Actresses Miscarriage: ಶಿಲ್ಪಾ ಶೆಟ್ಟಿ ಟು ಕಾಜೋಲ್‌.. ಮಗು ಕಳೆದುಕೊಂಡು ನೋವುಂಡ ನಟಿಯರು ಇವರು.!

Actresses Miscarriage: ತಾಯಿಗೆ ತನ್ನ ಮಗುವನ್ನು ಕಳೆದುಕೊಂಡ ದುಃಖಕ್ಕಿಂತ ದೊಡ್ಡ ದುಃಖ ಮತ್ತೊಂದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ನೋವನ್ನು ಅನುಭವಿಸಿದ ನಟಿಯರ ಬಗ್ಗೆ ಇಂದು ತಿಳಿಯೋಣ. 

Written by - Chetana Devarmani | Last Updated : Oct 12, 2022, 06:18 PM IST
  • ಪ್ರತಿಯೊಬ್ಬ ಮಹಿಳೆ ಮಗುವಿನ ಸಂತೋಷವನ್ನು ಬಯಸುತ್ತಾಳೆ
  • ತಾಯಿಗೆ ತನ್ನ ಮಗುವನ್ನು ಕಳೆದುಕೊಂಡ ದುಃಖಕ್ಕಿಂತ ದೊಡ್ಡ ದುಃಖ ಮತ್ತೊಂದಿಲ್ಲ
  • ಮಗು ಕಳೆದುಕೊಂಡು ನೋವುಂಡ ನಟಿಯರು ಇವರು
Actresses Miscarriage: ಶಿಲ್ಪಾ ಶೆಟ್ಟಿ ಟು ಕಾಜೋಲ್‌.. ಮಗು ಕಳೆದುಕೊಂಡು ನೋವುಂಡ ನಟಿಯರು ಇವರು.!  title=
ನಟಿಯರು

Actresses Miscarriage: ಪ್ರತಿಯೊಬ್ಬ ಮಹಿಳೆ ಮಗುವಿನ ಸಂತೋಷವನ್ನು ಬಯಸುತ್ತಾಳೆ. ಮಕ್ಕಳ ಲಾಲನೆ ಪಾಲನೆಯೇ ಮಹಿಳೆಯರಿಗೆ ಒಂಥರಾ ಆನಂದ ನೀಡುತ್ತದೆ. ಗರ್ಭಿಣಿಯಾದಾಗ ನೂರಾರು ಕನಸುಗಳನ್ನು ಕಂಡಿರುತ್ತಾರೆ. ಆದರೆ ಅಪ್ಪಿತಪ್ಪಿ ಗರ್ಭಪಾತವಾದರೆ ಅವರು ಡೆಪ್ರೆಷನ್‌ಗೆ ಹೋಗಬಹುದು. ಈ ಬಾಲಿವುಡ್‌ ತಾರೆಯರು ಸಹ ಗರ್ಭಪಾತದಿಂದ ನರಕಯಾತನೆ ಅನುಭವಿಸದವರ ಸಾಲಿಗೆ ಸೇರುತ್ತಾರೆ. ತಾಯಿಗೆ ತನ್ನ ಮಗುವನ್ನು ಕಳೆದುಕೊಂಡ ದುಃಖಕ್ಕಿಂತ ದೊಡ್ಡ ದುಃಖ ಮತ್ತೊಂದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ನೋವನ್ನು ಅನುಭವಿಸಿದ ನಟಿಯರ ಬಗ್ಗೆ ಇಂದು ತಿಳಿಯೋಣ. 

ಇದನ್ನೂ ಓದಿ : Viral Video : ಹಿಜಾಬ್‌ ವಿರೋಧಿಸಿ ಕ್ಯಾಮೆರಾದೆದುರೇ ಬೆತ್ತಲಾದ ಖ್ಯಾತ ನಟಿ!

ಶಿಲ್ಪಾ ಶೆಟ್ಟಿ ಕುಂದ್ರಾ 2 ಮಕ್ಕಳ ತಾಯಿ. ಮಗ ವಿವಾನ್ ಜನಿಸಿದ ನಂತರ, ಶಿಲ್ಪಾ ಎರಡನೇ ಮಗುವಿಗೆ ಯೋಜಿಸಿದ್ದರು. ಆಗ ಅನೇಕ ಬಾರಿ ಅವರು ಗರ್ಭಪಾತಕ್ಕೆ ಒಳಗಾದರು. ಇದಾದ ನಂತರ ಶಿಲ್ಪಾ ಬಾಡಿಗೆ ತಾಯ್ತನದ ಮೂಲಕ ಎರಡನೇ ಮಗುವನ್ನು ಪಡೆದರು. 

ಖ್ಯಾತ ನಟಿ ಕಾಜೋಲ್ ಅವರು ತಮ್ಮ ಸಂದರ್ಶನವೊಂದರಲ್ಲಿ ತನಗೆ 2 ಬಾರಿ ಗರ್ಭಪಾತವಾಗಿದೆ ಎಂದು ಬಹಿರಂಗಪಡಿಸಿದ್ದರು. ಕಭಿ ಖುಷಿ ಕಭಿ ಗಮ್ ಚಿತ್ರದ ಶೂಟಿಂಗ್ ವೇಳೆ ನಟಿ ತಾನು ಗರ್ಭಿಣಿ ಎಂದು ಹೇಳಿದ್ದರು. ಆಗ ತನಗೆ ಗರ್ಭಪಾತವಾಗಿದೆ ಎಂದು ನಟಿ ಹೇಳಿದರು. ಇದಾದ ಬಳಿಕವೂ ಕಾಜೋಲ್‌ಗೆ ಮತ್ತೆ ಗರ್ಭಪಾತವಾಗಿದೆ. ಆದರೆ ಅದರ ನಂತರ ಅವರು ಮಗಳು ನ್ಯಾಸಾ ಮತ್ತು ಮಗ ಯುಗ್ ಅವರ ತಾಯಿಯಾದರು.

ಶಾರುಖ್ ಖಾನ್ ಮತ್ತು ಗೌರಿ ಖಾನ್ ಮೂರು ಮಕ್ಕಳ ಪೋಷಕರು. ಮಾಧ್ಯಮ ವರದಿಗಳ ಪ್ರಕಾರ, ಮಗ ಆರ್ಯನ್ ಖಾನ್ ಹುಟ್ಟುವ ಮೊದಲು ಗೌರಿ ಗರ್ಭಪಾತದ ನೋವನ್ನು ಸಹ ಅನುಭವಿಸಬೇಕಾಗಿತ್ತು. ಬಾಲಿವುಡ್ ನಟಿ ಗೀತಾ ಬಸ್ರಾ ಮತ್ತು ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಎರಡನೇ ಮಗು ಜನಿಸುವ ಮುನ್ನ ಗೀತಾ ಬಸ್ರಾ ಅವರಿಗೆ ಎರಡು ಬಾರಿ ಗರ್ಭಪಾತವಾಗಿತ್ತು.

ಇದನ್ನೂ ಓದಿ : ಬಿಗ್‌ಬಾಸ್‌ನಲ್ಲಿ ನೋಣಗಳ ಗಣಗಣ : ಫನ್ನಿಯಾಗಿತ್ತು ಟಂಗ್ ಟ್ವಿಸ್ಟಿಂಗ್ ಟಾಸ್ಕ್

ಕಿರುತೆರೆ ನಟ ಕರಣ್ ಪಟೇಲ್ ಅವರ ಪತ್ನಿ ಅಂಕಿತಾ ಕೂಡ ಗರ್ಭಪಾತದ ನೋವನ್ನು ಉಂಡಿದ್ದಾರೆ. ಅವಳು 2018 ರಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಲಿದ್ದರು. ಆದರೆ ಅಂಕಿತಾಗೆ ಗರ್ಭಪಾತವಾದ ಕಾರಣ ಇದು ಸಾಧ್ಯವಾಗಲಿಲ್ಲ. ಶಾರುಖ್ ಖಾನ್ ಜೊತೆ 'ಪರ್ದೇಸ್' ಚಿತ್ರದಲ್ಲಿ ಕೆಲಸ ಮಾಡಿದ್ದ ನಟಿ ಮಹಿಮಾ ಚೌಧರಿ ಅವರು ಸಂದರ್ಶನವೊಂದರಲ್ಲಿ ತಮ್ಮ ವೈವಾಹಿಕ ಜೀವನದಲ್ಲಿ ಹಲವು ಸಮಸ್ಯೆಗಳಿಂದಾಗಿ ಎರಡು ಗರ್ಭಪಾತಗಳಾಗಿವೆ ಎಂದು ಹೇಳಿದ್ದರು. ಆದರೆ, ಮಹಿಮಾ ಮೂರನೇ ಬಾರಿಗೆ ತಾಯಿಯಾದರು. 

ಹಾಸ್ಯನಟ ಕೃಷ್ಣ ಅಭಿಷೇಕ್ ಮತ್ತು ಅವರ ಪತ್ನಿ ಕಾಶ್ಮೇರಾ ಶಾ ಅವರು 2017 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳಿಗೆ ಪೋಷಕರಾದರು. ಆದರೆ ಹಲವು ವರ್ಷಗಳಿಂದ ಗರ್ಭ ಧರಿಸಲು ಸಾಧ್ಯವಾಗಿರಲಿಲ್ಲ. ನಂತರ ಕಾಶ್ಮೇರಾ ಸ್ವಾಭಾವಿಕವಾಗಿ ಗರ್ಭಿಣಿಯಾಗದಿದ್ದಾಗ, ಅವರು ಐವಿಎಫ್ ಅನ್ನು ಆಶ್ರಯಿಸಿದರು. ಕಾಶ್ಮೇರಾ ಅವರು 14 ಬಾರಿ ಗರ್ಭಿಣಿಯಾಗಲು ವಿಫಲರಾಗಿದ್ದರು ಮತ್ತು ಗರ್ಭಪಾತವಾಗಿದೆ ಎಂದು ಬಹಿರಂಗಪಡಿಸಿದರು. ಇದರಿಂದಾಗಿ ಕಾಶ್ಮೇರಾ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರತೊಡಗಿತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News