ಮತ್ತೆ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಶಿಲ್ಪಾ ಶೆಟ್ಟಿ ..!

Sandalwood : ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಎರಡು ದಶಕಗಳ ಬಳಿಕ ಸ್ಯಾಂಡಲ್‌ವುಡ್‌ನತ್ತ ಹೆಜ್ಜೆ ಹಾಕುವ ಮನಸ್ಸು ಮಾಡಿದ್ದಾರೆ. ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಶನ್‌‌ನಲ್ಲಿ ಮೂಡಿ ಬರುತ್ತಿರುವ ʼಕೆಡಿʼ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Written by - Zee Kannada News Desk | Last Updated : Mar 23, 2023, 01:56 PM IST
  • ಕ್ರೈಂ, ಆ್ಯಕ್ಷನ್ ಡ್ರಾಮಾ ಕಥಾಹಂದರವುಳ್ಳ ಈ ಚಿತ್ರದ ಟೈಟಲ್ ಟೀಸರ್ ಕೂಡ ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
  • ಶಿಲ್ಪಾ ಶೆಟ್ಟಿಯವರ ಪಾತ್ರದ ಫಸ್ಟ್‌‌ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವ ಪ್ರೇಮ್,
  • ಚಿತ್ರದಲ್ಲಿ ಶಿಲ್ಪಾ ಶೆಟ್ಟಿ, ʼಸತ್ಯವತಿʼ ಎಂಬ ಪಾತ್ರದಲ್ಲಿ ನಟಿಸಲಿದ್ದಾರೆ.
  • ಶಿಲ್ಪಾ ಶೆಟ್ಟಿ ಪಾತ್ರದ ಫಸ್ಟ್‌‌ಲುಕ್ ಗೆ ಅಭಿಮಾನಿಗಳು ಫಿದಾ ಆಗದ್ದಾರೆ.
ಮತ್ತೆ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಶಿಲ್ಪಾ ಶೆಟ್ಟಿ ..!  title=

Shilpa Shetty : 1998ರಲ್ಲಿ ರವಿಚಂದ್ರನ್ ನಟಿಸಿರುವ ‘ಪ್ರೀತ್ಸೋದ್ ತಪ್ಪಾ’ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಶಿಲ್ಪಾ ಶೆಟ್ಟಿ ಮೊದಲ ಬಾರಿಗೆ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಇದೀಗ ‘ಕೆಡಿ’ ಚಿತ್ರದಲ್ಲಿ ರವಿಚಂದ್ರನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಶಿಲ್ಪಾ ಶೆಟ್ಟಿ ಮತ್ತೆ ರವಿಚಂದ್ರನ್‌ಗೆ ಜೋಡಿಯಾಗಲಿದ್ದಾರೆಯೇ ಎಂಬ ಮಾತುಗಳು‌ ಕೂಡ ಕೇಳಿ ಬರುತ್ತಿವೆ.   

ಕ್ರೈಂ, ಆ್ಯಕ್ಷನ್ ಡ್ರಾಮಾ ಕಥಾಹಂದರವುಳ್ಳ ಈ ಚಿತ್ರದ ಟೈಟಲ್ ಟೀಸರ್ ಕೂಡ ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಚಿತ್ರ ʼಕೆವಿಎನ್‌ ಪ್ರೊಡಕ್ಷನ್ಸ್‌ʼ ಬ್ಯಾನರ್‌ನಡಿ ನಿರ್ಮಾಣವಾಗುತ್ತಿದ್ದು, ʼಕೆಡಿʼ ಸಿನಿಮಾದ ಚಿತ್ರೀಕರಣ ಕಳೆದ ಫೆಬ್ರವರಿಯಲ್ಲಿ ಆರಂಭವಾಗಿದೆ.  

ಬಾಲಿವುಡ್‌ನ ಖ್ಯಾತ ನಟ ಸಂಜಯ್ ದತ್ ಕೂಡ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆಯನ್ನು ಮಾಡಲಿದ್ದಾರಂತೆ.  ಈ ʼಕೆಡಿʼ ಸಿನಿಮಾದ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಶಿಲ್ಪಾ ಶೆಟ್ಟಿ ಪಾತ್ರದ ಫಸ್ಟ್‌‌ಲುಕ್ ಗೆ ಅಭಿಮಾನಿಗಳು ಫಿದಾ ಆಗದ್ದಾರೆ.

 

ಇದನ್ನೂ ಓದಿ-Om movie Re-Release: ಇಂದು ಮತ್ತೆ ಮರು ಬಿಡುಗಡೆಯಾಗಲಿದೆ ʻಓಂʼ ಸಿನಿಮಾ! 28 ವರ್ಷಗಳಲ್ಲಿ 550 ಬಾರಿ ರಿ-ರಿಲೀಸ್‌  

 

ಯುಗಾದಿ ಹಬ್ಬದ ಪ್ರಯುಕ್ತ ಬುಧವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಶಿಲ್ಪಾ ಶೆಟ್ಟಿಯವರ ಪಾತ್ರದ ಫಸ್ಟ್‌‌ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವ ಪ್ರೇಮ್, ಸ್ಟಾರ್ ನಟಿಗೆ ಸ್ವಾಗತ ಕೋರಿದ್ದಾರೆ. ಚಿತ್ರದಲ್ಲಿ ಶಿಲ್ಪಾ ಶೆಟ್ಟಿ, ʼಸತ್ಯವತಿʼ ಎಂಬ ಪಾತ್ರದಲ್ಲಿ ನಟಿಸಲಿದ್ದಾರೆ. ‘ಕೆಜಿಎಫ್’ ಚಿತ್ರದ ಮೂಲಕ ರವೀನಾ ಟಂಡನ್ ಸ್ಯಾಂಡಲ್‌‌ವುಡ್ ಪ್ರವೇಶಿಸಿದ್ದರು. ಅದೇ ರೀತಿ ಇದೀಗ ‘ಕೆಡಿ’ ಚಿತ್ರದಲ್ಲಿ ʼಸತ್ಯವತಿʼಯಾಗುವ ಮೂಲಕ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಮತ್ತೆ ಮರಳಿದ್ದಾರೆ. 

ಇದನ್ನೂ ಓದಿ-Kabzaa : ಅಂಡರ್‌ವರ್ಲ್ಡ್ ಕತೆ ಕಬ್ಜ ಸೂಪರ್‌ ಹಿಟ್‌ ಆಗಲು ಈ 5 ಅಂಶಗಳೇ ಕಾರಣ!  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News