್ ತೇಜ್ ಲಾವಣ್ಯ ತ್ರಿಪಾಠಿ ಅವರನ್ನು ವರಿಸಲಿರುವ ವಿಚಾರ ಗೊತ್ತೇ ಇದೆ. ಆದರೆ ಇದೀಗ ಅವರ ಆರತಕ್ಷತೆ ನಡೆಯುವ ಸ್ಥಳದ ಬಗ್ಗೆ ಕುತೂಹಲಕಾರಿ ಮಾಹಿತಿಯೊಂದು ಹೊರಬಿದ್ದಿದೆ. 

Written by - Savita M B | Last Updated : Oct 30, 2023, 05:12 PM IST
  • ಮೆಗಾ ಪ್ರಿನ್ಸ್ ವರುಣ್ ತೇಜ್ ಇನ್ನೇನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ
  • ಸದ್ಯ ಮೆಗಾ ಫ್ಯಾಮಿಲಿ ಮನೆಯಲ್ಲಿ ಗದ್ದಲ ಜೋರಾಗಿದೆ
  • ಅದ್ಧೂರಿ ಆರತಕ್ಷತೆ ನಡೆಯಲಿರುವ ಐಷಾರಾಮಿ ಕನ್ವೆನ್ಷನ್ ಸೆಂಟರ್ ಬಗ್ಗೆ ಕುತೂಹಲಕಾರಿ ಚರ್ಚೆ ನಡೆಯುತ್ತಿದೆ.
ವರುಣ್ ತೇಜ್ ಮತ್ತು ಲಾವಣ್ಯ ಆರತಕ್ಷತೆ ನಡೆಯುವ ಸ್ಥಳದ ಮಾಲೀಕರು ಈ ಸ್ಟಾರ್‌ ಹೀರೋ..!  title=

Varun Tej and Lavanya reception Place: ಮೆಗಾ ಪ್ರಿನ್ಸ್ ವರುಣ್ ತೇಜ್ ಇನ್ನೇನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಮೆಗಾ ಫ್ಯಾಮಿಲಿ ಮನೆಯಲ್ಲಿ ಗದ್ದಲ ಜೋರಾಗಿದೆ. ವರುಣ್ ಹಾಗೂ ಲಾವಣ್ಯ ಜೋಡಿ ಇದೇ ನವೆಂಬರ್‌ 1ರಂದು ಇಟಲಿಯಲ್ಲಿ ಕುಟುಂಬದವರ ಸಮ್ಮುಖದಲ್ಲಿ ಸಪ್ತಪದಿ ತುಳಿಯಲಿದ್ದಾರೆ. 

ವರುಣ್ ತೇಜ್ ಮತ್ತು ಲಾವಣ್ಯ ಮೊದಲ ಬಾರಿಗೆ ಇಟಲಿಯಲ್ಲಿ ಮಿಸ್ಟರ್ ಚಿತ್ರ ಶೂಟಿಂಗ್ ವೇಳೆ ಭೇಟಿಯಾಗಿದ್ದರು. ಅದಕ್ಕೇ ಅಲ್ಲಿಯೇ ಸೆಂಟಿಮೆಂಟ್ ಆಗಿ ಮದುವೆ ಸ್ಥಳವನ್ನೂ ಆಯ್ಕೆ ಮಾಡಿಕೊಳ್ಳಲಾಗಿದೆ. ಬ್ಯಾಚುಲರ್ ಪಾರ್ಟಿಗಳು ಈಗಾಗಲೇ ಮುಗಿದಿವೆ. 

ಇದನ್ನೂ ಓದಿ-Jawan: ಇನ್ನೆರಡು ದಿನಗಳಲ್ಲಿ ಒಟಿಟಿಗೆ ಶಾರುಕ್‌ ನ್ಯೂ ಸಿನಿಮಾ..!

ಅಕ್ಟೋಬರ್ 30ರಿಂದ ಕಾಕ್ ಟೈಲ್ ಪಾರ್ಟಿಯೊಂದಿಗೆ ಮದುವೆ ಸಂಭ್ರಮ ಆರಂಭವಾಗಿದ್ದು, ಅಕ್ಟೋಬರ್ 31 ರಂದು ಹಲ್ದಿ ಮೆಹಂದಿ ಆಚರಣೆ ನಡೆಯಲಿದೆ. ಸದ್ಯ ವರುಣ್ ತೇಜ್ ಮತ್ತು ಲಾವಣ್ಯ ಅವರ ಕುಟುಂಬಗಳು ಪವನ್ ಕಲ್ಯಾಣ್, ಚಿರಂಜೀವಿ ಮತ್ತು ರಾಮ್‌ ಚರಣ್ ಅವರ ಇಡೀ ಮೆಗಾ ಫ್ಯಾಮಿಲಿ ಇಟಲಿಯಲ್ಲಿದೆ. 

ಇದನ್ನೂ ಓದಿ-ಮೃಣಾಲ್ ಠಾಕೂರ್ ಮದುವೆ..! ಸೀತಾ ಮಹಾಲಕ್ಷ್ಮೀಯ್ನನು ವರಿಸುವ ವರ ಯಾರು ಗೊತ್ತಾ?

ಇದೇ ವೇಳೆ ವರುಣ್ ಮತ್ತು ಲಾವಣ್ಯ ಅವರ ಆರತಕ್ಷತೆ ನವೆಂಬರ್ 5 ರಂದು ಹೈದರಾಬಾದ್ ನ ಮಾದಾಪುರದಲ್ಲಿರುವ ಎನ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ. ಈ ಆರತಕ್ಷತೆಗೆ ತೆಲುಗು ರಾಜ್ಯಗಳಿಂದ ಸುಮಾರು 3 ಸಾವಿರ ಅತಿಥಿಗಳನ್ನು ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ. 

ಈ ಅದ್ಧೂರಿ ಆರತಕ್ಷತೆ ನಡೆಯಲಿರುವ ಐಷಾರಾಮಿ ಕನ್ವೆನ್ಷನ್ ಸೆಂಟರ್ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲಕಾರಿ ಚರ್ಚೆ ನಡೆಯುತ್ತಿದೆ. ಏಕೆಂದರೆ ಎನ್ ಕನ್ವೆನ್ಷನ್ ಸೆಂಟರ್ ಮಾಲೀಕರು ದೊಡ್ಡ ಹೀರೋ. ಅದರ ಮಾಲೀಕ ಸ್ಟಾರ್ ಹೀರೋ ಅಕ್ಕಿನೇನಿ ನಾಗಾರ್ಜುನ ಅಲ್ಲ ಎನ್ನಲಾಗುತ್ತಿದೆ. ನಾಗಾರ್ಜುನ ಅವರು ಪ್ರಮುಖ ಉದ್ಯಮಿ ನಲ್ಲ ಪ್ರೀತಂ ರೆಡ್ಡಿ ಅವರ ಪಾಲುದಾರಿಕೆಯಲ್ಲಿ ಎನ್ ಕನ್ವೆನ್ಷನ್ ಸೆಂಟರ್ ಮಾಲೀಕರಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News