Sevanthi Serial: ಹೊಸ ದಾಖಲೆ ಸೃಷ್ಟಿಸಿದ 'ಸೇವಂತಿ' ಧಾರಾವಾಹಿ...1300 ಎಪಿಸೋಡ್ ಕಂಪ್ಲೀಟ್!

Sevanthi Serial Updates : ಸೇವಂತಿ ಸಿರಿಯಲ್‌ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ. ಅಲ್ಲದೇ ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಪ್ರಸಾರಗೊಂಡ ಧಾರವಾಹಿ ಎನಿಸಿಕೊಂಡಿದೆ. ಹೌದು ಈ ಧಾರಾವಾಹಿ ಇತ್ತೀಚೆಗಷ್ಟೇ ಸಾವಿರದ ಮುನ್ನೂರು ಎಪಿಸೋಡ್‌ಗಳನ್ನು ಪೊರೈಸಿದೆ. ಆ ಖುಷಿಯನ್ನು ಧಾರಾವಾಹಿ ತಂಡ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.    

Written by - Savita M B | Last Updated : Aug 31, 2023, 02:57 PM IST
  • ತಮಿಳು ಧಾರಾವಹಿಯ ರಿಮೇಕ್‌ ಆದ ಸೇವಂತಿ ಸಿರೀಯಲ್‌
  • ಮುಖ್ಯ ಪಾತ್ರದಲ್ಲಿ ನಟಿ ದೀಪಿಕಾ ನಟಿಸಿದ್ದಾರೆ
  • ಇತ್ತೀಚೆಗಷ್ಟೇ ಸಾವಿರದ ಮುನ್ನೂರು ಎಪಿಸೋಡ್‌ಗಳನ್ನು ಪೊರೈಸಿದೆ.
Sevanthi Serial: ಹೊಸ ದಾಖಲೆ ಸೃಷ್ಟಿಸಿದ 'ಸೇವಂತಿ' ಧಾರಾವಾಹಿ...1300 ಎಪಿಸೋಡ್ ಕಂಪ್ಲೀಟ್! title=

Sevanthi Serial : ತಮಿಳು ಧಾರಾವಹಿಯ ರಿಮೇಕ್‌ ಆದ ಸೇವಂತಿ ಸಿರೀಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿ ದೀಪಿಕಾ ನಟಿಸಿದ್ದಾರೆ. ಸದ್ಯ ಇವರು  ತಮ್ಮ ಅಭಿಮಾನಿಗಳಿಗೆ ವಿಶೇಷ ಧನ್ಯವಾದಗಳನ್ನು ತಿಳಸಿದ್ದಾರೆ. ಅಲ್ಲದೇ ಈ ಧಾರಾವಾಹಿಯನ್ನು ಅಭಿಮಾನಿಗಳು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. 

ಜೀ ಕನ್ನಡದ ಗಟ್ಟಿಮೇಳ ಮತ್ತು ಪಾರು ಸೇರಿದಂತೆ ಇನ್ನು ಹಲವು ಧಾರಾವಾಹಿಗಳು ದೀರ್ಘಕಾಲದವರೆಗೆ ಹೆಚ್ಚು ಪ್ರಾಸಾರವಾಗುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದವು. ಆದರೆ ಇದೀಗ ಸೇವಂತಿ ಧಾರಾವಾಹಿ ಸಹ ಅದೇ ಸೇರಿದೆ. ಈ ವಿಚಾರ ಧಾರಾವಾಹಿ ತಂಡಕ್ಕೆ ಹೇಳಲಾಗದಷ್ಟು ಸಂತೋಷವನ್ನು ತಂದುಕೊಟ್ಟಿದೆ.  

ಇದನ್ನೂ ಓದಿ-ಸಿನಿಮಾ ಹುಚ್ಚು ಹಿಡಿಸಿದ್ದೇ ನಾನು ಅಂದ್ರು ತಲೈವ ಸ್ನೇಹಿತ ರಾಜ್‌

ಈ ಈ ಸೇವಂತಿ ಸಿರೀಯಲ್‌ನ ಪ್ರೀಮಿಯರ್‌ ಶೋನಲ್ಲಿ ಪಲ್ಲವಿಗೌಡ ನಾಯಕಿಯಾಗಿ ನಟಿಸಿದ್ದರು. ಕೆಲ ಸಂಚಿಕೆಗಳ ನಂತರ ನಟಿ ಮೇಘನಾ ಖುಷಿಯವರು ಪಾತ್ರಕ್ಕೆ ಜೀವತುಂಬಿದ್ದರು. ಸದ್ಯ ನಟಿ ದೀಪಿಕಾ ಈ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಇನ್ನು ಈ ಧಾರಾವಾಹಿಯಲ್ಲಿ ನಟ ಶಿಶಿರ್‌ ಶಾಸ್ತ್ರಿ ನಾಯಕನ ಪಾತ್ರಕ್ಕೆ ಜೀವತುಂಬಿ, ವಕೀಲನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಧಾರಾವಾಹಿಯ ಇನ್ನೊಂದು ವಿಶೇಷತೆಯೆಂದರೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಈ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. ಸದ್ಯ  ಸಾವಿರದ ಮುನ್ನೂರು ಎಪಿಸೋಡ್‌ಗಳನ್ನು ಪೊರೈಸಿದ ಧಾರಾವಾಹಿ ಹೀಗೆ ಇನ್ನಷ್ಟು ಭರ್ಜರಿ ಎಪಿಸೋಡ್ ಗಳನ್ನು ನೀಡುವಂತಾಗಲಿ.

ಇದನ್ನೂ ಓದಿ-ಪ್ರಾಣಸ್ನೇಹಿತ ರಜನೀಕಾಂತ್‌ ಬಗ್ಗೆ ರಾಜ್‌ ಹೇಳಿದ್ದೇನು ಗೊತ್ತಾ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News