ಸೌತ್ ಬ್ಯೂಟಿ ತ್ರಿಶಾ ಕೃಷ್ಣನ್ ವಯಸ್ಸು 40 ವರ್ಷ… ಆದ್ರೆ ಇನ್ನೂ ಮದುವೆಯಾಗದಿರಲು ಇದುವೇ ಕಾರಣವಂತೆ!

Why Trisha Krishnan is not married: ಸೌತ್ ಫಿಲ್ಮ್ ಇಂಡಸ್ಟ್ರಿಯ ಖ್ಯಾತ ನಟಿ ತ್ರಿಶಾ ಕೃಷ್ಣನ್ ಬಗ್ಗೆ ನಾವಿಂದು ಮಾತನಾಡಲಿದ್ದೇವೆ. ಪೊನ್ನಿಯನ್ ಸೆಲ್ವನ್ 1 & 2, ಲಿಯೋ ಹೀಗೆ ಕೆಲ ಸಿನಿಮಾಗಳ ಮೂಲಕ ಮತ್ತೆ ತೆರೆಮೇಲೆ ಮಿಂಚುತ್ತಿರುವ ಮುದ್ದು ಮುಖದ ಈ ಚೆಲುವೆಗೆ 40 ವರ್ಷ ವಯಸ್ಸು, ಆದ್ರೆ ಇಂದಿಗೂ ಮದುವೆ ವಿಚಾರದಿಂದ ಅಂತರ ಕಾಯ್ದುಕೊಂಡಿದ್ದಾರೆ.

Written by - Bhavishya Shetty | Last Updated : Jan 13, 2024, 11:10 AM IST
    • ಸೌತ್ ಫಿಲ್ಮ್ ಇಂಡಸ್ಟ್ರಿಯ ಖ್ಯಾತ ನಟಿ ತ್ರಿಶಾ ಕೃಷ್ಣನ್
    • ಮದುವೆ ವಿಚಾರ ಬಂದಾಗ ಅದರಿಂದ ದೂರವಾಗುತ್ತಾರೆ ತ್ರಿಶಾ
    • ತ್ರಿಶಾ ಕೃಷ್ಣನ್ ಅವರಿಗೆ ಮದುವೆ ಸಂಬಂಧಿಸಿ ಪ್ರಶ್ನೆಯೊಂದನ್ನು ಕೇಳಲಾಯಿತು
ಸೌತ್ ಬ್ಯೂಟಿ ತ್ರಿಶಾ ಕೃಷ್ಣನ್ ವಯಸ್ಸು 40 ವರ್ಷ… ಆದ್ರೆ ಇನ್ನೂ ಮದುವೆಯಾಗದಿರಲು ಇದುವೇ ಕಾರಣವಂತೆ! title=
trisha krishnan

Why Trisha Krishnan is not married: ಭಾರತೀಯ ಚಿತ್ರರಂಗದಲ್ಲಿ ಟ್ರೆಂಡ್ ಒಂದು ಪ್ರಸ್ತುತ ಚಾಲ್ತಿಯಲ್ಲಿದೆ. ಅದರಂತೆ ಸಲ್ಮಾನ್ ಖಾನ್, ಟಬು, ಅಮೀಶಾ ಪಟೇಲ್ ಅವರಂತಹ ಅನೇಕ ತಾರೆಯರು ಸಿಂಗಲ್ ಆಗಿ ಉಳಿಯಲು ಇಷ್ಟಪಡುತ್ತಿದ್ದಾರೆ. ಈ ಪೈಕಿ ದಕ್ಷಿಣದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಒಬ್ಬರು.

ಇದನ್ನೂ ಓದಿ: ಸೌರವ್ ಗಂಗೂಲಿ ಬಯೋಪಿಕ್ ನಲ್ಲಿ ನಟಿಸಲಿರುವ ಬಾಲಿವುಡ್‌ ನಟ ಯಾರು ಗೊತ್ತಾ?   

ಸೌತ್ ಫಿಲ್ಮ್ ಇಂಡಸ್ಟ್ರಿಯ ಖ್ಯಾತ ನಟಿ ತ್ರಿಶಾ ಕೃಷ್ಣನ್ ಬಗ್ಗೆ ನಾವಿಂದು ಮಾತನಾಡಲಿದ್ದೇವೆ. ಪೊನ್ನಿಯನ್ ಸೆಲ್ವನ್ 1 & 2, ಲಿಯೋ ಹೀಗೆ ಕೆಲ ಸಿನಿಮಾಗಳ ಮೂಲಕ ಮತ್ತೆ ತೆರೆಮೇಲೆ ಮಿಂಚುತ್ತಿರುವ ಮುದ್ದು ಮುಖದ ಈ ಚೆಲುವೆಗೆ 40 ವರ್ಷ ವಯಸ್ಸು, ಆದ್ರೆ ಇಂದಿಗೂ ಮದುವೆ ವಿಚಾರದಿಂದ ಅಂತರ ಕಾಯ್ದುಕೊಂಡಿದ್ದಾರೆ.

ನಟಿ, ಅದ್ಭುತ ರೂಪದರ್ಶಿ ಮತ್ತು ಲಕ್ಷಾಂತರ ಅಭಿಮಾನಿಗಳ ಮನಗೆದ್ದ ಚೆಲುವೆ ಪ್ರಸಿದ್ಧ ತಾರೆಗಳೊಂದಿಗೆ ಸಿನಿಮಾ ಮಾಡಿದ್ದಾರೆ. ಆದರೆ, ಮದುವೆ ವಿಚಾರ ಬಂದಾಗ ಅದರಿಂದ ದೂರವಾಗುತ್ತಾರೆ.

ಕಳೆದ ವರ್ಷ ನಡೆಸಿದ ಸಂದರ್ಶನವೊಂದರಲ್ಲಿ ತ್ರಿಶಾ ಕೃಷ್ಣನ್ ಅವರಿಗೆ ಮದುವೆ ಸಂಬಂಧಿಸಿ ಪ್ರಶ್ನೆಯೊಂದನ್ನು ಕೇಳಲಾಯಿತು. ಆಗ ಪ್ರತಿಕ್ರಿಯಿಸಿದ ತ್ರಿಶಾ, “ಕೆಲಸದ ಕಾರಣದಿಂದ ಮದುವೆಯಾದ ನಂತರ ವಿಚ್ಛೇದನ ಪಡೆಯಲು ಇಷ್ಟವಿಲ್ಲ” ಎಂದಿದ್ದಾರೆ.

“ಆ ಸಂಬಂಧದಲ್ಲಿ ಜನರು ಸಂತೋಷವಾಗಿರದಿದ್ದರೆ ಮತ್ತೆ ಏಕೆ ಮದುವೆಯಾಗಬೇಕು. ಮದುವೆಯಾಗಬೇಕು ಎನಿಸುವಂತಹ  ಸರಿಯಾದ ವ್ಯಕ್ತಿಯನ್ನು ನಾನಿನ್ನು ಭೇಟಿ ಮಾಡಿಲ್ಲ” ಎಂದು ಹೇಳಿದ್ದಾರೆ.

ಈ ಹಿಂದೆ ತ್ರಿಶಾ, ಬಾಹುಬಲಿ ಸ್ಟಾರ್ ರಾಣಾ ದಗ್ಗುಬಾಟಿ ಜೊತೆ ಸಂಬಂಧ ಹೊಂದಿದ್ದಾರೆಂದು ಸುದ್ದಿ ಹಬ್ಬಿತ್ತು. ಅದಾದ ಬಳಿಕ ರಾಣಾ ಅವರೇ ತ್ರಿಷಾ ಜೊತೆ ರಿಲೇಶನ್ ಶಿಪ್ ನಲ್ಲಿ ಇರುವುದಾಗಿ ಒಪ್ಪಿಕೊಂಡಿದ್ದರು. ಆದರೆ ಕೆಲ ಸಮಯದ ನಂತರ ಈ ಸಂಬಂಧ ಮುರಿದುಬಿದ್ದಿತ್ತು. ಅಷ್ಟೇ ಅಲ್ಲದೆ, ನಟಿಯ ಹೆಸರು ತಮಿಳು ಸೂಪರ್‌ ಸ್ಟಾರ್ ವಿಜಯ್ ಜೊತೆಯೂ ಕೇಳಿಬಂದಿತ್ತು. ಆದರೆ ಈ ವದಂತಿಯನ್ನು ಇಬ್ಬರೂ ತಿರಸ್ಕರಿಸಿದ್ದರು.  

ಇದನ್ನೂ ಓದಿ: ಬಿಗ್‌ ಬಾಸ್‌ ಸಂಗೀತಾ ಫಿನಾಲೆ ಟಿಕೆಟ್‌ ಪಡೆದದ್ದು ಪ್ರಿ ಡಿಸೈಡೆಡ್? ಅತಿ ಹೆಚ್ಚು ಅಂಕ ಗಳಿಸಿಯೂ ಫೈನಲ್‌ ತಲುಪದ ಪ್ರತಾಪ್!

ಈ ಹಿಂದೆ ತ್ರಿಶಾ, ಉದ್ಯಮಿ ವರುಣ್ ಮಿನಿಯನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಆ ಸಂಬಂಧ ಮುರಿದುಬಿದ್ದಿದೆ. ಅದಾದ ಬಳಿಕ ತ್ರಿಶಾ ಒಂಟಿಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News