ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಮೇಲೆ ಮೂರು ಲಕ್ಷ ದಂಡ ಹಾಕಿದ SEBI

ಮೂಲಗಳ ಪ್ರಕಾರ, ಪ್ರಿವೆಂಶನ್ ಆಫ್ ಇನ್ ಸೈಡರ್ ಟ್ರೇಡಿಂಗ್ ರೂಲ್ಸ್ ಅಡಿಯಲ್ಲಿ , ಶಿಲ್ಪಾ ಶೆಟ್ಟಿ  ಮತ್ತು ರಾಜ್ ಕುಂದ್ರಾ ಅವರ ಮೇಲೆ ಸೆಬಿ ಈ ಕ್ರಮ ಕೈಗೊಂಡಿದೆ. ಪ್ರಿಫರೆಂಶಿಯಲ್ ಅಲಾಟ್ ಮೆಂಟ್ ಮಾಹಿತಿ ನೀಡುವಲ್ಲಿ ವಿಳಂಬವಾದ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 

Written by - Ranjitha R K | Last Updated : Jul 28, 2021, 10:33 PM IST
  • ಮಾಹಿತಿ ನೀಡುವಲ್ಲಿ ವಿಳಂಬದ ಆರೋಪ
  • ಸರಿಯಾಗಿ ವಹಿವಾಟಿನ ವಿವರ ನೀಡದ ಆರೋಪ
  • ಮೂರು ಲಕ್ಷ ದಂಡ ವಿಧಿಸಿದ ಸೆಬಿ
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಮೇಲೆ ಮೂರು ಲಕ್ಷ ದಂಡ ಹಾಕಿದ SEBI title=
ಮೂರು ಲಕ್ಷ ದಂಡ ವಿಧಿಸಿದ ಸೆಬಿ (photo zee news)

ಮುಂಬೈ: ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ಆರೋಪ ಹೊತ್ತ ಉದ್ಯಮಿ ರಾಜ್ ಕುಂದ್ರಾ (Raj Kundra) ವಿರುದ್ಧ ಸೆಬಿ ಕೂಡ ಕ್ರಮ ಕೈಗೊಂಡಿದೆ. ರಾಜ್ ಕುಂದ್ರಾ, ಮತ್ತು ಶಿಲ್ಪಾ ಶೆಟ್ಟಿ (Shilpa Shetty)ಮತ್ತು ಅವರ ವಿವಾನ್ ಇಂಡಸ್ಟ್ರೀಸ್ ವಿರುದ್ಧ 3 ಲಕ್ಷ ರೂ. ದಂಡ ವಿಧಿಸಿದೆ.

ಮಾಹಿತಿ ನೀಡುವಲ್ಲಿ ವಿಳಂಬದ ಆರೋಪ : 
ಮೂಲಗಳ ಪ್ರಕಾರ, ಪ್ರಿವೆಂಶನ್ ಆಫ್ ಇನ್ ಸೈಡರ್ ಟ್ರೇಡಿಂಗ್ ರೂಲ್ಸ್ ಅಡಿಯಲ್ಲಿ , ಶಿಲ್ಪಾ ಶೆಟ್ಟಿ (Shilpa Shetty) ಮತ್ತು ರಾಜ್ ಕುಂದ್ರಾ ಅವರ ಮೇಲೆ ಸೆಬಿ ಈ ಕ್ರಮ ಕೈಗೊಂಡಿದೆ. ಪ್ರಿಫರೆಂಶಿಯಲ್ ಅಲಾಟ್ ಮೆಂಟ್ ಮಾಹಿತಿ ನೀಡುವಲ್ಲಿ ವಿಳಂಬವಾದ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ದಂಡವನ್ನು ಪಾವತಿಸಲು ದಂಪತಿಗೆ 45 ದಿನಗಳ ಕಾಲಾವಕಾಶ ನೀಡಲಾಗಿದೆ.

ಇದನ್ನೂ ಓದಿ : GR in VR: ‘ವಿಕ್ರಾಂತ್ ರೋಣ’ದ ಜಾಕ್ವೆಲಿನ್ ಫರ್ನಾಂಡಿಸ್ ಫಸ್ಟ್ ಲುಕ್ ರಿಲೀಸ್..!

ವಹಿವಾಟಿನ ವಿವರಗಳನ್ನು ಸಮಯಕ್ಕೆ ಸರಿಯಾಗಿ ನೀಡದ ಆರೋಪ : 
ಮಾಹಿತಿಯ ಪ್ರಕಾರ, 2015 ರಲ್ಲಿ 2.57 ಕೋಟಿ ರೂ.ಗಳ ಮೌಲ್ಯದ ಷೇರುಗಳ ಪ್ರಿಫರೆಂಶಿಯಲ್ ಅಲಾಟ್ ಮೆಂಟ್ ಮಾಡಲಾಗಿತ್ತು. ಆ ಸಮಯದಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಷೇರುಗಳು ಇದ್ದವು. ಆದ್ದರಿಂದ ಇದರ ಬಹಿರಂಗಪಡಿಸುವಿಕೆ ಅಗತ್ಯವಾಗಿತ್ತು. ನಿಯಮಗಳ ಪ್ರಕಾರ, ವಹಿವಾಟಿನ 2 ದಿನಗಳಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ (Raj Kundra) ಅದನ್ನು  ಬಹಿರಂಗಪಡಿಸಬೇಕಾಗಿತ್ತು ಆದರೆ 2019 ರ ಮೇನಲ್ಲಿ ಇದರ ಡಿಸ್ಕೋಸರ್ ಮಾಡಲಾಗಿದೆ. 

ಇಬ್ಬರಿಗೂ 2.57 ಲಕ್ಷ ಷೇರು : 
ಒಟ್ಟು ಐದು ಲಕ್ಷ ಷೇರುಗಳಲ್ಲಿ 2.57 ಲಕ್ಷ ಷೇರುಗಳನ್ನು ಇಬ್ಬರಿಗೂ ನೀಡಲಾಗಿದೆ. ಇಬ್ಬರಿಗೂ ಕಂಪನಿಯ 1.28 ಲಕ್ಷ -1.28 ಲಕ್ಷ ಆದ್ಯತೆಯ ಷೇರುಗಳನ್ನು ನೀಡಲಾಗಿದೆ. ವಿಯಾನ್ ಇಂಡಸ್ಟ್ರೀಸ್ನಲ್ಲಿ (viaan industries) 25.76-25.76% ಷೇರಿನಂತೆ ಒಟ್ಟು 51.51% ಪಾಲನ್ನು ಪಡೆದಿದ್ದಾರೆ. 

ಇದನ್ನೂ ಓದಿ : Pornography case: ಮಾಡೆಲ್, ನಟಿ ಗೆಹಾನಾ ವಸಿಷ್ಠ ಸೇರಿ ಮೂವರಿಗೆ ಮುಂಬೈ ಕ್ರೈ ಬ್ರಾಂಚ್ ಸಮನ್ಸ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News