Isha Koppikar: 14 ವರ್ಷದ ದಾಂಪತ್ಯಕ್ಕೆ ಫುಲ್‌ ಸ್ಟಾಪ್‌.. ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ಸೂರ್ಯವಂಶ ನಟಿ.!

Isha Koppikar Divorce News: ಉದ್ಯಮಿಯನ್ನು ಮದುವೆಯಾದ ಸೂರ್ಯವಂಶ ಚಿತ್ರದ ನಟಿ ತನ್ನ 14 ವರ್ಷಗಳ ದಾಂಪತ್ಯವನ್ನು ಮುರಿದುಕೊಂಡು.. ಗಂಡನಿಂದ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ..  

Written by - Savita M B | Last Updated : Dec 30, 2023, 03:53 PM IST
  • ಇತ್ತೀಚೆಗೆ ಸಿನಿರಂಗದಲ್ಲಿ ಸಾಲು ಸಾಲು ವಿಚ್ಛೇದನ ಸುದ್ದಿಗಳು ಹರಿದಾಡುತ್ತಿವೆ
  • ಇದೀಗ ನಟಿ ಇಶಾ ಕೊಪ್ಪಿಕರ್ ತನ್ನ ಪತಿ ಟಿಮ್ಮಿ ನಾರಂಗ್‌ನಿಂದ ಬೇರ್ಪಟ್ಟಿದ್ದಾರೆ ಎನ್ನಲಾಗುತ್ತಿದೆ
  • ಪ್ರೀತಿಸಿ ವಿವಾಹವಾದ ನಟಿ ಭಾವನಾತ್ಮಕ ಸಮಸ್ಯೆಗಳಿಂದ ಪತಿಯಿಂದ ಬೇರ್ಪಟ್ಟಿದ್ದಾರೆ ಎನ್ನಲಾಗುತ್ತಿದೆ..
Isha Koppikar: 14 ವರ್ಷದ ದಾಂಪತ್ಯಕ್ಕೆ ಫುಲ್‌ ಸ್ಟಾಪ್‌.. ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ಸೂರ್ಯವಂಶ  ನಟಿ.! title=

Isha Koppikar: ಇತ್ತೀಚೆಗೆ ಸಿನಿರಂಗದಲ್ಲಿ ಸಾಲು ಸಾಲು ವಿಚ್ಛೇದನ ಸುದ್ದಿಗಳು ಹರಿದಾಡುತ್ತಿದ್ದು.. ಇದೀಗ ನಟಿ ಇಶಾ ಕೊಪ್ಪಿಕರ್ ತನ್ನ ಪತಿ ಟಿಮ್ಮಿ ನಾರಂಗ್‌ನಿಂದ ಬೇರ್ಪಟ್ಟಿದ್ದಾರೆ ಎನ್ನಲಾಗುತ್ತಿದೆ.. ಹಾಗಾದರೆ ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎನ್ನುವದನ್ನು ಇದೀಗ ತಿಳಿಯೋಣ..

ಕನ್ನಡದ ಸೂರ್ಯವಂಶ ಸಿನಿಮಾವನ್ನು ಎಂದಿಗೂ ಮರೆಯಲಾಗದು.. ಈ ಸಿನಿಮಾದಲ್ಲಿ ನಟಿಸಿದ ನಟಿ ಇಶಾ ಕೊಪ್ಪಿಕರ್ ಅವರನ್ನೂ ಮರೆಯಲು ಸಾಧ್ಯವಿಲ್ಲ. ಹಿಂದಿ, ತಮಿಳು, ತೆಲುಗು, ಕನ್ನಡ, ಮರಾಠಿ ಚಿತ್ರಗಳಲ್ಲಿ ನಟಿಸಿರುವ ಈ ನಟಿ ಇತ್ತೀಚೆಗೆ ವಿಚ್ಛೇದನದ ಸುದ್ದಿಯಿಂದ ಮುನ್ನೆಲೆಗೆ ಬಂದಿದ್ದಾರೆ.. 2009 ರಲ್ಲಿ, ಖ್ಯಾತ ಉದ್ಯಮಿ ಟಿಮ್ಮಿ ನಾರಂಗ್ ಅವರನ್ನು ಪ್ರೀತಿಸಿ ವಿವಾಹವಾದ ನಟಿ ಭಾವನಾತ್ಮಕ ಸಮಸ್ಯೆಗಳಿಂದ ಪತಿಯಿಂದ ಬೇರ್ಪಟ್ಟಿದ್ದಾರೆ ಎನ್ನಲಾಗುತ್ತಿದೆ.. 

ಇದನ್ನೂ ಓದಿ-Salaar: ಶೀಘ್ರದಲ್ಲೇ OTT ವೇದಿಕೆಗೆ ಎಂಟ್ರಿ ಕೊಡಲಿರುವ ಸಲಾರ್..!‌ ಯಾವಾಗ ಗೊತ್ತಾ?

ಇಶಾ ಕೊಪ್ಪಿಕರ್ ಮತ್ತು ಟಿಮ್ಮಿ ನಾರಂಗ್ ದಂಪತಿಗೆ ರಿಯಾನಾ (9) ಎಂಬ ಮಗಳಿದ್ದಾಳೆ. ಇಶಾ ಹಾಗೂ ಟಿಮ್ಮಿ ನಾರಂಗ್ ನಡುವೆ ಕೆಲ ದಿನಗಳಿಂದ ಜಗಳ ನಡೆಯುತ್ತಿದ್ದು, ಸಂಬಂಧ ಉಳಿಸಲು ಯತ್ನಿಸಿದರೂ ರಾಜಿಯಾಗದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ-Seetha Raama : ಸೀತಾ ಪಾಲಿಗೆ ರಾಮನೇ ಶ್ರೀರಕ್ಷೆ.. ರುದ್ರಪ್ರತಾಪ್‌ ಜೊತೆ ಮುರಿದು ಬಿತ್ತು ಮದುವೆ!

2009 ರಲ್ಲಿ, ಜಿಮ್‌ನಲ್ಲಿ ಭೇಟಿಯಾದ ನಂತರ ಇಶಾ ಮತ್ತು ಟಿಮ್ಮಿ ನಾರಂಗ್ ಪ್ರೀತಿಸುತ್ತಿದ್ದರು. ಆ ನಂತರ ಅವರು ಮದುವೆಯಾದರು. ಮುಂಬೈನಲ್ಲಿ ಹುಟ್ಟಿ ಬೆಳೆದ ಇಶಾ ಮೊದಲು ಮಾಡೆಲ್ ಆಗಿ ಹಲವು ಜಾಹೀರಾತುಗಳಲ್ಲಿ ನಟಿಸಿದ್ದರು. 1995 ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮಿಸ್ ಟ್ಯಾಲೆಂಟ್ ಕಿರೀಟವನ್ನು ಗೆದ್ದರು. 

ಇಶಾ 2000 ರಲ್ಲಿ ಹೃತಿಕ್ ರೋಷನ್ ಅಭಿನಯದ ಫಿಜಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.. ಆ ಸಮಯದಲ್ಲಿ ಇಶಾ ದಿವಂಗತ ನಟ ಇಂದರ್ ಕುಮಾರ್ ಅವರನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ... ಅದರ ನಂತರ ಇಶಾ ಟಿಮ್ಮಿ ನಾರಂಗ್ ಅವರನ್ನು ವಿವಾಹವಾದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News