The Kerala Story On OTT: ಒಟಿಟಿಗೆ ಲಗ್ಗೆಯಿಟ್ಟ ದಿ ಕೇರಳ ಸ್ಟೋರಿ.. ಎಲ್ಲಿ ಯಾವಾಗ ಸ್ಟ್ರೀಮಿಂಗ್‌?

The Kerala Story On OTT: ಬಹಳ ಸಮಯದಿಂದ ಕಾಯುತ್ತಿದ್ದ ದಿ ಕೇರಳ ಸ್ಟೋರಿ ಕೊನೆಗೂ ಒಟಿಟಿಗೆ ಲಗ್ಗೆಯಿಟ್ಟಿದೆ. ಅದಾ ಶರ್ಮಾ ಅಭಿನಯದ ಚಿತ್ರ 'ದಿ ಕೇರಳ ಸ್ಟೋರಿ' OTT ಬಿಡುಗಡೆ ದಿನಾಂಕ ಬಹಿರಂಗವಾಗಿದೆ.  

Written by - Chetana Devarmani | Last Updated : Feb 7, 2024, 07:37 AM IST
  • ದಿ ಕೇರಳ ಸ್ಟೋರಿ ಒಟಿಟಿ ರಿಲೀಸ್‌
  • ದಿ ಕೇರಳ ಸ್ಟೋರಿ ಒಟಿಟಿ ರಿಲೀಸ್‌ ಡೇಟ್‌ ಫಿಕ್ಸ್‌
  • ಅದಾ ಶರ್ಮಾ ಅಭಿನಯದ ಚಿತ್ರ
The Kerala Story On OTT: ಒಟಿಟಿಗೆ ಲಗ್ಗೆಯಿಟ್ಟ ದಿ ಕೇರಳ ಸ್ಟೋರಿ.. ಎಲ್ಲಿ ಯಾವಾಗ ಸ್ಟ್ರೀಮಿಂಗ್‌? title=
ದಿ ಕೇರಳ ಸ್ಟೋರಿ

The Kerala Story OTT Release: ನಟಿ ಅದಾ ಶರ್ಮಾ ಅವರ ಅಭಿಮಾನಿಗಳು ಬಹಳ ಸಮಯದಿಂದ ದಿ ಕೇರಳ ಸ್ಟೋರಿ ಒಟಿಟಿ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದೀಗ ಆ ಸಮಯ ಬಂದೆ ಬಿಟ್ಟಿದೆ. ಶೀಘ್ರದಲ್ಲೇ ದಿ ಕೇರಳ ಸ್ಟೋರಿ ಒಟಿಟಿನಲ್ಲಿ ರಿಲೀಸ್‌ ಆಗಲಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಯಾವುದೇ ಚಿತ್ರವು ಎರಡು ತಿಂಗಳೊಳಗೆ OTT ನಲ್ಲಿ ಬಿಡುಗಡೆಯಾಗುತ್ತದೆ. ಆದರೆ ಅದಾ ಶರ್ಮಾ ಅವರ ದಿ ಕೇರಳ ಸ್ಟೋರಿ ಚಿತ್ರ ಬಿಡುಗಡೆಯಾಗಿ 10 ತಿಂಗಳುಗಳಾಗಿದ್ದರೂ, OTT ನಲ್ಲಿ ಬಿಡುಗಡೆಯಾಗಿರಲಿಲ್ಲ. 

ವರದಿಯ ಪ್ರಕಾರ, ವಿವಾದಗಳಲ್ಲಿ ಸಿಲುಕಿರುವ ಕಾರಣ ಚಿತ್ರವು ದೀರ್ಘಕಾಲದವರೆಗೆ ಯಾವುದೇ OTT ಖರೀದಿ ಆಗಲಿಲ್ಲ. ಚಿತ್ರದಲ್ಲಿ ಸೂಕ್ಷ್ಮವಾದ ಸಮಸ್ಯೆಯ ಬಗ್ಗೆ ಹೇಳಲಾಗಿದೆ. ಈ ಹಿನ್ನೆಲೆ ದಿ ಕೇರಳ ಸ್ಟೋರಿ ತಡವಾಗಿ ಒಟಿಟಿ ರಿಲೀಸ್‌ ಆಗುತ್ತಿದೆ. 

ಇದನ್ನೂ ಓದಿ: Bollywood Actress: ಹುಕ್ಕಾ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಈ ನಟಿ ಇಂದು ಕೋಟಿ ಕೋಟಿ ಒಡತಿ! 

ದಿ ಕೇರಳ ಸ್ಟೋರಿ ಸಿನಿಮಾ ಶೀಘ್ರದಲ್ಲೇ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ. ಅದಾ ಶರ್ಮಾ ಅವರ ಈ ಚಿತ್ರವು ಫೆಬ್ರವರಿ 16 ರಂದು OTT ಪ್ಲಾಟ್‌ಫಾರ್ಮ್ ZEE5 ನಲ್ಲಿ ಬಿಡುಗಡೆಯಾಗಲಿದೆ. ಇದಕ್ಕಾಗಿ ZEE5 ಅಧಿಕೃತ ಪ್ರಕಟಣೆಯನ್ನು ಸಹ ಹೊರಡಿಸಿದೆ. 

ದಿ ಕೇರಳ ಸ್ಟೋರಿ ಟ್ರೇಲರ್ ZEE5 ನಲ್ಲಿ ರಿಲೀಸ್‌ ಆಗಿದೆ. ಇದೇ ಫೆಬ್ರವರಿ 16 ರಂದು ದಿ ಕೇರಳ ಸ್ಟೋರಿ ZEE5 ನಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿದುಬಂದಿದೆ. ಚಿತ್ರದ ಟ್ರೇಲರ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬಿಡುಗಡೆ ಮಾಡುವ ಮೂಲಕ ಅದಾ ಶರ್ಮಾ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ವಿಪುಲ್ ಅಮೃತ್‌ಲಾಲ್ ಷಾ ನಿರ್ದೇಶನದ ಈ ಚಿತ್ರವು ಕೇವಲ 30 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದು, ವಿಶ್ವದಾದ್ಯಂತ 303.97 ಕೋಟಿ ಗಳಿಸಿದೆ.

ಇದನ್ನೂ ಓದಿ: Fake Death News: ಪೂನಂ ಪಾಂಡೆ ಅಂತೆಯೇ ಈ ಸ್ಟಾರ್‌ ನಟಿಯ ಸಾವಿನ ಸುದ್ದಿ ಹಬ್ಬಿತ್ತು.! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News