‘ಮಮ್ಮಾ ಎಂದು ಕರೆಯಿಸಿಕೊಳ್ಳುವುದೇ ಖುಷಿ’ – ಮುದ್ದಿನ ಮಗಳ ವಿಡಿಯೋ ಶೇರ್ ಮಾಡಿದ ಶಿಲ್ಪಾ ಶೆಟ್ಟಿ

ಬಾಲಿವುಡ್ ನಟಿ ಮತ್ತು ಫಿಟ್ನೆಸ್ ಐಕಾನ್ ಶಿಲ್ಪಾ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ತಮ್ಮ ಕುಟುಂಬದ ವಿಚಾರವೇ ಆಗಿರಲಿ, ಶೂಟಿಂಗ್ ನ ವಿಚಾರವೇ ಆಗಿರಲಿ ಶಿಲ್ಪಾ ಸಾಮಾಜಿಕ ಮಾಧ್ಯಮದ  ಮೂಲಕ ತನ್ನ ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಾರೆ.  

Written by - Ranjitha R K | Last Updated : Feb 15, 2021, 05:36 PM IST
  • ತನ್ನ ಮಗಳ ವಿಡಿಯೋ ಶೇರ್ ಮಾಡಿದ ಶಿಲ್ಪಾ ಶೆಟ್ಟಿ
  • ಶೇರ್ ಮಾಡಿದ 3 ಗಂಟೆಯಲ್ಲಿಯೇ 7 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ
  • ವಿಡಿಯೋದಲ್ಲಿ ಪುಟ್ಟ ಕಂದ ಸಮಿಶಾ ತೊದಲು ನುಡಿ
‘ಮಮ್ಮಾ ಎಂದು ಕರೆಯಿಸಿಕೊಳ್ಳುವುದೇ ಖುಷಿ’ – ಮುದ್ದಿನ ಮಗಳ ವಿಡಿಯೋ ಶೇರ್ ಮಾಡಿದ ಶಿಲ್ಪಾ ಶೆಟ್ಟಿ title=
ಮಗಳ ವಿಡಿಯೋ ಶೇರ್ ಮಾಡಿದ ಶಿಲ್ಪಾ ಶೆಟ್ಟಿ (photo instagram)

ನವದೆಹಲಿ : ಬಾಲಿವುಡ್ ನಟಿ ಮತ್ತು ಫಿಟ್ನೆಸ್ ಐಕಾನ್ ಶಿಲ್ಪಾ ಶೆಟ್ಟಿ (Shilpa Shetty)ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ತಮ್ಮ ಕುಟುಂಬದ ವಿಚಾರವೇ ಆಗಿರಲಿ, ಶೂಟಿಂಗ್ ನ ವಿಚಾರವೇ ಆಗಿರಲಿ ಶಿಲ್ಪಾ ಸಾಮಾಜಿಕ ಮಾಧ್ಯಮದ (Social media) ಮೂಲಕ ತನ್ನ ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಾರೆ.  ಇಂದು ಶಿಲ್ಪಾ ಶೆಟ್ಟಿ ಪುತ್ರಿ ಸಮಿಶಾ ಶೆಟ್ಟಿಗೆ (Samisha Shetty) ಒಂದನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.  ಹಿನ್ನೆಲೆಯಲ್ಲಿ ಶಿಲ್ಪಾ ಶೆಟ್ಟಿ ತನ್ನ ಮುದ್ದಿನ ಮಗಳ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.  ಈ ವಿಡಿಯೋಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇಂದು ಅಂದರೆ ಫೆಬ್ರವರಿ 15 ರಂದು, ಶಿಲ್ಪಾ ಶೆಟ್ಟಿಯವರ (Shilpa Shetty) ಪುತ್ರಿ ಸಮಿಶಾಗೆ ಒಂದನೇ ಹುಟ್ಟುಹಬ್ಬದ ಸಂಭ್ರಮ.   ಹಿನ್ನೆಲೆಯಲ್ಲಿ ಶಿಲ್ಪಾ ಶೆಟ್ಟಿ, ಬಹಳ ಮುದ್ದಾದ ವೀಡಿಯೊವನ್ನು (vedio) ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಗುಲಾಬಿ ಮತ್ತು ಬಿಳಿ ಉಡುಪು ತೊಟ್ಟಿರುವ ಸಮಿಶಾ, (Samisha) ತೊದಲು ನುಡಿಯಲ್ಲಿ ಮಾತನಾಡುವುದು  ಕಂಡುಬರುತ್ತದೆ. ಶಿಲ್ಪಾ ಶೆಟ್ಟಿ ಮಗುವಿನ ಬಳಿ ಸಮಿಶಾ ಯಾರ ಮಗು ಎಂದು ಕೇಳುವ ಪ್ರಶ್ನೆಗೆ ಪುಟ್ಟ ಕಂದಮ್ಮ ತೊದಲುತ್ತಲೇ ಮಮ್ಮಾ ಎಂದು ಹೇಳುತ್ತದೆ. ಈ ವೀಡಿಯೊ ಎಷ್ಟು ಮುದ್ದಾಗಿದೆ ಎಂದರೆ 3 ಗಂಟೆಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಬಾರಿ ಈ ವೀಡಿಯೊವನ್ನು ವೀಕ್ಷಿಸಲಾಗಿದೆ. 

 
 
 
 

 
 
 
 
 
 
 
 
 
 
 

A post shared by Shilpa Shetty Kundra (@theshilpashetty)

 

ಇದನ್ನೂ ಓದಿ : ಹೊಸದಾಗಿ ಖರೀದಿಸಿದ ದುಬಾರಿ ಕಾರಿನಲ್ಲಿ Shilpa Shetty ಕುಟುಂಬದ ಜಾಲಿ ರೈಡ್

ಈ ಮುದ್ದಾದ ವೀಡಿಯೊವನ್ನು ಹಂಚಿಕೊಳ್ಳುವಾಗ, ಶಿಲ್ಪಾ ಶೆಟ್ಟಿ ಅವರು ಭಾವನಾತ್ಮಕ ಶೀರ್ಷಿಕೆಯನ್ನು ಸಹ ಬರೆದಿದ್ದಾರೆ. ನಿನ್ನ ಬಾಯಿಯಿಂದ ಮಮ್ಮಾ ಎಂದು ಕರೆಸಿಕೊಳ್ಳುವುದು ಬಹಳ ಖುಷಿ ನೀಡುತ್ತದೆ. ಇವತ್ತು  ನಿನಗೆ ಒಂದು ವರ್ಷ ತುಂಬಿರುವುದು ನನಗೆ ಬಹಳ ದೊಡ್ಡ ಗಿಫ್ಟ್ (gift) ಸಿಕ್ಕಿದಂತೆ ಎಂದು ಬರೆದಿದ್ದಾರೆ. ಈ ವೀಡಿಯೊದ ಕೊನೆಯಲ್ಲಿ, ಶಿಲ್ಪಾ ಸಮೀಶ ಅವರ ಹಲವಾರು ಚಿತ್ರಗಳನ್ನು  ಶೇರ್ (photo share) ಮಾಡಿದ್ದಾರೆ.

ಇದನ್ನೂ ಓದಿ : 'ಸಿಂಬಾ' ಅಭಿಮಾನಿಗಳಿಗೆ 'ಜೂ.ಸರ್ಜಾ'ರನ್ನು ಪರಿಚಯಿಸಿದ ಮೇಘನಾ ರಾಜ್.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News