ಸೌತ್‌ ನಟಿ ಶ್ರೀದೇವಿ ಸಾವಿಗೂ ಮುನ್ನ ಮಗಳು ಜಾನ್ವಿ ಕಪೂರ್ ಗೆ ಹೀಗೊಂದು ಮಾತು ಹೇಳಿದ್ದರಂತೆ.. 6 ವರ್ಷಗಳ ನಂತರ ಹೊರಬಿತ್ತು ದೊಡ್ಡ ಸತ್ಯ!!

South actress Sridevi: ದಿವಂಗತ ಬಾಲಿವುಡ್ ನಟಿ ಶ್ರೀದೇವಿ ಒಬ್ಬ ಶ್ರೇಷ್ಠ ನಟಿ ಮಾತ್ರವಲ್ಲ, ಆದರೆ ಅವರು ತಮ್ಮ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ತಾಯಿಯಾಗಿದ್ದರು. ಅವರ ಇಬ್ಬರು ಪುತ್ರಿಯರಾದ ಜಾನ್ವಿ ಮತ್ತು ಖುಷಿ ಈಗಲೂ ಅವರನ್ನು ನೆನೆದು ಭಾವುಕರಾಗುತ್ತಾರೆ. ಶ್ರೀದೇವಿಯ ಸೌಂದರ್ಯಕ್ಕೆ ಜನ ಕೂಡ ಫಿದಾ ಆಗಿದ್ದರು.. ಇದೇ ಕಾರಣಕ್ಕೆ ನಟಿ ಸತ್ತು 6 ವರ್ಷ ಕಳೆದರೂ ನಂಬಲು ಸಾಧ್ಯವಾಗುತ್ತಿಲ್ಲ. 

Written by - Savita M B | Last Updated : Apr 6, 2024, 10:03 PM IST
  • ಜಾನ್ವಿ ಕಪೂರ್ ಅವರು ತಮ್ಮ ತಾಯಿ ಶ್ರೀದೇವಿಗೆ ತುಂಬಾ ಹತ್ತಿರವಾಗಿದ್ದರು
  • ತಾಯಿಯ ಮರಣದ ನಂತರ ನಟಿ ತುಂಬಾ ಧಾರ್ಮಿಕರಾಗಿದ್ದಾರೆ ಎಂದು ಹೇಳಲಾಗುತ್ತದೆ.
ಸೌತ್‌ ನಟಿ ಶ್ರೀದೇವಿ ಸಾವಿಗೂ ಮುನ್ನ ಮಗಳು ಜಾನ್ವಿ ಕಪೂರ್ ಗೆ ಹೀಗೊಂದು ಮಾತು ಹೇಳಿದ್ದರಂತೆ.. 6 ವರ್ಷಗಳ ನಂತರ ಹೊರಬಿತ್ತು ದೊಡ್ಡ ಸತ್ಯ!! title=

Janhvi kapoor: ಶ್ರೀದೇವಿ ಸಾವಿನಿಂದ ಜನಸಾಮಾನ್ಯರು ಮತ್ತು ಗಣ್ಯರು ಮಾತ್ರವಲ್ಲದೆ ಅವರ ಹಿರಿಯ ಮಗಳು ಜಾನ್ವಿ ಕಪೂರ್ ಕೂಡ ಶಾಕ್ ಆಗಿದ್ದರು... ತನ್ನ ತಾಯಿ ಇದ್ದಕ್ಕಿದ್ದಂತೆ ಇಹಲೋಕಕ್ಕೆ ವಿದಾಯ ಹೇಳಿದ್ದನ್ನು ನಂಬಲಾಗಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಶ್ರೀದೇವಿ ತಮ್ಮ ಹಿರಿಯ ಮಗಳು ಜಾನ್ವಿ ಕಪೂರ್ ಅವರ ಚೊಚ್ಚಲ ಚಿತ್ರದ ಬಗ್ಗೆ ತುಂಬಾ ಉತ್ಸುಕರಾಗಿದ್ದರಂತೆ ಆದರೆ ವಿಧಿಯ ಆಟವೇ ಬೇರೆಯಾಗಿತ್ತು ಆ ಸಿನಿಮಾ ಬಿಡುಗಡೆಗೂ ಮೊದಲೇ ನಟಿ ನಿಧನರಾದರು.

ಇದನ್ನೂ ಓದಿ-Nora Fatehi: ʼಸಿನಿಮಾದಲ್ಲಿ ಆ ಸೀನ್‌ ಮಾಡುವಾಗ ಅತಿಯಾದ ರಕ್ತಸ್ರಾವವಾಗಿತ್ತುʼ ನೋವು ಬಿಚ್ಚಿಟ್ಟ ಖ್ಯಾತ ನಟಿ!!

 ಜಾನ್ವಿ ಕಪೂರ್ ಅವರು ತಮ್ಮ ತಾಯಿ ಶ್ರೀದೇವಿಗೆ ತುಂಬಾ ಹತ್ತಿರವಾಗಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ತನ್ನ ತಾಯಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದ ಜಾನ್ವಿ ಕಪೂರ್ ಶ್ರೀದೇವಿ ಸಾವಿನಿಂದ ತುಂಬಾ ನೊಂದಿದ್ದರು... ಅಲ್ಲದೇ ತಾಯಿಯ ಮರಣದ ನಂತರ ನಟಿ ತುಂಬಾ ಧಾರ್ಮಿಕರಾಗಿದ್ದಾರೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-Aryan Khan ರೂಮರ್ಡ್ ಗರ್ಲ್ ಫ್ರೆಂಡ್ Larissa Bonesi ಫ್ಲೈಯಿಂಗ್ ಕಿಸ್ಸ್ ವೈರಲ್, ಶಾರುಕ್ ಪುತ್ರನ ರಿಯಾಕ್ಷನ್ ಹೇಗಿತ್ತು?

ಜಾನ್ವಿ ಕಪೂರ್ ಕೂಡ ತನ್ನ ತಾಯಿ ಶ್ರೀದೇವಿಯ ಮರಣದ ನಂತರ ದೇವರು ಮತ್ತು ಭಕ್ತಿಯನ್ನು ನಂಬಲು ಪ್ರಾರಂಭಿಸಿದೆ ಎಂದು ಹೇಳಿದ್ದರು. ಸಾವಿಗೂ ಮುನ್ನ ತಾಯಿ ತನ್ನೊಂದಿಗೆ ಕೊನೆಯ ಬಾರಿ ಮಾತನಾಡಿದ್ದನ್ನು ಜಾನ್ವಿ ಕೂಡ ಹೇಳಿದ್ದಳು. "ನನಗೆ ನಿದ್ದೆ ಬರುತ್ತಿಲ್ಲ ಹಾಗಾಗಿ ನಾನು ನನ್ನ ತಾಯಿಯೊಂದಿಗೆ ಮಾತನಾಡುತ್ತಿದ್ದೆ.. ಅಮ್ಮಾ, ನನಗೆ ನಿದ್ದೆ ಬರುತ್ತಿಲ್ಲ ಎಂದಾಗ ಅವರು ನನಗೆ ನಿದ್ದೆ ಬಂದರೆ ಮಾಡು ಇಲ್ಲವಾದರೆ ಏನಾದರೂ ಕೆಲಸ ಮಾಡು ಇದರಿಂದ ನಿದ್ದೆ ಬರುತ್ತದೆ.. ಎಂದಿದ್ದರು" ಎಂದು ತಾಯಿ ತನಗೆ ಕೊನೆಯದಾಗಿ ಹೇಳಿದ ಮಾತನನ್ನು ನಟಿ ನೆನಪಿಸಿಕೊಂಡಿದ್ದರು.. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News