Darshan: ಬಾಕ್ಸ್‌ಆಫೀಸ್‌ ಸುಲ್ತಾನನ ಜನ್ಮದಿನಕ್ಕೆ ಕಾಟೇರ ಥೀಮ್‌ನಲ್ಲಿ ಇಂಟ್ರೆಸ್ಟಿಂಗ್ ಸಿಡಿಪಿ!

Darshan CDP: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹುಟ್ಟುಹಬ್ಬಕ್ಕೆ ಇನ್ನೊಂದು ದಿನ ಮಾತ್ರ ಬಾಕಿಯಿರುವಾಗ, ಅಭಿಮಾನಿಯೊಬ್ನಬರು ಕಾಟೇರ ಚಿತ್ರದ ಥೀಮ್‌ನಲ್ಲಿ ಸ್ಪೆಷಲ್‌ ಸಿಡಿಪಿಯನ್ನು ಸಿದ್ದಪಡಿಸಿದ್ದಾರೆ. ಈ ಕಾಮನ್‌ ಡಿಪಿ ಈಗಾಗಲೇ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದು, ಮೆಚ್ಚುಗೆ ಪಡೆದಿದೆ.   

Written by - Zee Kannada News Desk | Last Updated : Feb 15, 2024, 11:06 AM IST
  • ಚಂದನವನದಲ್ಲಿ ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಜನ್ಮದಿನಕ್ಕೆ ಒಂದೇ ದಿನ ಮಾತ್ರ ಉಳಿದಿದ್ದು, ಫ್ಯಾನ್ಸ್‌ ಸಂಭ್ರಮಾಚರಣೆ ಶುರುವಾಗಿದೆ.
  • ಇದೀಗ ಈ ವರ್ಷದ ಡಿಬಾಸ್‌ ಬರ್ತ್‌ಡೇ ಕಾಮನ್ ಡಿಪಿ ಸಖತ್ ಸೌಂಡ್ ಮಾಡುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿದೆ.
  • ಕಾಟೇರ ಸಿನಿಮಾದ ಎಲ್ಲಾ ಸಂಭಾಷಣೆಯೂ ಕಥೆಗೆ ಪೂರಕವಾಗಿದ್ದರೇ, ಇದೊಂದು ಡೈಲಾಗ್ ಮಾತ್ರ ದರ್ಶನ್ ನಿಜ ಜೀವನಕ್ಕೂ ಹತ್ತಿರವಾಗುವಂತೆ ಇದ್ದ ಕಾರಣ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗಿತ್ತು.
Darshan: ಬಾಕ್ಸ್‌ಆಫೀಸ್‌ ಸುಲ್ತಾನನ ಜನ್ಮದಿನಕ್ಕೆ ಕಾಟೇರ ಥೀಮ್‌ನಲ್ಲಿ ಇಂಟ್ರೆಸ್ಟಿಂಗ್ ಸಿಡಿಪಿ!  title=

Darshan CDP For Birthday: ಸಾಮಾನ್ಯವಾಗಿ ಸ್ಟಾರ್ ನಟರ ಹುಟ್ಟುಹಬ್ಬಕ್ಕೆ ಫ್ಯಾನಸ್‌ ಸ್ಪೆಷಲ್ ಡಿಪಿ ಮಾಡೋದು ಇತ್ತೀಚಿನ ದಿನಗಳಲ್ಲಿ ಇದೊಂದು ಟ್ರೆಂಡ್‌ ಆಗಿದೆ. ಇನ್ನೇನೂ ಚಂದನವನದಲ್ಲಿ ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಜನ್ಮದಿನಕ್ಕೆ ಒಂದೇ ದಿನ ಮಾತ್ರ ಉಳಿದಿದ್ದು, ಫ್ಯಾನ್ಸ್‌ ಸಂಭ್ರಮಾಚರಣೆ ಶುರುವಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ದರ್ಶನ್‌ ಹುಟ್ಟುಹಬ್ಬಕ್ಕೆ ಇಂಟ್ರೆಸ್ಟಿಂಗ್ ಡಿಪಿ ಸಿದ್ಧಪಡಿಸಿದ್ದಾರೆ. ಸದ್ಯ ಕನ್ನಡ ಚಿತ್ರರಂಗದ ತಾರೆಯರು ಕೂಡ ಅದನ್ನ ಶೇರ್‌ ಮಾಡಿಕೊಂಡು ಅಭಿಮಾನಿಗಳ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. 

ಕಳೆದ ವರ್ಷ ಕೊನೆಯಲ್ಲಿ ಚಾಲೆಂಜಿಂಗ್‌ ಸ್ಟಾರ್‌ ಅಭಿನಯದ 'ಕಾಟೇರ' ಸಿನಿಮಾ ಬಿಡುಗಡೆಯಾಗಿ ಭರ್ಜರಿ ಸಕ್ಸಸ್ ಕಂಡಿದ್ದು, ಈ ಚಿತ್ರದ ಹಿರಣ್ಯ ಕಶಿಪು ನಾಟಕ ಸನ್ನಿವೇಶದಲ್ಲಿನ ದರ್ಶನ್ ಫೋಟೊ ಬಳಸಿಕೊಂಡು ಕಾಮನ್ ಡಿಪಿಯನ್ನು ತಯಾರಿಸಿದ್ದಾರೆ. ಅದು ಫ್ಯಾನ್ ಬಹಳ ಇಷ್ಟವಾಗಿದೆ.‌ ನಟ ದರ್ಶನ್‌ ಸ್ಪೆಷಲ್ ಕಾಮನ್‌ ಡಿಪಿಯನ್ನು ಪರಿವರ್ತನ್ ಎನ್ನುವ ಡಿಸೈನರ್ ಡಿಸೈನ್ ಮಾಡಿದ್ದಾರೆ. ಇದೀಗ ಈ ವರ್ಷದ ಡಿಬಾಸ್‌ ಬರ್ತ್‌ಡೇ ಕಾಮನ್ ಡಿಪಿ ಸಖತ್ ಸೌಂಡ್ ಮಾಡುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿದೆ. 

ಇದನ್ನೂ ಓದಿ: ಬಾಹುಬಲಿ ಚಿತ್ರದಲ್ಲಿ ರಮ್ಯಾ ಕೃಷ್ಣನ ಅಲ್ಲ.. ಈ ಸ್ಟಾರ್‌ ನಟಿ ನಟಿಸಬೇಕಿತ್ತಂತೆ!

ಹೌದು.. 'ಕಾಟೇರ' ಸಿನಿಮಾದಲ್ಲಿ ಹಿರಿಯ ನಟ ಬಿರಾದಾರ್ ಚೊಂಗ್ಲಾ ಪಾತ್ರದಲ್ಲಿ ನಟಿಸಿದ್ದು, ಇದರಲ್ಲಿ ಮಾತು ಬಾರದ ವಿಶೇಷ ಚೇತನ ಚೊಂಗ್ಲಗೆ ನಾಟಕದಲ್ಲಿ ನಟಿಸಬೇಕೆಂಬ ಆಸೆಯಿದ್ದು, ಅದರಲ್ಲೂ ಹಿರಣ್ಯ ಕಶಿಪು ಆಗಿ ಲೀಡ್ ರೋಲ್ ಮಾಡಬೇಕು ಎನ್ನುವ ಬಯಕೆ ಇರುತ್ತದೆ. ಆದರೆ ಚೊಂಗ್ಲಾಗೆ ಮಾತನಾಡಲು ಸಾಧ್ಯವಾಗದ ಕಾರಣ ಅವಕಾಶ ಸಿಗದಿದ್ದಕ್ಕೆ, ಆತನ ಆಸೆಯನ್ನು ಕಾಟೇರ ಅರ್ಥ ಮಾಡಿಕೊಳುತ್ತಾನೆ. ಕಾಟೇರ ವೇದಿಕೆ ಹಿಂದೆ ನಿಂತು ಹಿರಣ್ಯ ಕಶಿಪು ಡೈಲಾಗ್ ಹೇಳಿದಾಗ, ಅದನ್ನು ಚೊಂಗ್ಲ ವೇದಿಕೆ ಮೇಲೆ ಲಿಪ್‌ಸಿಂಕ್ ಮಾಡಿ ಅಭಿನಯಿಸಿ ಪ್ರೇಕ್ಷಕರಿಂದ  ಚಪ್ಪಾಳೆ ಗಿಟ್ಟಿಸುತ್ತಾನೆ. 

ಕಾಟೇರ ಸಿನಿಮಾದ ಎಲ್ಲಾ ಸಂಭಾಷಣೆಯೂ ಕಥೆಗೆ ಪೂರಕವಾಗಿದ್ದರೇ, ಇದೊಂದು ಡೈಲಾಗ್ ಮಾತ್ರ ದರ್ಶನ್ ನಿಜ ಜೀವನಕ್ಕೂ ಹತ್ತಿರವಾಗುವಂತೆ ಇದ್ದ ಕಾರಣ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗಿತ್ತು. ನಟ ದರ್ಶನ್‌ ತಂದೆ, ಖಳನಟ ತೂಗುದೀಪ ಶ್ರೀನಿವಾಸ್  ಪೌರಾಣಿಕ ಪಾತ್ರಗಳಲ್ಲಿ ಹೆಚ್ಚು ನಟಿಸಿದ್ದರು. ತೂಗುದೀಪ ಶ್ರೀನಿವಾಸ್ ತಮ್ಮ ಕಂಚಿನ ಕಂಠದಿಂದ ಹೇಗೆ ಪಾತ್ರಗಳಿಗೆ ಗತ್ತು ತರುತ್ತಿದ್ದರೋ, ಹಾಗೆಯೇ ದರ್ಶನ್ ಹಿರಣ್ಯಕಶಿಪು ಸಂಭಾಷಣೆಗೆ ಸಹ ಮೆಚ್ಚುಗೆಗೆ ಪಾತ್ರವಾಗಿದೆ. 

ಇದನ್ನೂ ಓದಿ: ‘ಕೆಟಿಎಂ’ ಸವಾರಿಗೆ ಡೇಟ್‌ ಫಿಕ್ಸ್.. ಮತ್ತೊಂದು ಪ್ರೇಮಕಥೆ ಹೊತ್ತು ತಂದ ‘ದಿಯಾ’ ದೀಕ್ಷಿತ್

ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಇದೇ ಥೀಮ್‌ನಲ್ಲಿ  ಕಾಮನ್ ಡಿಪಿ ತಯಾರಿಸಿದ್ದು, ನಾಟಕದ ರಂಗಸಜ್ಜಿಕೆ ಮುಂದೆ ಕಾಟೇರ ಗದೆ ಹಿಡಿದು ನಿಂತಿದ್ದು, ಅದರ ಹಿಂದೆ ತೂಗುದೀಪ ಶ್ರೀನಿವಾಸ್ ಪೌರಾಣಿಕ ನಾಟಕದ ವೇಷಧಾರಿಯಾಗಿ ಕಟೌಟ್‌ ಗಮನಿಸಬಹುದು. ಅದರಲ್ಲಿ 'ಮರೆಯಲಾಗದ ಮಾಣಕ್ಯ' ಎಂದು ಬರೆಯಲಾಗಿದ್ದು, ಇನ್ನು ಮತ್ತೆ ನಾಟಕ ಮಂಡಲಿಗೆ ತೂಗುದೀಪ ಕಲಾಮಂಡಲಿ ಎನ್ನುವ ಹೆಸರಿದೆ. ದರ್ಶನ್‌ನ ಸಿಡಿಪಿ ನೋಡಿದ ಫ್ಯಾನ್ಸ್‌, "ನಿಮ್ ಅಪ್ಪನ್ ಹೆಸ್ರು ಉಳುಸ್ಬುಟ್ಟೆ ಕಣಯ್ಯ" ಎಂದು ಕೈ ಎತ್ತಿ ಮುಗಿಯುವಂತೆ ಡಿಪಿ ಡಿಸೈನ್ ಮಾಡಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News