Pregnant Before Marriage: ಮದುವೆಗೂ ಮುನ್ನ ಗರ್ಭಿಣಿಯರಾದ ಬಾಲಿವುಡ್ ಖ್ಯಾತ ನಟಿಯರು: ಹೇಗೆ ಸಾಧ್ಯ?

Pregnant Before Marriage: ಪ್ರಸ್ತುತ ಕಾಲದ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ 14 ಏಪ್ರಿಲ್ 2022 ರಂದು ವಿವಾಹವಾದರು. ಮದುವೆಯಾದ ಎರಡು ತಿಂಗಳ ನಂತರ ನಟಿ ಸ್ವತಃ ಅವರು ಶೀಘ್ರದಲ್ಲೇ ಪೋಷಕರಾಗುತ್ತಿದ್ದಾರೆ ಎಂದು ದೃಢಪಡಿಸಿದರು.

Written by - Bhavishya Shetty | Last Updated : Jan 23, 2023, 01:48 PM IST
    • ಮದುವೆಗೂ ಮುನ್ನವೇ ಗರ್ಭಿಣಿಯರಾದ ಖ್ಯಾತ ಬಾಲಿವುಡ್ ನಟಿಯರು
    • ಬಾಲಿವುಡ್ ನಟ ನಟಿಯರು ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
    • ಅವರ ಫ್ಯಾಷನ್ ಮತ್ತು ಜೀವನಶೈಲಿಗಾಗಿ ಪ್ರಸಿದ್ಧಿ ಪಡೆದಿದ್ದಾರೆ
Pregnant Before Marriage: ಮದುವೆಗೂ ಮುನ್ನ ಗರ್ಭಿಣಿಯರಾದ ಬಾಲಿವುಡ್ ಖ್ಯಾತ ನಟಿಯರು: ಹೇಗೆ ಸಾಧ್ಯ?   title=
pregnant before marriage

Pregnant Before Marriage: ಮದುವೆಗೂ ಮುನ್ನವೇ ಗರ್ಭಿಣಿಯರಾದ ಖ್ಯಾತ ಬಾಲಿವುಡ್ ನಟಿಯರ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ. ಅವರಲ್ಲಿ ಕೆಲವರು ಸಖತ್ ಫೇಮಸ್ ನಟಿಯರು. ಬಾಲಿವುಡ್ ನಟ ನಟಿಯರು ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಫ್ಯಾಷನ್ ಮತ್ತು ಜೀವನಶೈಲಿಗಾಗಿ ಪ್ರಸಿದ್ಧಿ ಪಡೆದಿದ್ದಾರೆ. ಇನ್ನು ಇವರಲ್ಲಿ ಕೆಲವರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಾರೆ.

ಇದನ್ನೂ ಓದಿ: Singer Mangli: "ನನ್ನ ಮೇಲೆ ಯಾವುದೇ ದಾಳಿ ನಡೆದಿಲ್ಲ.." ಮಂಗ್ಲಿ ಬಿಚ್ಚಿಟ್ರು ಅಸಲಿ ವಿಚಾರ.!

ಪ್ರಸ್ತುತ ಕಾಲದ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ 14 ಏಪ್ರಿಲ್ 2022 ರಂದು ವಿವಾಹವಾದರು. ಮದುವೆಯಾದ ಎರಡು ತಿಂಗಳ ನಂತರ ನಟಿ ಸ್ವತಃ ಅವರು ಶೀಘ್ರದಲ್ಲೇ ಪೋಷಕರಾಗುತ್ತಿದ್ದಾರೆ ಎಂದು ದೃಢಪಡಿಸಿದರು.

ಶ್ರೀದೇವಿ ಬಾಲಿವುಡ್‌ನ 1980 ರ ಯುಗದ ಸೌಂದರ್ಯವತಿ. ಆ ಕಾಲದಲ್ಲಿ ಇಡೀ ಇಂಡಸ್ಟ್ರೀಯನ್ನೇ ಆಳಿದವರು. ಮೊದಲು ಹಿರಿಯ ನಟ ಮಿಥುನ್ ಚಕ್ರವರ್ತಿ ಅವರನ್ನು 1985 ರಲ್ಲಿ ವಿವಾಹವಾದ ಅವರು, 1988 ರಲ್ಲಿ ವಿಚ್ಛೇದನ ನೀಡಿದರು. ಇದಾದ ಬಳಿಕ ಶ್ರೀದೇವಿ ಭಾರತೀಯ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಜೊತೆ ಸಂಬಂಧ ಬೆಳಸಿಕೊಂಡು, ಮದುವೆಗೂ ಮುಂಚೆಯೇ ಗರ್ಭಿಣಿಯಾದರು. ಹೀಗಾಗಿ 1996 ರಲ್ಲಿ ವಿವಾಹವಾದರು.

ರಾಷ್ಟ್ರಪ್ರಶಸ್ತಿ ವಿಜೇತೆ ಕೊಂಕಣ ಸೇನ್ ಶರ್ಮಾ ಅವರು ಅತ್ಯುತ್ತಮ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ, ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್ (2002), ಓಂಕಾರ (2006), ವೇಕ್ ಅಪ್ ಸಿದ್ (2009) ಚಿತ್ರಗಳಲ್ಲಿ ಅವರ ಕೆಲಸಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ. ನಟಿ ಮದುವೆಯ ಮೊದಲು ನಟ ರಣವೀರ್ ಶೋರೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಬಳಿಕ 2010 ರಲ್ಲಿ ವಿವಾಹವಾದರು. ಕೆಲವು ತಿಂಗಳ ನಂತರ ಅವರು ತಮಗೆ ಹೆಣ್ಣುಮಗು ಜನಿಸಿದೆ ಎಂದು ಘೋಷಿಸಿದರು.

ಇತಿಹಾಸದ ಲೆಜೆಂಡರಿ ಕ್ರಿಕೆಟಿಗ ವಿವ್ ರಿಚರ್ಡ್ಸ್ ಮತ್ತು ನೀನಾ ಗುಪ್ತಾ 1980 ರಲ್ಲಿ ತಮ್ಮ ಸಂಬಂಧದಿಂದಲೇ ಮುನ್ನೆಲೆಗೆ ಬಂದವರು. ಇವರಿಗೆಬ್ಬರಿಗೆ ಮಸಾಬಾ ಗುಪ್ತಾ ಎಂಬ ಹೆಣ್ಣುಮಗು ಜನಿಸಿತು. ವಿವ್ ರಿಚರ್ಡ್ಸ್ ಅದಾಗಲೇ ಮದುವೆಯಾಗಿದ್ದರು. ಆದ್ದರಿಂದ ಅವರು ಪ್ರತ್ಯೇಕವಾಗಿರಲು ನಿರ್ಧರಿಸಿದರು. ನೀನಾ ಗುಪ್ತಾ ಈಗ ಉದ್ಯಮಿ ವಿವೇಕ್ ಮೆಹ್ರಾ ಅವರನ್ನು ವಿವಾಹವಾಗಿದ್ದಾರೆ. ನಟಿ ಹಲವಾರು ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿನ ಪಾತ್ರಗಳಿಗೆ ಬಹಳ ಹೆಸರುವಾಸಿಯಾಗಿದ್ದಾರೆ.

ನಟಿ ಸಾರಿಕ, ಇಂದಿನ ಮೆಗಾಸ್ಟಾರ್ ಕಮಲ್ ಹಾಸನ್ ಅವರೊಂದಿಗೆ ಸಂಬಂಧ ಹೊಂದಿದ್ದರು, ಬಳಿಕ 1988 ರಲ್ಲಿ ವಿವಾಹವಾದರು. ಈ ದಂಪತಿಯ ಮಗಳೇ ಶ್ರುತಿ ಹಾಸನ್. ಮದುವೆಗೂ ಮುನ್ನ ಶ್ರುತಿ ಜನಿಸಿದ್ದರು. ಮತ್ತೊಬ್ಬ ಮಗಳು ಅಕ್ಷರಾ ಹಾಸನ್. ಈಕೆ ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೂ ಪಾದಾರ್ಪಣೆ ಮಾಡಿದ್ದಾರೆ. ಕಮಲ್ ಹಾಸನ್ ಮತ್ತು ಸಾರಿಕಾ ಈಗ 2004 ರಿಂದ ಬೇರ್ಪಟ್ಟಿದ್ದಾರೆ.

ಇದನ್ನೂ ಓದಿ: Alia Bhatt Fact Check: ಮತ್ತೆ ಗರ್ಭಿಣಿಯಾದ್ರಾ ಆಲಿಯಾ ಭಟ್‌? ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್‌‌ ಕಪಲ್!

ಸರ್ಬಿಯಾ ಮೂಲದ ಬಾಲಿವುಡ್ ನಟಿ ನತಾಶಾ ಅವರು ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರನ್ನು 1 ಜನವರಿ 2020 ರಂದು ವಿವಾಹವಾದರು. ಜುಲೈ 29 ರಂದು ಮಗನಿಗೆ ಜನ್ಮ ನೀಡಿದರು. ಇನ್ನು ಮದುವೆಗೂ ಮುಂಚೆಯೇ ನತಾಶಾ  ಗರ್ಭಿಣಿಯಾಗಿದ್ದರು ಎಂಬುದು ಬಹಿರಂಗಪಡಿಸಲಾಗಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News