Sapthami Gowda: ರಶ್ಮಿಕಾ-ಶ್ರೀಲೀಲಾ ನಡುವೆ ಕಾಂತಾರ ಚೆಲುವೆ ಎಂಟ್ರಿ: ಶುರುವಾಯ್ತು ಹೊಸ ಪೈಪೋಟಿ!

Sapthami Gowda in Telugu Film : ಅನೇಕ ನಟ ನಟಿಯರು ಕನ್ನಡ ಸಿನಿಮಾಗಳಿಂದ ಜನಪ್ರಿಯತೆ ಗಳಿಸಿ ಪರಭಾಷೆಗಳ ಸಿನಿಮಾಗಳತ್ತ ಹಾರಿಬಿಡುತ್ತಾರೆ. ಇದೀಗ ಕಾಂತಾರ ಸುಂದರಿ ಸಪ್ತಮಿ ಗೌಡ ಸಹ ಬೇರೆ ಭಾಷೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಆದ್ದರಿಂದ ರಶ್ಮಿಕಾ ಮಂದಣ್ಣ-ಶ್ರೀಲೀಲಾ ನಡುವೆ ಸಪ್ತಮಿ ಗೌಡ ಎಂಟ್ರಿ ಕೊಟ್ಟು ಹೊಸ ಸ್ಪರ್ಧೆಗೆ ಅಡಿಪಾಯ ಹಾಕಿದ್ದಾರೆ ಎನ್ನಲಾಗುತ್ತಿದೆ.  

Written by - Savita M B | Last Updated : Aug 31, 2023, 01:20 PM IST
  • ರಿಷಬ್‌ ಶೆಟ್ಟಿ ಅವರಿಗೆ ಜೋಡಿಯಾಗಿ ನಟಿಸಿ ಹೆಚು ಜನಪ್ರಿಯತೆ ಪಡೆದುಕೊಂಡ ನಟಿ ಸಪ್ತಮಿಗೌಡ
  • ಲೀಲಾ ಪಾತ್ರದಿಂದ ಕನ್ನಡಿಗರು ಮಾತ್ರವಲ್ಲದೇ ಪರಭಾಷೆಯವರಿಗೂ ಹತ್ತಿರವಾದ ಮೂಗುತಿ ಸುಂದರಿ
  • ಈಗಾಗಲೇ ವ್ಯಾಕ್ಸಿನ್‌ ವಾರ್‌ ಎನ್ನುವ ಸಿನಿಮಾ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ.
Sapthami Gowda: ರಶ್ಮಿಕಾ-ಶ್ರೀಲೀಲಾ ನಡುವೆ ಕಾಂತಾರ ಚೆಲುವೆ ಎಂಟ್ರಿ: ಶುರುವಾಯ್ತು ಹೊಸ ಪೈಪೋಟಿ! title=

Sapthami Gowda : ರಿಷಬ್‌ ಶೆಟ್ಟಿ ಅವರಿಗೆ ಜೋಡಿಯಾಗಿ ನಟಿಸಿ ಹೆಚು ಜನಪ್ರಿಯತೆ ಪಡೆದುಕೊಂಡ ಸಪ್ತಮಿಗೌಡ ಅವರಿಗೆ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಲೀಲಾ ಪಾತ್ರದಿಂದ ಕನ್ನಡಿಗರು ಮಾತ್ರವಲ್ಲದೇ ಪರಭಾಷೆಯವರಿಗೂ ಹತ್ತಿರವಾದ ಮೂಗುತಿ ಸುಂದರಿ ಈಗಾಗಲೇ ವ್ಯಾಕ್ಸಿನ್‌ ವಾರ್‌ ಎನ್ನುವ ಸಿನಿಮಾ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. 

'ಪಾಪ್‌ಕಾರ್ನ್ ಮಂಕಿ ಟೈಗರ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಪ್ತಮಿ ಗೌಡ ವಿದೇಶದಲ್ಲಿ ಓದುವ ಕನಸು ಕಂಡಿದ್ದರಂತೆ. ನಂತರ ಕಾಂತಾರ ಸಿನಿಮಾದಲ್ಲಿ ನಟಿಸುವ ಮೂಲಕ ಅವರ ನಸೀಬೇ ಬದಲಾಯಿತು. ಇದೀಗ ಸಾಲು ಸಾಲು ಸಿನಿಮಾ ಅವಕಾಶಗಳು ಅವರಿಗೆ ಒಲಿದು ಬರುತ್ತಿವೆ. ವ್ಯಾಕ್ಸಿನ್‌ ವಾರ್‌ ಹೊರತುಪಡಿಸಿ ಕನ್ನಡ 3 ಸಿನಿಮಾಗಳು ಈ ಚೆಲುವೆಯ ಕೈಯಲ್ಲಿವೆ. 

ಇದನ್ನೂ ಓದಿ-ದರ್ಶನ್‌ ʼತಂಗಿಗಾಗಿʼ ಚಿತ್ರ ನಟಿ ಪೂನಂ ಬಾಜ್ವಾ ಹಾಟ್‌ ಫೋಟೋಸ್‌ ವೈರಲ್‌..!

ಸದ್ಯ ನಟಿ ಯುವರಾಜ್‌ಕುಮಾರ್‌ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಅಭಿಷೇಕ ಅಂಬರೀಶ್‌ ಜೊತೆಯಾಗುವ ಕಾಳಿ ಸಿನಿಮಾ ಸಹ ಕನ್ಫರ್ಮ್‌ ಆಗಿದೆ. ಇನ್ನು ಇದೆಲ್ಲದರ ನಡುವೆ ಕಿಸ್‌ ಬೆಡಗಿ ಶ್ರೀಲೀಲಾ ತೆಲುಗು ಸಿನಿರಂಗಕ್ಕೆ ಕಾಲಿಡಲಿದ್ದಾರೆ. 

ಇನ್ನು ನಿತಿನ್‌ ನಾಯಕನಾಗಲಿರುವ 'ತಮ್ಮುಡು' ಚಿತ್ರಕ್ಕೆ ಸಪ್ತಮಿ ನಾಯಕಿಯಾಗಲಿದ್ದಾರೆ. ಇನ್ನು ಕಾಂತಾರ ಪ್ರಮೋಷನ್‌ ಸಂದರ್ಭದಲ್ಲಿ ತೆಲುಗು ಜನರಿಗೂ ಚಿರಪರಿಚಿತರಾದ ನಟಿ ಇದೀಗ ಒಂದು ಸ್ಟ್ರೈಟ್ ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ  ಡೆಬ್ಯೂ ಮಾಡುತ್ತಿದ್ದಾರೆ

ಇತ್ತೀಚೆನ ದಿನಗಳಲ್ಲಿ ಕನ್ನಡದ ನಟಿಯರು ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಮೊದಲು ರಶ್ಮಿಕಾ ಮಂದಣ್ಣ ಹೆಸರು ಸೌಂಡ್‌ ಮಾಡುತ್ತಿತ್ತು. ಬಳಿಕ ಶ್ರೀಲೀಲಾ ಹೆಸರು ಸದ್ದು ಮಾಡುತ್ತಿದೆ. ಈ ನಡುವೆ ಸಪ್ತಮಿ ಗೌಡ ಸಹ  ತೆಲುಗಿನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ. 

ಇದನ್ನೂ ಓದಿ-ಹೊಲಗೇರಿ ಪದ ಬಳಕೆ : ನಟ ಉಪೇಂದ್ರ ಮೇಲೆ ಸಾಕ್ಷಿ ನಾಶ ಮತ್ತು ಸಂಧಾನಕ್ಕೆ ಯತ್ನ ಆರೋಪ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News