ʼಆ‌ʼ ಖ್ಯಾತ ನಟಿಯಿಂದಲೇ ನಾಗಚೈತನ್ಯ-ಸಮಂತಾ ದೂರಾವದರೇ? ಅನುಮಾನಕ್ಕೆ ಕಾರಣವಾದ ವೈರಲ್ ಪೋಸ್ಟ್ !!

Nagachaitanya and Samantha: ನಾಯಕ ನಾಗ ಚೈತನ್ಯ - ಶೋಭಿತಾ ಧೂಳಿಪಾಲ ಮತ್ತೊಮ್ಮೆ ಎಲ್ಲೋ ದೂರ ಹೋಗಿದ್ದಾರೆ ಎಂಬ ಗುಸುಗುಸು ಶುರುವಾಗಿದೆ. ನಾಗ ಚೈತನ್ಯ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಈ ಅನುಮಾನಗಳಿಗೆ ಕಾರಣವಾಗಿದೆ. 

Written by - Savita M B | Last Updated : Apr 22, 2024, 10:48 AM IST
  • ನಾಯಕಿ ಸಮಂತಾ ಜೊತೆ ನಾಗ ಚೈತನ್ಯ ಬ್ರೇಕ್ ಅಪ್ ಆಗಿದ್ದು ಗೊತ್ತೇ ಇದೆ.
  • ಈ ವದಂತಿಗಳಿಗೆ ಪುಷ್ಟಿ ನೀಡುವಂತೆ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ
ʼಆ‌ʼ ಖ್ಯಾತ ನಟಿಯಿಂದಲೇ ನಾಗಚೈತನ್ಯ-ಸಮಂತಾ ದೂರಾವದರೇ? ಅನುಮಾನಕ್ಕೆ ಕಾರಣವಾದ ವೈರಲ್ ಪೋಸ್ಟ್ !! title=

South Famous Celebrity Couple: ನಾಯಕಿ ಸಮಂತಾ ಜೊತೆ ನಾಗ ಚೈತನ್ಯ ಬ್ರೇಕ್ ಅಪ್ ಆಗಿದ್ದು ಗೊತ್ತೇ ಇದೆ. ದಂಪತಿಗಳು 2018 ರಲ್ಲಿ ವಿವಾಹವಾದರು ಮತ್ತು 2021 ರಲ್ಲಿ ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ಘೋಷಿಸಿದರು. ಅಂದಿನಿಂದ ನಾಗ ಚೈತನ್ಯ ಒಂಟಿಯಾಗಿದ್ದರು. 

ಆದರೆ, ಅವರು ತೆಲುಗು ನಟಿ ಸೋಭಿತಾ ಧೂಳಿಪಾಲ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಹಲವು ವರದಿಗಳು ಬಂದಿವೆ. ಆಗಾಗ ಸೋಭಿತಾ ಧೂಳಿಪಾಲರನ್ನು ಭೇಟಿಯಾಗುತ್ತಿದ್ದ ನಾಗ ಚೈತನ್ಯ ತಾವು ಕಟ್ಟುತ್ತಿದ್ದ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು ಎಂದು ಗೊತ್ತಾಗಿದೆ. ಹೀಗಾಗಿ ಕೆಲವು ವದಂತಿಗಳು ಹರಿದಾಡುತ್ತಿವೆ.

ಇದನ್ನೂ ಓದಿ-ದ್ವಾರಕೀಶ್ ಚಿತ್ರರಂಗಕ್ಕೆ ಬರಲು ಕಾರಣ ಯಾರು ಗೊತ್ತಾ? ಇವರತ್ರ ಅಂಗಲಾಚಿ ಬೇಡಿಕೊಂಡಿದ್ರಂತೆ ಕುಳ್ಳ!

ಈ ವದಂತಿಗಳಿಗೆ ಪುಷ್ಟಿ ನೀಡುವಂತೆ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಲಂಡನ್‌ಗೆ ತೆರಳಿದ್ದ ನಾಗ ಚೈತನ್ಯ ಜತೆ ಶೋಭಿತಾ ಕಾಣಿಸಿಕೊಂಡಿದ್ದರು. ಅಲ್ಲಿನ ಇಂಡಿಯನ್ ರೆಸ್ಟೊರೆಂಟ್ ಗೆ ಹೋಗಿದ್ದಾಗ ಸರ್ವರ್‌ ಒಬ್ಬರು ನಾಗ ಚೈತನ್ಯ ಜೊತೆ ಸೆಲ್ಫಿ ತೆಗೆದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಫೋಟೋದಲ್ಲಿ ಸೋಭಿತಾ ಧೂಳಿಪಾಲ ಕೂಡ ದೂರದಲ್ಲಿ ಕುಳಿತಿದ್ದರು. 

ಈ ಪೋಸ್ಟ್‌ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಸರ್ವರ್ ಫೋಟೋವನ್ನು ತೆಗೆದುಹಾಕಿದ್ದಾರೆ.. ಅಲ್ಲದೇ ವಿದೇಶಗಳಲ್ಲಿ ಇಬ್ಬರೂ ಅಕ್ಕಪಕ್ಕದಲ್ಲಿ ನಿಂತಿರುವ ಫೋಟೋ ಕೂಡ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ನಾಗ ಚೈತನ್ಯ-ಶೋಭಿತಾ ನಡುವೆ ಸಂಬಂಧವಿದೆ ಎಂಬ ಅನುಮಾನಗಳು ಬಲಗೊಂಡಿವೆ. ಆದರೆ ಈ ಬಗ್ಗೆ ಅವರು ಎಂದಿಗೂ ಪ್ರತಿಕ್ರಿಯಿಸಲಿಲ್ಲ. ನಾಗ ಚೈತನ್ಯ ಸದ್ಯ ತಾಂಡೇಲ್ ಎಂಬ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ನಾಯಕಿಯಾಗಿದ್ದು, ಚಂದು ಮೊಂಡೇಟಿ ನಿರ್ದೇಶಕರಾಗಿದ್ದಾರೆ. 

ಇದನ್ನೂ ಓದಿ-ನಿಮ್ಮವರನ್ನೇ ಲವ್ ಮಾಡಿಕೊಳ್ಳಿ.. ಹಿಂದು ಹುಡುಗಿಯರ ಜೊತೆ ನಿಮಗೆ ಲವ್​ ಯಾಕೆ? : ನಟ ಪ್ರಥಮ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News